ಆರ್ಕ್ ವೆಕ್ಟರ್ ಕಂಪೆನಿ ನೂತನ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಬೈಕ್ ಬೆಲೆ 82 ಲಕ್ಷ ರೂಪಾಯಿ. ಅಷ್ಟಕ್ಕೂ ಈ ಬೈಕ್‌ಗೆ ದುಬಾರಿ ಬೆಲೆ ಯಾಕೆ? ಇಲ್ಲಿದೆ ವಿವರ.
ಕ್ಯಾಲಿಫೋರ್ನಿಯಾ(ಜ.01): ಆರ್ಕ್ ವೆಕ್ಟರ್ ಕಂಪೆನಿ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್ ಪರಚಯಿಸಿದೆ. 2018ರ ಮಿಲಾನ್ ಮೋಟಾರ್ ಶೋನಲ್ಲಿ ಆರ್ಕ್ ವೆಕ್ಟರ್ ಕಂಪೆನಿ ಹೊಚ್ಚ ಹೊಸ, ಕಲ್ಪನೆಗೂ ಮೀರಿದ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿತ್ತು. ಈ ಬೈಕ್ ಬೆಲೆ ಬರೋಬ್ಬರಿ 82 ಲಕ್ಷ ರೂಪಾಯಿ.
undefined
ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!
399 ವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್ 140PS ಪವರ್, 85nm ಪೀಕ್ ಟಾರ್ಕ್ ಉತ್ವಾದಿಸಲಿದೆ. ಅತ್ಯಾಕರ್ಷ ವಿನ್ಯಾಸ ಈ ಬೈಕ್‌ನ ಪ್ರಮುಖ ಆಕರ್ಷಣೆ. ವಿಶೇಷ ಅಂದರೆ ಈ ಬೈಕ್ ವಿನ್ಯಾಸ, ಪರಿಕಲ್ವನೆ, ಎಂಜಿನ್ ಸೇರಿದಂತೆ ಇದರ ರೂವಾರಿ ಮಾರ್ಕ್ ಟ್ರೂಮಾನ್.
ಇದನ್ನೂ ಓದಿ: ಹೊಸ ವರ್ಷದಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಸ್ಕೂಟರ್
ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೊಬೈಲ್ ಕಂಪೆನಿಯ ಮುಖ್ಯಸ್ಥರಾಗಿದ್ದ ಮಾರ್ಕ್ ಟ್ರೂಮಾನ್ ಈ ಬೈಕ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ದುಬಾರಿ ಬೆಲೆ ನೀಡುವಷ್ಟು ಇದರಲ್ಲಿ ಏನಿದೆ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುವುದ ಸಹಜ. ಇದಕ್ಕೆ ಕಂಪೆನಿ ಕೆಲ ಅಂಶಗಳನ್ನ ಪಟ್ಟಿ ಮಾಡಿದೆ.
ಇದನ್ನೂ ಓದಿ: ಪೊಲೀಸರ ರಣತಂತ್ರ: ರಾಂಗ್ ಸೈಡ್ ಹೋದರೆ ಪಂಚರ್!
0-100 ಕಿ.ಮೀಗೆ ಈ ಬೈಕ್ ತೆಗೆದುಕೊಳ್ಳೋ ಸಮಯ 3 ಸೆಕೆಂಡಗಳು ಮಾತ್ರ. ಈ ಬೈಕ್‌ನ ಗರಿಷ್ಠ ವೇಗ 200 kmph. 30 ನಿಮಿಷ ಚಾರ್ಜ್ ಮಾಡಿದರೆ ಸಾಕು, 320 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನ ಈ ಬೈಕ್‌ನಲ್ಲಿ ಬಳಸಿಕೊಳ್ಳಲಾಗಿದೆ. ನಾವಿಗೇಶನ್ ವೈಫೈ, ಅಲರ್ಟ್ ಸೇರಿದಂತೆ ಹಲವು ಫೀಚರ್ಸ್‌ಗಳು ಈ ಬೈಕ್‌ನಲ್ಲಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: