480 ಕಿ.ಮೀ ಮೈಲೇಜ್; ಬರುತ್ತಿದೆ ಫಿಸ್ಕರ್ ಒಶಿಯನ್ SUV ಕಾರು!

By Web DeskFirst Published Nov 2, 2019, 6:58 PM IST
Highlights

ಕಾರು ಎಷ್ಟು ಕೊಡುತ್ತೆ? ಈ ಪ್ರಶ್ನೆ ತುಂಬಾ ಮುಖ್ಯ. ಇದೀಗ 480 ಕಿ.ಮೀ ಮೈಲೇಜ್ ರೇಂಜ್ ನೀಡೋ ಎಲೆಕ್ಟ್ರಿಕ್ SUV ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

ನ್ಯೂಯಾರ್ಕ್(ನ.02): ವಿಶ್ವವೇ ಇದೀಗ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದತ್ತ ತೊಡಗಿದೆ. ಭಾರತವೂ ಕೂಡ ಹೆಚ್ಚು ಗಮನಕೇಂದ್ರೀಕರಿಸಿದೆ. ಸ್ಟಾರ್ಟ್ ಆಪ್ ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಅಮೇರಿಕಾ ಸ್ಟಾರ್ಟ್ ಆಪ್ ಕಂಪನಿ ಫಿಸ್ಕರ್ ಹೊಸ ಎಲೆಕ್ಟ್ರಿಕ್ ಕಾರು ಪರಿಚಯಿಸಿದೆ. ನೂತನ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 480 ಕಿ.ಮೀ ಮೈಲೇಜ್ ನೀಡಲಿದೆ.

ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

ಫಿಸ್ಕರ್ ಬಿಡುಗಡೆ ಮಾಡಲಿರುವ ಕಾರಿಗೆ ಒಶಿಯನ್ ಎಂದು ಹೆಸರಿಡಲಾಗಿದೆ. suv ಕಾರು ಇದಾಗಿದ್ದು, 2020ರ ಜನವರಿ 4 ರಂದು ಅನಾವರಣಗೊಳ್ಳಲಿದೆ. ಈ ಕಾರಿನಲ್ಲಿ  80kWh ಲೀಥಿಯಮ ಐಯಾನ್ ಬ್ಯಾಟರಿ ಬಳಸಲಾಗಿದೆ. ಫೋರ್ ವ್ಹೀಲ್ ಡ್ರೈವ್ ಕಾರು ಇದಾಗಿದ್ದು, ಬಲಿಷ್ಠ ಎಂಜಿನ್ ಪವರ್ ಹೊಂದಿದೆ.

ಇದನ್ನೂ ಓದಿ: ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್!

ನವೆಂಬರ್ 27 ರಿಂದ ಈ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. 2016ರಲ್ಲಿ ಫಿಸ್ಕರ್ ಕಂಪನಿ ಒಶಿಯನ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಆರ್ಥಿಕ ಹಿನ್ನಡೆ ಅನುಭವಿಸಿದ ಕಾರಣ, ಕಾರು ಬಿಡುಗಡೆ ವಿಳಂಭವಾಗಿದೆ. ಸದ್ಯ ಈ ಕಾರು ಅಮೇರಿಕಾದಲ್ಲಿ ಬಿಡುಡೆಯಾಗಲಿದೆ. ಬೇಡಿಕೆಗೆ ಅನುಗುಣವಾಗಿ ಇತರ ದೇಶಗಳಿಗೆ ಪ್ರವೇಶಿಸಲಿದೆ.

click me!