2019ರಲ್ಲಿ ಬಹುನಿರೀಕ್ಷಿತ ಕಾರುಗಳು ಬಿಡುಗಡೆಯಾಗುತ್ತಿದೆ. ಅದರಲ್ಲೂ ಕಡಿಮೆ ಬೆಲೆಯ ಕಾರುಗಳು ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳು ಕೂಡ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಇಲ್ಲಿದೆ ಈ ವರ್ಷ ಬಿಡುಗಡೆಯಾಗಲಿರುವ ಹ್ಯಾಚ್‌ಬ್ಯಾಕ್ ಕಾರುಗಳ ವಿವರ.
ಬೆಂಗಳೂರು(ಜ.01): ಹೊಸ ವರ್ಷದ ಸಂಭ್ರಮದಲ್ಲಿರುವ ಜನತೆಗೆ ಭಾರತದ ಆಟೋಮೊಬೈಲ್ ಕ್ಷೇತ್ರ ಮತ್ತಷ್ಟು ಸಿಹಿ ಸುದ್ದಿ ನೀಡಿದೆ. ಈ ವರ್ಷ ಮಾರುತಿ ಸುಜುಕಿ, ಫೋರ್ಡ್, ಹ್ಯುಂಡೈ ಸೇರಿದಂತೆ ಪ್ರಮುಖ ಕಾರು ಕಂಪೆನಿಗಳು ಹೊಸ ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಕಾರುಗಳು 2019ರಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿದೆ.
ಮಾರುತಿ ವ್ಯಾಗನ್‌ಆರ್
undefined
ಬಿಡುಗಡೆ: 23 ಜನವರಿ, 2019
ಬೆಲೆ: 4.10 - 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಫೋರ್ಡ್ ಫಿಗೋ
ಬಿಡುಗಡೆ: ಮಾರ್ಚ್, 2019
ಬೆಲೆ: 4.75 - 7.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟ ಟಿಯಾಗೋ
ಬಿಡುಗಡೆ: ಮೇ, 2019
ಬೆಲೆ: 6 - 9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಗ್ರ್ಯಾಂಡ್ ಐ10
ಬಿಡುಗಡೆ: ಆಗಸ್ಟ್, 2019
ಬೆಲೆ: 4.9 - 7.52 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟಾ 45X
ಬಿಡುಗಡೆ: ಸೆಪ್ಟೆಂಬರ್, 2019
ಬೆಲೆ: 5 ಲಕ್ಷ - 8.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ನಿಸಾನ್ ಲೀಫ್ ಎಲೆಕ್ಟ್ರಿಕ್
ಬಿಡುಗಡೆ: ಎಪ್ರಿಲ್, 2019
ಬೆಲೆ: 30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)