ಬೊಯಿಂಗ್ ಹಾರುವ ಕಾರು ಶೀಘ್ರದಲ್ಲೇ ಬಿಡುಗಡೆ!

By Web Desk  |  First Published Jan 25, 2019, 12:21 PM IST

PAL-V ಹಾರುವ ಕಾರು ಬಿಡುಗಡೆ ಮಾಡಲು ಸಜ್ಜಾಗಿರು ಬೆನ್ನಲ್ಲೇ, ಬೊಯಿಂಗ್ ಕೂಡ ಹಾರುವ ಕಾರು ಬಿಡುಗಡೆ ಮಾಡಲಿದೆ. ಸದ್ಯ ಪರೀಕ್ಷಾ ಹಂತದಲ್ಲಿರುವ ಈ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.


ನ್ಯೂಯಾರ್ಕ್(ಜ.25): ಭವಿಷ್ಯದ  ಕಾರು ಎಂದೇ ಬಿಂಬಿತವಾಗಿರುವ ಹಾರುವ ಕಾರು ತಯಾರಿಸಲು ಇದೀಗ ಪೈಪೋಟಿ ಆರಂಭವಾಗಿದೆ. ಈಗಾಗಲೇ ಡಚ್ ಮೂಲದ PAL-V ಕಂಪೆನಿ 2021ರ ವೇಳೆಗೆ ಭಾರತದಲ್ಲಿ ಹಾರುವ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಇದರ ಬೆನ್ನಲ್ಲೇ ಇದೀಗ ಅಮೇರಿಕಾದ ಬೋಯಿಂಗ್ ಕಂಪೆನಿ ಹಾರುವ ಕಾರು ಲಾಂಚ್ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

Latest Videos

undefined

ಬೊಯಿಂಗ್ ಹಾರುವ ಕಾರು ಈಗಾಗಲೇ ಟೆಸ್ಟಿಂಗ್ ನಡೆಸುತ್ತಿದೆ. ಪ್ಯಾಸೆಂಜರ್ ಹಾರುವ ಕಾರು ನಿರ್ಮಿಸಿರುವ ಬೊಯಿಂಗ್ ನಗರ ಪ್ರದೇಶಗಳಿಗೆ ಅನೂಕಲವಾಗುವಂತೆ ತಯಾರಿಸಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಹಾರುವ ಕಾರು.  ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಪ್ರಯಾಣ ಮಾಡಲಿದೆ.

ಇದನ್ನೂ ಓದಿ: ಡ್ರಿಂಕ್ & ಡ್ರೈವ್ ಮಾಡಿದ್ರೆ ಆಫೀಸ್‌ಗೂ ಬರುತ್ತೆ ನೊಟೀಸ್!

ಬೊಯಿಂಗ್ ಹಾರುವ ಕಾರು ಪರೀಕ್ಷೆ ನಡೆಸುತ್ತಿರುವಾಗಲೇ ಇದೀಗ ಏರ್‌ಬಸ್ SE ಕಂಪೆನಿ ಕೂಡ ಹಾರುವ ಕಾರು ನಿರ್ಮಿಸುತ್ತಿದೆ. ಈಗಾಗಲೇ  PAL-V ಕಂಪೆನಿ ಶೀಘ್ರದಲ್ಲೇ  ಹಾರುವ ಕಾರು ಬಿಡುಗಡೆ ಮಾಡಲಿದೆ. ಇದರ ಬೆಲೆ 4.8 ಕೋಟಿ ರೂಪಾಯಿ ಎಂದು  PAL-V ಕಂಪೆನಿ ಘೋಷಿಸಿದೆ.

click me!