ಮಾರಾಟಕ್ಕಿದೆ ಬಾಲಿವುಡ್ ನಟ ಅಜಯ್ ದೇವಗನ್ ವೋಲ್ವೋ XC90!

Published : Nov 16, 2020, 09:59 PM ISTUpdated : Nov 16, 2020, 10:23 PM IST
ಮಾರಾಟಕ್ಕಿದೆ ಬಾಲಿವುಡ್ ನಟ ಅಜಯ್ ದೇವಗನ್ ವೋಲ್ವೋ XC90!

ಸಾರಾಂಶ

ಬಾಲಿವುಡ್ ನಟ ಅಜಯ್ ದೇವಗನ್ ಬಳಿಕ ಹಲವು ಲಕ್ಸುರಿ ಕಾರುಗಳಿವೆ. ಇತ್ತೀಚೆಗೆ ವಿಶ್ವದ ದುಬಾರಿ ಕಾರನ್ನು ಖರೀದಿಸಿದ್ದಾರೆ. ಆದರೆ ಇದೀಗ ಅಜಯ್ ದೇವಗನ್ ತಮ್ಮ ವೋಲ್ವೋ XC90 ಕಾರನ್ನು ಮಾರಾಟಕ್ಕಿಟ್ಟಿದ್ದಾರೆ.

ಮುಂಬೈ(ನ.16): ಬಾಲಿವುಡ್‌ನ ಸ್ಟಾರ್ ಅಜಯ್ ದೇವಗನ್ ತಮ್ಮ ನೈಜ ಅಭಿನಯದಿಂದಲೇ ಪ್ರಖ್ಯಾತಿ ಪಡೆದಿದ್ದಾರೆ. ಅಜಯ್ ದೇವಗನ್ ರೋಲ್ಸ್ ರಾಯ್ಸ್, ರೇಂಜ್ ರೋವರ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೀಗೆ ಅಜಯ್ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಖರೀದಿಸಿದ್ದಾರೆ. ಆದರೆ ಈ ಬಾರಿ ಅಜಯ್ ಯಾವುದೇ ಕಾರು ಖರೀದಿಸಿಲ್ಲ. ಬದಲಾಗಿದೆ ತಮ್ಮಲ್ಲಿನ ಕಾರನ್ನು ಮಾರಾಟ ಮಾಡುತ್ತಿದ್ದಾರೆ.

ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!.

SUV ಕಾರಾದ ವೋಲ್ವೋ XC90 ಕಾರನ್ನು ಮಾರಾಟ ಮಾಡುತ್ತಿದ್ದಾರೆ. 2016ರಲ್ಲಿ ಅಜಯ್ ದೇವಗನ್ ಈ ಕಾರು ಖರೀದಿಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ 55,000 ಕಿ.ಮೀ ಪ್ರಯಾಣ ಮಾಡಿದೆ. ಈ ಕಾರು ಅಜಯ್ ದೇವಗನ್ ಹೆಸರಲ್ಲಿ ರಿಜಿಸ್ಟರ್ ಆಗಿದ್ದರೂ, ಕಾರನ್ನು ಹೆಚ್ಚಾಗಿ ಬಳಸಿದ್ದು ಪತ್ನಿ ಹಾಗೂ ನಟಿ ಕಾಜಲ್. 

ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?..

2.0 ಲೀಟರ್ ಟ್ವಿನ್ ಟರ್ಬೋಚಾರ್ಜ್ D5 ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು  225 PS ಪವರ್ 470 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಸ್ಪೀಡ್ 230 km ಪ್ರತಿ ಗಂಟೆಗೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ