ಹಣ ಬಾಕಿ: 1 ಕೋಟಿ ಮೊತ್ತದ ಐಷಾರಾಮಿ ಲಂಬೋರ್ಗಿನಿ ಗಲ್ಲಾರ್ಡೊ ಕಾರಿಗೆ ಬೆಂಕಿ

By Anusha Kb  |  First Published Apr 15, 2024, 2:46 PM IST

ಕಾರು ದಲ್ಲಾಳಿಗಳಿಬ್ಬರ ನಡುವೆ ಹಣದ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಐಷಾರಾಮಿ ಕಾರೊಂದು ಬೆಂಕಿಗಾಹುತಿಯಾಗಿದೆ. ಲ್ಯಾಂಬೋರ್ಗಿನಿ ಗಲ್ಲಾರ್ಡೋ ಕಾರಿಗೆ ಮತ್ತೊಬ್ಬ ಬೆಂಕಿ ಇಟ್ಟಿದ್ದು, ಇಬ್ಬರ ಕಿತ್ತಾಟದಿಂದಾಗಿ ಒಂದು ಕೋಟಿ ಮೊತ್ತದ ಲ್ಯಾಂಬೋರ್ಗಿನಿ ಅಗ್ನಿಗೆ ಆಹುತಿಯಾಗಿದೆ.


ಹೈದರಾಬಾದ್: ಕಾರು ದಲ್ಲಾಳಿಗಳಿಬ್ಬರ ನಡುವೆ ಹಣದ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಐಷಾರಾಮಿ ಕಾರೊಂದು ಬೆಂಕಿಗಾಹುತಿಯಾಗಿದೆ. ಲ್ಯಾಂಬೋರ್ಗಿನಿ ಗಲ್ಲಾರ್ಡೋ ಕಾರಿಗೆ ಮತ್ತೊಬ್ಬ ಬೆಂಕಿ ಇಟ್ಟಿದ್ದು, ಇಬ್ಬರ ಕಿತ್ತಾಟದಿಂದಾಗಿ ಒಂದು ಕೋಟಿ ಮೊತ್ತದ ಲ್ಯಾಂಬೋರ್ಗಿನಿ ಅಗ್ನಿಗೆ ಆಹುತಿಯಾಗಿದೆ. ಒಬ್ಬನಿಂದ ಸಿಗಬೇಕಿದ್ದ ಹಣಕ್ಕೆ ಸಂಬಂಧಿಸಿದಂತೆ ಭಾರಿ ವಾಗ್ವಾದ ನಡೆದು ನಂತರದಲ್ಲಿ ಈ ಕಾರಿಗೆ ಬೆಂಕಿ ಹಚ್ಚಲಾಗಿದೆ. ಕಾರು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. 

ಆದರೆ ಮೂಲಗಳ ಪ್ರಕಾರ ಈ ಕಾರಿನ ಚಾಲಕ ಅನೇಕರಿಗೆ ಹಣ ನೀಡಬೇಕಿತ್ತು. ಆದರೆ ಆತ ಕೊಡಬೇಕಿದ್ದ ಹಣ ಕೊಡದೇ ಅಲೆಸುತ್ತಿದ್ದ ಕಾರಣಕ್ಕೆ ಕುಪಿತಗೊಂಡು ಕೆಲವರು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ ಕ್ರೇಜ್ ಇಂಡಿಯಾ ಎಂಬ ಇನ್ಸ್ಟಾ ಪೇಜ್ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸಾರ್ವಜನಿಕ ರಸ್ತೆಯಲ್ಲಿ ಹಳದಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು ಕಾಣುತ್ತಿದೆ. 

Latest Videos

undefined

ಹೈದರಾಬಾದ್‌ನ ನೀರಜ್ ಎಂಬುವವರಿಗೆ ಈ ಕಾರು ಸೇರಿದೆ ಎಂದು ತಿಳಿದು ಬಂದಿದೆ. ಈತ ಈ ಕಾರನ್ನು ಮಾರಲು ನಿರ್ಧರಿಸಿದ್ದ, ಇದಕ್ಕಾಗಿ ಈ ಕಾರನ್ನು ಕೊಳ್ಳುವ ಯಾರಾದರೂ ಇದ್ದರೆ ಹುಡುಕುವಂತೆ ತನ್ನ ಆತ್ಮೀಯರಲ್ಲಿ ಹೇಳಿಕೊಂಡಿದ್ದ. ಇದಾದ ನಂತರ ಅಮನ್ ಎಂಬಾತ ತನ್ನ ಇನ್ನೋರ್ವ ಸ್ನೇಹಿತ ಹಮ್ದನ್ ಎಂಬಾತನೊಂದಿಗೆ ಬಂದು ಅಹ್ಮದ್ ಎಂಬುವವರಿಗೆ ಈ ಕಾರನ್ನು  ತೋರಿಸುವುದಕ್ಕಾಗಿ ತೆಗೆದುಕೊಂಡು ಹೋಗಿದ್ದರು.

ಲ್ಯಾಂಬೋರ್ಗಿನಿ ವೆನಾಟಸ್ ಕೂಪ್, ಇದು ಕೇವಲ ಕಾರಲ್ಲ ಐಷರಾಮಿ ಅರಮನೆ!

ಇದಾದ ನಂತರ ಪಹಡಿ ಶರೀಫ್ ಪೊಲೀಸರು ಹೇಳುವಂತೆ ಈ ವಾಹನವೂ ಮಮಿಡಿಪಲ್ಲಿಯ ವಿವೇಕಾನಂದ ಜಂಕ್ಷನ್‌ನಲ್ಲಿ ಪಾಸಾದ ನಂತರ ಅಲ್ಲಿದ್ದ ಫಾರ್ಮ್‌ಹೌಸ್‌ಗೆ ಹೋಗಬೇಕಾದ ಈ ಕಾರನ್ನು ಅದರ ಬದಲು ಹೈದರಾಬಾದ್ ಏರ್‌ಪೋರ್ಟ್‌ ಮಾರ್ಗದಲ್ಲಿ ಕೊಂಡೊಯ್ದಿದ್ದಾರೆ. ಇದಾದ ನಂತರ ಅಹ್ಮದ್ ಹಾಗೂ ಆತನ ಸ್ನೇಹಿತರು ಅಮನ್ ಬಳಿ ಬಂದಿದ್ದಾರೆ. ಬಳಿಕ ಈ ಐಷಾರಾಮಿ ಸ್ಪೋರ್ಟ್ಸ್‌ ಕಾರಿನ ಮಾಲೀಕ ನೀರಜ್ ತಮಗೆ ಹಣ ನೀಡಲು ಬಾಕಿ ಇರಿಸಿಕೊಂಡಿದ್ದಾನೆ ಎಂದಿದ್ದಾರೆ. 

ಅಲ್ಲದೇ ಮಾತುಕತೆಯ ವೇಳೆ ಅಹ್ಮದ್ ಹಾಗೂ ಈತನ ಸ್ನೇಹಿತರು ಸಿಟ್ಟಿಗೆದ್ದಿದ್ದಾರೆ. ಈ ವೇಳೆ ಅವರನ್ನು ಸಮಾಧಾನಪಡಿಸಲು ಅಮನ್ ಯತ್ನಿಸಿದ್ದಾನೆ. ಆದರೆ ಕುಪಿತಗೊಂಡಿದ್ದ ಗುಂಪು, ಅಮನ್ ಅವರನ್ನು ಸಮೀಪಕ್ಕೆ ತಳ್ಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಹಡಿ ಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಯಾರನ್ನು ಇದುವರೆಗೆ ಬಂಧಿಸಿಲ್ಲ, 

4 ಕೋಟಿಯ ಲ್ಯಾಂಬೋರ್ಗಿನಿ ಖರೀದಿಸಿದ ಶ್ರದ್ಧಾ ಕಪೂರ್‌, ಬಾಲಿವುಡ್‌ ನಟಿಯ 'ಪ್ರೊಟೆಸ್ಟ್‌' ಕಥೆ ಕೆದಕಿದ ನೆಟ್ಟಿಗರು!

 ಸುಟ್ಟುಹೋದ ಕಾರು ಲಂಬೋರ್ಗಿನಿ ಗಲ್ಲಾರ್ಡೊ ಸ್ಪೈಡರ್ ಆಗಿದ್ದು, ಈ ನಿರ್ದಿಷ್ಟ ಕಾರು ಮೊದಲ ತಲೆಮಾರಿನ ಮಾದರಿಯಾಗಿದ್ದು, ಇದನ್ನು 'ಪ್ರಿ LP' ಗಲ್ಲಾರ್ಡೊ ಎಂದೂ ಕರೆಯುತ್ತಾರೆ. ಇದು 5.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ V10 ಎಂಜಿನ್‌ನಿಂದ ಚಾಲಿತವಾಗಿದ್ದು, ಗರಿಷ್ಠ 513 ಬಿಎಚ್‌ಪಿ ಪವರ್ ಮತ್ತು 510 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇ-ಗೇರ್ ಮತ್ತು ಆರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆ ಇದರಲ್ಲಿದೆ. 
 

 

 

click me!