2019ರ ದೀಪಾವಳಿಗೆ ಬಜಾಜ್‌ನಿಂದ ಬಂಪರ್ ಕೊಡುಗೆ!

By Web Desk  |  First Published Feb 12, 2019, 4:55 PM IST

ದೀಪಾವಳಿ ಹಬ್ಬಕ್ಕೆ ಬಜಾಜ್ ಆಟೋ ಗ್ರಾಹಕರಿಗೆ ಸಿಹಿ ನೀಡಲು ಮುಂದಾಗಿದೆ. ಮುಂಬರುವ ದೀಪಾಳಿಗೆ ಭಾರತದಲ್ಲಿ ಹೊಸ ಸಂಚಲನ ಮೂಡಿಸಲು ರೆಡಿಯಾಗಿದೆ. 2019ರ ದೀಪಾವಳಿ ಹಬ್ಬಕ್ಕೆ ಬಜಾಜ್ ಕೊಡುಗೆ ಏನು? ಇಲ್ಲಿದೆ ವಿವರ.


ಮುಂಬೈ(ಫೆ.12): ಬಜಾಜ್ ಆಟೋ ಮುಂಬರುವ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. 2019ರ ದೀಪಾವಳಿಗೆ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. ಈ ಮೂಲಕ ಬಜಾಜ್ ಮತ್ತೆ ಸ್ಕೂಟರ್ ಉತ್ಪಾದನೆಗೆ ಇಳಿಯಲು ಮುಂದಾಗಿದೆ.

ಇದನ್ನೂ ಓದಿ: ಹೈದರಾಬಾದ್, ಶಬರಿಮಲೆ, ಲಕ್ನೋದಲ್ಲಿ ಎಲೆಕ್ಟ್ರಿಕ್ ಬಸ್ - ಬೆಂಗಳೂರಲ್ಲಿ ಯಾವಾಗ?

Tap to resize

Latest Videos

undefined

ನೂತನ ಎಲೆಕ್ಟ್ರಿಕ್ ಸ್ಕೂಟರ್‍‌ಗೆ ಬಜಾಜ್ ಅರ್ಬನೈಟ್ ಎಂದು ಹೆಸರಿಡಲಾಗಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನದಲ್ಲಿ ಅಗ್ರಗಣ್ಯನಾಗಿರುವ ಟೆಸ್ಲಾಗೆ ಸರಿಸಾಟಿಯಾಗಲಿದೆ ಎಂದು ಬಜಾಜ್ ಚೇರ್ಮೆನ್ ರಾಜೀವ್ ಬಜಾಜ್ ಹೇಳಿದ್ದಾರೆ. 

ಇದನ್ನೂ ಓದಿ: ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸದ್ಯ ಬೆಂಗಳೂರಿನ ಎದರ್ ಎನರ್ಜಿ ಬಿಡುಗಡೆ ಮಾಡಿರುವ ಎದರ್ ಸ್ಕೂಟರ್ ಹೆಚ್ಚು ಜನಪ್ರಿಯವಾಗಿದೆ. ಇಷ್ಟೇ ಇದು ಭಾರತೀಯ ಮೂಲದ ಹಾಗೂ ಭಾರತದಲ್ಲೇ ನಿರ್ಮಾಣವಾದ ಎಲೆಕ್ಟ್ರಿಕ್ ಸ್ಕೂಟರ್. ಇದೀಗ ಬಜಾಜ್ ಕೂಡ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ: ಗೇರ್ ಲಿವರ್ ಬದಲು ಬಿದಿರಿನ ಕೋಲು ಬಳಕೆ- ಸ್ಕೂಲ್ ಬಸ್ ಚಾಲಕ ಬಂಧನ!

ಎದರ್ ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಆದರೆ ಬಜಾಜ್ ದೇಶದ ಎಲ್ಲಾ ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.  ಸದ್ಯ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಮಾಡೆಲ್ ಅಥವಾ ಸ್ಕೆಚ್ ಬಿಡುಗಡೆ ಮಾಡಿಲ್ಲ. ಇಷ್ಟೇ ಅಲ್ಲ, ಮೈಲೇಜ್, ಚಾರ್ಚಿಂಗ್ ಹಾಗೂ ಬೆಲೆ ಕುರಿತು ಯಾವುದೇ ಮಾಹಿತಿ ಹೊರಹಾಕಿಲ್ಲ. 
 

click me!