ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!

By Suvarna NewsFirst Published Jun 15, 2020, 2:23 PM IST
Highlights

ಭಾರತದಲ್ಲಿ ಹಲವು ಕಾರುಗಳು ಜನಪ್ರಿಯವಾಗಿದೆ. ಈ ವರ್ಷ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಕಳೆದ 15 ವರ್ಷಗಳಿಂದ ಅಗ್ರಸ್ಥಾನ ಪಟ್ಟ ಉಳಿಸಿಕೊಂಡಿರುವ ಈ ಕಾರು ಮತ್ತೆ 16ನೇ ವರ್ಷದಲ್ಲೂ ಅಗ್ರಸ್ಥಾನದಲ್ಲೇ ಮುಂದುವರಿಸಿದೆ. 

ನವದೆಹಲಿ(ಜೂ.15): ಪ್ಯಾಸೇಂಜರ್ ವಾಹನ ವಿಭಾಗದಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಇದೀಗ ಸತತ 16ನೇ ವರ್ಷವೂ ಮಾರುತಿ ಸುಜುಕಿಯ ಅಲ್ಟೋ ಮೊದಲ ಸ್ಥಾನ ಉಳಿಸಿಕೊಂಡಿದೆ. ಈ ಮೂಲಕ ಅಲ್ಟೋ ಭಾರತೀಯರ ನೆಚ್ಚಿನ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೈಗೆಟುಕುವ ದರದ ಈ ಸಣ್ಣ ಕಾರು ನಗರ, ಹಳ್ಳಿ ಹಳ್ಳಿಗಳಲ್ಲೂ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಮಾರುತಿ ಸುಜುಕಿ ಸೆಲೆರಿಯೋ CNG ಕಾರು ಬಿಡುಗಡೆ!

2000ನೇ ಇಸವಿಯಲ್ಲಿ ಬಿಡುಗಡೆಯಾದ ಮಾರುತಿ ಅಲ್ಟೋ ಕಾರು ನಾಲ್ಕು ವರ್ಷಗಳ ಬಳಿಕ 2004ರಲ್ಲಿ ಇತಿಹಾಸ ರಚಿಸಿತು. ಮಾರಾಟದಲ್ಲಿ ಎಲ್ಲಾ ದಾಖಲೆ ಅಳಿಸಿಹಾಕಿದ ಮಾರುತಿ ಮೊದಲ ಸ್ಥಾನ ಆಕ್ರಮಿಸಿಕೊಂಡಿತು. 2004ರಿಂದ ಅಗ್ರಸ್ಥಾನಕ್ಕೇರಿದ ಮಾರುತಿ ಅಲ್ಟೋ, ಇದೀಗ 2020ರಲ್ಲೂ ಮೊದಲ ಸ್ಥಾನ ಉಳಿಸಿಕೊಂಡಿದೆ. 

ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!...

2000 ದಿಂದ 2020ರ ವರೆಗೆ 39 ಲಕ್ಷ ಅಲ್ಟೋ ಕಾರುಗಳು ಮಾರಾಟವಾಗಿದೆ. ಪ್ರತಿ ವರ್ಷ ಸರಾಸರಿ 1.50 ಲಕ್ಷ ಕಾರುಗಳು ಮಾರಾಟಗೊಂಡಿದೆ. 2000 ದಿಂದ 2008ರ ವೇಳೆಗೆ 10 ಲಕ್ಷ ಕಾರುಗಳು ಮಾರಾಟವಾಗಿತ್ತು. 2008 ರಿಂದ 2012ರ ವರೆಗಿನ 4 ವರ್ಷಗಳಲ್ಲಿ 10 ಲಕ್ಷ ಕಾರುಗಳು ಮಾರಾಟವಾಗೋ ಮೂಲಕ ಮಾರುತಿ ಕಂಪನಿಗೆ ಸುಗ್ಗಿ ಕಾಲ ತಂದುಕೊಟ್ಟಿತು.

ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!..

2019ರಲ್ಲಿ ಅಲ್ಟೋ ಕಾರು 38 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಮೂಲಕ ಈ ಗಡಿ ದಾಟಿದ ಭಾರತದ ಏಕೈಕ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪ್ರತಿ ವರ್ಷ ಅಲ್ಟೋ ಕಾರು ಹಲವು  ಹೆಚ್ಚುವರಿ ಫೀಚರ್ಸ್ ಅಳವಡಿಸಿಕೊಂಡು ಬಿಡುಗಡೆಯಾಗಿದೆ. ಸದ್ಯ ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರಾಂ, ಏರ್‌ಬ್ಯಾಗ್, ರಿವರ್ಸ್ ಕ್ಯಾಮಾರ ಸೇರಿದಂತೆ ಸುರಕ್ಷತಾ ಫೀಚರ್ಸ್ ಕೂಡ ಅಳವಡಿಸಿಕೊಂಡಿದೆ.
 

click me!