SUV ಕಾರುಗಳಲ್ಲಿ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರ XUV500 ಕಾರುಗಳ ನಡುವೆ ಭಾರಿ ಪೈಪೋಟಿ ಇದೆ. ಈ ಮೂರು ಕಾರುಗಳಲ್ಲಿ ಗ್ರಾಹಕರ ಮೊದಲ ಆಯ್ಕೆ ಯಾವುದು?
ನವದೆಹಲಿ(ಮಾ.16): ಭಾರತದಲ್ಲಿ SUV ಕಾರುಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಮಹೀಂದ್ರ XUV500ಗೆ ಪ್ರತಿಸ್ಪರ್ಧಿಯಾಗಿ ಜೀಪ್ ಕಂಪಾಸ್ ಕಾರು ಬಿಡುಗಡೆಯಾದರೆ, ಇವರೆಡು ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್ ಬಿಡುಗಡೆಯಾಗಿದೆ. ಇದೀಗ ಈ ಮೂರು ಕಾರುಗಳಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಹಾಗೂ ಗ್ರಾಹಕರ ಮೊದಲ ಆಯ್ಕೆ ಯಾವುದು ಅನ್ನೋ ಅಂಕಿ ಅಂಶ ಬಹಿರಂಗವಾಗಿದೆ.
undefined
ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ - ಹೊಸ ಅವತಾರದಲ್ಲಿ ಮಾರುತಿ ಅಲ್ಟೋ!
ಫೆಬ್ರವರಿಯಲ್ಲಿ ಮಾರಾಟವಾದ ಕಾರುಗಳಲ್ಲಿ ಟಾಟಾ ಹ್ಯಾರಿಯರ್ ಕಾರು, ಜೀಪ್ ಕಂಪಾಸ್ ಕಾರನ್ನು ಹಿಂದಿಕ್ಕಿದೆ. ಆದರೆ ಮಹೀಂದ್ರ XUV500 ಕಾರು ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಫೆಬ್ರವರಿಯಲ್ಲಿ ಟಾಟಾ ಹ್ಯಾರಿಯರ್ 1,449 ಕಾರುಗಳು ಮಾರಾಟವಾಗಿದೆ. ಇನ್ನು ಜೀಪ್ ಕಂಪಾಸ್ 1,304 ಕಾರುಗಳು ಮಾರಾಟವಾಗಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲಿ ಗರಿಷ್ಠ ಮಾರಾಟವಾದ ಸಣ್ಣ ಕಾರು- ಇಲ್ಲಿದೆ ಲಿಸ್ಟ್!
ಮೊದಲ ಸ್ಥಾನದಲ್ಲಿರುವ ಮಹೀಂದ್ರ XUV500 ಕಾರು 1,806 ಕಾರುಗಳು ಮಾರಾಟವಾಗಿದೆ. ಟಾಟಾ ಹ್ಯಾರಿಯರ್ ಕಾರಿನ ಬೆಲೆ 12.69 ಲಕ್ಷ ರೂಪಾಯಿಯಿಂದ ಆರಂಭವಾಗಲಿದ್ದು, ಟಾಪ್ ಮಾಡೆಲ್ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮಹೀಂದ್ರ XUV500 ಬೆಲೆ 12.79 ಲಕ್ಷ ರೂಪಾಯಿಂದ 19.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಜೀಪ್ ಕಂಪಾಸ್ ಬೆಲೆ 15.45 ಲಕ್ಷ ರೂಪಾಯಿಂದ 22.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).