ಹೊಸ ವರ್ಷದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಸ್ಕೂಟರ್

Published : Jan 01, 2019, 03:37 PM ISTUpdated : Jan 01, 2019, 03:43 PM IST
ಹೊಸ ವರ್ಷದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಸ್ಕೂಟರ್

ಸಾರಾಂಶ

ಹೊಸ ವರ್ಷದಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗಲಿದೆ. ಇದೀಗ ಅವನ್ ಮೋಟಾರ್ಸ್ 6 ಹೊಸ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ವಿಶೇಷ ಅಂದರೆ 45 ಸಾವಿರ ಸೂಪಾಯಿ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.  

ನವದೆಹಲಿ(ಜ.01): ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪೆನಿ ಅವನ್ ಮೋಟಾರ್ಸ್ ಹೊಸ ವರ್ಷದಲ್ಲಿ ಒಟ್ಟು 6 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಜನವರಿಯಿಂದ ಪ್ರತಿ ತಿಂಗಳು ಒಂದೊಂದು ಸ್ಕೂಟರ್ ಕಾರು ಬಿಡುಗಡೆ ಮಾಡಲಿದೆ. ವಿಶೇಷ ಅಂದರೆ ಬೆಲೆ 45,000 ರೂಪಾಯಿಂದ ಆರಂಭಗೊಳ್ಳಲಿದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

ಮುಂದಿನ 2-3 ವರ್ಷಗಳಲ್ಲಿ 1 ಲಕ್ಷ ಸ್ಕೂಟರ್ ಬಿಡುಗಡೆ ಮಾಡಲು ಅವನ್ ಮೋಟಾರ್ಸ್ ಪ್ಲಾನ್ ರೆಡಿ ಮಾಡಿದೆ. ಈಗಾಗಲೇ ಅವನ್ ಮೋಟಾರ್ಸ್ ಲಿಥಿಯಂ ಬ್ಯಾಟರಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ಇದೀಗ ಹೊಸ ವರ್ಷದಲ್ಲಿ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕ್ಲಾಸಿಕ್ ಬೈಕ್ ಯಾವುದು?

ಒಂದು ಬಾರಿ ಚಾರ್ಚ್ ಮಾಡಿದರೆ ಗರಿಷ್ಠ 100 ಕಿ.ಮೀ ಪ್ರಯಾಣ ಮಾಡಬಹುದಾದ ಸ್ಕೂಟರ್‌ಗಳನ್ನ ಅಭಿವೃದ್ದಿ ಪಡಿಸಲಾಗಿದೆ. ನೂತನ ಸ್ಕೂಟರ್ ಗರಿಷ್ಠ ವೇಗ 45 ಕಿ.ಮೀ. ಪುಣೆಯಲ್ಲಿರುವ ತಯಾರಿಕಾ ಘಟಕದಲ್ಲಿ ನೂತನ ಅವನ್ ಸ್ಕೂಟರ್ಸ್ ರೆಡಿಯಾಗುತ್ತಿದೆ. ಇದೇ ತಿಂಗಳಲ್ಲಿ ಹೊಸ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ