ಭಾರತದಲ್ಲಿ ಎಲೆಕ್ಟ್ರಿಕ್ ವಾಹಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಅ್ಯಂಪರ್ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಪ್ರತಿ ಕಿಲೋಮಿಟರ್‌ಗೆ 15 ಪೈಸೆ ವೆಚ್ಚವಾಗಲಿದೆ. ಅತೀ ಕಡಿಮೆ ನಿರ್ವಹಣೆ ವೆಚ್ಚ ಹೊಂದಿರುವ ಆ್ಯಂಪರ್ ಮಾಗ್ನಸ್ ಸ್ಕೂಟರ್ ವಿವರ ಇಲ್ಲಿದೆ.
ನವದೆಹಲಿ(ಜೂ.15): ಆ್ಯಂಪರ್ ಗ್ರೇವೆಸ್ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಪೆಟ್ರೋಲ್ ಸ್ಕೂಟರ್ ಶೈಲಿಯನ್ನೇ ಹೋಲುವ ಮಾಗ್ನಸ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಮೂಲಕ ಪ್ರತಿ ಕಿಲೋಮೀಟರ್‌ಗೆ ತಗುಲುವ ವೆಚ್ಚ ಕೇವಲ 15 ಪೈಸೆ. ನೂತನ ಸ್ಕೂಟರ್ ಬೆಂಗಳೂರಿನಲ್ಲಿ ಲಭ್ಯವಿದೆ.
ಲಾಕ್‌ಡೌನ್ ಆಫರ್; ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಉಚಿತ!..
ನೂತನ ಆ್ಯಂಪರ್ ಮ್ಯಾಗ್ನಸ್ ಪ್ರೋ ಸ್ಕೂಟರ್ ಬೆಲೆ 73,990 ರೂಪಾಯಿ(ಎಕ್ಸ್ ಶೋ ರೂಂ). ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ ಬುಕಿಂಗ್ ಕೂಡ ಆರಂಭಿಸಲಾಗಿದೆ. ಇನ್ನು 30 ದಿನಗಲ್ಲಿ ದೇಶದ ಇತರ ನಗರಗಳಲ್ಲಿಯೂ ಆ್ಯಂಪರ್ ಮ್ಯಾಗ್ನಸ್ ಸ್ಕೂಟರ್ ಬಿಡುಗಡೆಯಾಗಲಿದೆ.
ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿದರೆ, ಇಕೋ ಮೂಡ್ 100 ಕೀ.ಮಿ ಮೈಲೇಜ್ ನೀಡಿದರೆ, ಕ್ರ್ಯೂಸ್ ಮೂಡ್‌ನಲ್ಲಿ 80 ಕಿ.ಮೀ ಮೈಲೇಜ್ ನೀಡಲಿದೆ. 0 ಯಿಂದ 40 ಕಿಲೋಮೀಟರ್ ವೇಗಕ್ಕೆ 10 ಸೆಕೆಂಡ್ ತೆಗೆದುಕೊಳ್ಳಲಿದೆ. ಆ್ಯಂಪರ್ ಮಾಗ್ನಸ್ ಪ್ರೋ ಸ್ಕೂಟರ್ ಗರಿಷ್ಠ ವೇಗ 55 kmph.
LED ಲೈಟ್, ಕೀ ಲೆಸ್ ಎಂಟ್ರಿ, ಆ್ಯಂಟಿ ಥೆಫ್ಟ್ ಅಲರಾಂ, CBS ಬ್ರೇಕಿಂಗ್ ಸಿಸ್ಟಮ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ. ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಕೂಡ ನೀಡಲಾಗಿದೆ. ಪ್ರತಿ ದಿನ 100 ರೂಪಾಯಿ ಇಎಂಐ ಸೌಲಭ್ಯವೂ ಲಭ್ಯವಿದೆ.