ಸೀಟ್ ಕಾರು ಕಂಪನಿಯಿಂದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

By Web DeskFirst Published Nov 25, 2019, 5:57 PM IST
Highlights

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಆವಿಷ್ಕಾರಗಳು ನಡೆಯುತ್ತಿವೆ. ಇದೀಗ ಸೀಟ್ ಕಂಪನಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಈ ಸ್ಕೂಟರ್‌ನ  ಹೊಸ ವಿನ್ಯಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಪೇನ್(ನ.25): ಸ್ಪಾನೀಶ್ ಕಾರು ತಯಾರಕ ಕಂಪನಿ ಸೀಟ್ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದೆ. ಭವಿಷ್ಯದ ವಾಹನ ತಯಾರಿಕೆಗೆ ಸೀಟ್ ಆಟೋಮೊಬೈಲ್ ಕೈಹಾಕಿದೆ. ಇದೀಗ ಸೀಟ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಕಾನ್ಸೆಪ್ಟ್ ಅನಾವರಣ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿರುವ ಈ ಸ್ಕೂಟರ್ ಎಲ್ಲರ ಗಮನಸೆಳೆಯುತ್ತಿದೆ.

ಇದನ್ನೂ ಓದಿ: ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!

ಸೀಟ್  ಹಾಗೂ ಬಾರ್ಸಿಲೋನಾ ಕಂಪನಿ ಸೈಲೆನ್ಸ್ ಜೊತೆಗೂಡಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಲಾಗಿದೆ. ಇ-ಸ್ಕೂಟರ್‌ನಲ್ಲಿ 7kW ಮೋಟಾಕ್ ಬಳಕೆ ಮಾಡಲಾಗಿದೆ.  ಗರಿಷ್ಠ 11kW ಪವರ್ ಉತ್ಪಾದಿಸಲಿದೆ. . 240Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 115 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.

ಇದನ್ನೂ ಓದಿ: ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!

ಸೀಟ್ ಸ್ಕೂಟರ್ ಗರಿಷ್ಠ ವೇಗ 100 ಕಿ.ಮಿ. ಕಾನ್ಸೆಪ್ಟ್ ಸ್ಕೂಟರ್ ಅನಾವರಣ ಮಾಡಿರುವ ಸೀಟ್, 2020ರಲ್ಲಿ ಸ್ಕೂಟರ್ ಬಿಡುಗಡೆ ಮಾಡಲಿದೆ. ಸೀಟ್ ಫೋಕ್ಸ್‌ವ್ಯಾಗನ್ ಗ್ರೂಪ್ ಕಂಪನಿಯ ಭಾಗವಾಗಿದೆ.  ಸ್ಕೂಟರ್‌ನ ಕುಳಿತುಕೊಳ್ಳುವ ಸೀಟಿನ ಕೆಳಗಡೆ ಹೆಲ್ಮೆಟ್ ಇಡಲು ಸ್ಥಳವಕಾಶ ನೀಡಲಾಗಿದೆ.

click me!