ಟೊಯೋಟಾ ಇನ್ನೋವಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭ!

By Suvarna News  |  First Published Nov 16, 2020, 7:58 PM IST

ಟೊಯೋಟಾ ಇನೋವಾ ಬಿಡುಗಡೆಯಾದ ಬಳಿಕ ದೇಶ ವಿದೇಶದಲ್ಲಿ ಅತ್ಯಧಿಕ ಮಾರಾಟವಾದ ಹಾಗೂ ಜನಪ್ರಿಯತೆಗಳಿಸಿದ MPV ವಾಹನವಾಗಿದೆ. ಇದೀಗ ಇನೋವಾ ಮತ್ತೆ ಅಪ್‌ಗ್ರೇಡೆಡ್ ವರ್ಶನ್ ಬಿಡುಗಡೆಯಾಗುತ್ತಿದೆ. ಇದೀಗ ಬುಕಿಂಗ್ ಕೂಡ ಆರಂಭಗೊಂಡಿದೆ.


ನವದೆಹಲಿ(ನ.16): ಇನೋವಾ ಕ್ರೈಸ್ಟಾ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. 2016ರಲ್ಲಿ ಇನೋವಾ ಕಾರು ಕ್ರೈಸ್ಟಾ ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿತ್ತು. ಬಳಿಕ ನಾಲ್ಕು ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮೆರೆಯುತ್ತಿರುವ ಇನೋವಾ ಕ್ರೈಸ್ಟ್ ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆಯಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!.

Tap to resize

Latest Videos

undefined

ಇನೋವಾ ಕ್ರೈಸ್ಟಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭಗೊಂಡಿತು. ಬುಕಿಂಗ್ ಬೆಲೆ 1 ಲಕ್ಷ ರೂಪಾಯಿ. ಸದ್ಯ ಇಂಡೋನೇಷಿಯಾದಲ್ಲಿ ನೂತನ ಇನೋವಾ ಫೇಸ್‌ಲಿಫ್ಟ್ ವರ್ಶನ್ ಕಾರು ಅನಾವರಣಗೊಂಡಿತ್ತು, ಬುಕಿಂಗ್ ಕೂಡ ಆರಂಭಗೊಂಡಿದೆ.

ಟೊಯೋಟಾ ಇನ್ನೋವಾ ಕ್ರಿಸ್ಟಾ ಲೀಡರ್‌ಶಿಪ್ ಆವೃತ್ತಿ; ಈ ಕಾರಿಗೆ ಸರಿಸಾಟಿ ಇಲ್ಲ!..

ನೂತನ ಇನೋವಾ ಕ್ರೈಸ್ಟಾ ಫೇಸ್‌ಲಿಫ್ಟ್ ಕಾರಿನ ಎಂಜಿನ್‌ನಲ್ಲಿ ಬದಲಾವಣೆಗಳಿಲ್ಲ. 2.0 ಲೀಟರ್ ಪೆಟ್ರೋಲ್  ಎಂಜಿನ್ ಹಾಗೂ 2.4 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇನ್ನು ಹೆಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. 

ನೂತನ ಇನೋವಾ ಕ್ರೈಸ್ಟಾ ಫೇಸ್‌ಲಿಫ್ಟ್ ಕಾರಿನ ಬೆಲೆ ಸದ್ಯ ಮಾರುಕಟ್ಟೆಯಲ್ಲಿರುವ ಇನೋವಾ ಕ್ರೈಸ್ಟಾ ಕಾರಿಗಿಂತ 50,000 ರೂಪಾಯಿ ಹೆಚ್ಚಾಗಿದೆ.  ನೂತನ ಕಾರಿನ ಬೆಲೆ 15.66 ಲಕ್ಷ ರೂಪಾಯಿಂದ 23.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

click me!