ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಬಿಡುಗಡೆ ದಿನಾಂಕ ಬಹಿರಂಗ!

By Suvarna NewsFirst Published Jul 13, 2020, 7:55 PM IST
Highlights

ನ್ಯೂ ಜನರೇಶನ್ ಆಡಿ 7 RS7 ಸ್ಪೋರ್ಟ್ಸ್‌ಬ್ಯಾಕ್ ಕಾರು ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಜರ್ಮನ್ ಆಟೋಮೇಕರ್ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.
 

ನವದೆಹಲಿ(ಜು.13): ಎರಡನೇ ಜನರೇಶನ್ ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಕಾರು ಜುಲೈ 16 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಬಲಿಷ್ಠ ಎಂಜಿನ್ ಹಾಗೂ ಪರ್ಫಾಮೆನ್ಸ್ ಶಕ್ತಿಯುಳ್ಳ ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಕಾರು 100 ಕಿ.ಮೀ ವೇಗವನ್ನು ಕೇವಲ 3.6 ಸೆಕೆಂಡ್‌ಗಳಲ್ಲಿ ತಲಪಪಲಿದೆ. ಕಾರಿನ ಬುಕಿಂಗ್ ಕೂಡ ಆರಂಭಿಸಲಾಗಿದೆ. 10 ಲಕ್ಷ ರೂಪಾಯಿ ನೀಡಿ ಈ ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಕಾರನ್ನು ಬುಕ್ ಮಾಡಿಕೊಳ್ಳಬಹುದು.

ಆಡಿ Q8 ಕಾರು ಬಿಡುಗಡೆ; ಮೊದಲ ಕಾರು ಖರೀದಿಸಿದ ವಿರಾಟ್ ಕೊಹ್ಲಿ!

ಮುಂದಿನ ತಿಂಗಳಿನಿಂದ ಬುಕ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿಯಾಗಲಿದೆ. ಆಡಿ A7 ಸೆಡಾನ್ ಕಾರಿನಿಂದ ಸ್ಪೂರ್ತಿ ಪಡೆದಿರುವ ನೂತನ ಆಡಿ RS7 ಸ್ಪೋರ್ಟ್ಸ್‌ಬ್ಯಾಕ್ ಕಾರು ದೊಡ್ಡದಾದ ಏರ್ ಡ್ಯಾಮ್ಸ್, LED ಟೈಲ್‌ಲೈಟ್ ಕ್ಲಸ್ಟರ್, 21 ಇಂಚಿನ ಅಲೋಯ್ ವೀಲ್ ಹಾಗೂ ಎರಡು ಓವಲ್ ಶೇಪ್ ಎಕ್ಸ್‌ಹಾಸ್ಟ್ ಹೊಂದಿದೆ.

 

Indian roads get a fast charge on July 16th. pic.twitter.com/Ivki6YAYRt

— Audi India (@AudiIN)

ಲೆದರ್ ಪಾಲಿಶಿಂಗ್ ಇಂಟಿರಿಯರ್, ಡ್ಯುಯೆಲ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಡಿ ವರ್ಚುವಲ್ ಕಾಕ್‌ಪಿಟ್, 4 ಝೋನ್ ಕ್ಲೈಮೇಟ್ ಕಂಟ್ರೋಲ್, RS ಗ್ರಾಫಿಕ್ಸ್ ಡಿಸೈನ್ ನೀಡಲಾಗಿದೆ. 4.0 ಲೀಟರ್, ಟ್ವಿನ್ ಟರ್ಬೋಚಾರ್ಜಡ್ v8 ಎಂಜಿನ್, 48v ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಹೊಂದಿದೆ. ಶಕ್ತಿಶಾಲಿ ಎಂಜಿನ್  591 bhp ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ನೂತನ  ಆಡಿ 7 RS7 ಸ್ಪೋರ್ಟ್ಸ್‌ಬ್ಯಾಕ್ ಕಾರಿನ ಗರಿಷ್ಠ ವೇಗ 250 ಕಿಲೋಮೀಟರ್ ಪ್ರತಿ ಗಂಟೆಗೆ. ನೂತನ ಕಾರಿನ ಬೆಲೆ 1.5 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  

click me!