ರಾತ್ರಿ ಕಾರು ಡ್ರೈವಿಂಗ್ ಮಾಡುವಾಗ ಎಚ್ಚರ-ಇಲ್ಲಿದೆ 7 ಟಿಪ್ಸ್!

By Web DeskFirst Published Nov 11, 2018, 9:06 PM IST
Highlights

ರಾತ್ರಿ ಕಾರು ಪ್ರಯಾಣ ಕೆಲವರಿಗೆ ಕ್ರೇಜ್ ಆಗಿದ್ದರೆ ಕೆಲವರಿಗೆ ಅನಿವಾರ್ಯ. ರಾತ್ರಿ ಪ್ರಯಾಣ ಮಾಡುವಾಗ ಎಚ್ಚರವಹಿಸುವುದು ಸೂಕ್ತ. ಹೀಗೆ ರಾತ್ರಿ ಪ್ರಯಾಣ ಮಾಡುವವರಿಗೆ ಕೆಲ ಟಿಪ್ಸ್ ನೀಡಲಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
 

ಬೆಂಗಳೂರು(ನ.11): ರಾತ್ರಿ ಕಾರು ಡ್ರೈವಿಂಗ್ ಮಾಡುವಾಗ ಹೆಚ್ಚು ಎಚ್ಚರವಹಿಸಿವುದು ಅಗತ್ಯ. ಕೆಲ ಸಣ್ಣ ತಪ್ಪುಗಳು ಅಪಾಯಕ್ಕೆ ದಾರಿ ಮಾಡಿಕೊಡುತ್ತೆ. ಭಾರತದ ಹೈವೇಗಳಲ್ಲಿ ರಾತ್ರಿ ವೇಳೆ ಸುರಕ್ಷಿತ ಡ್ರೈವಿಂಗ್‌ಗಾಗಿ ಇಲ್ಲಿ ಕೆಲ ಟಿಪ್ಸ್‌ಗಳನ್ನ ಪಟ್ಟಿ ಮಾಡಲಾಗಿದೆ.

1 ಕಾರಿನ ಎಲ್ಲಾ ಲೈಟ್ ಪರೀಕ್ಷಿಸಿ
ರಾತ್ರಿ ಪ್ರಯಾಣ ಆರಂಭಿಸೋ ಮುನ್ನ ಕಾರಿನ ಹೆಡ್‌ಲೈಟ್, ಇಂಡಿಕೇಟರ್, ಪಾರ್ಕಿಂಗ್ ಲೈಟ್, ಫಾಗ್ ಲೈಟ್ ಸೇರಿದಂತೆ ಎಲ್ಲಾ ಲೈಟ್ಸ್ಗಳನ್ನ ಪರೀಕ್ಷಿಸಿಕೊಳ್ಳಿ. ಹೆಡ್ ಲ್ಯಾಂಪ್ಸ್ ಡೈರೆಕ್ಷನ್ ಸರಿಯಾಗಿದೆಯಾ ಎಂದು ಪರೀಕ್ಷಿಸಿ. 

2 ಕಾರಿನ ಮುಂಭಾಗದ ವಿಂಡ್‌ಸ್ಕ್ರೀನ್ ಶುಚಿಯಾಗಿಡಿ
ಕಾರಿನ ಮುಂಭಾಗದ ಗ್ಲಾಸ್ ಕ್ಲೀನ್ ಮಾಡುವುದು ಒಳಿತು. ನೀರಿನಿಂದ ಮುಂಭಾಗದ ಗಾಜನ್ನ ತೊಳೆದು  ಮೈಕ್ರೋಫೈಬರ್ ಬಟ್ಟೆಯಿಂದ ಅಥವಾ ಪೇಪರ್‌ನಿಂದ ಒರೆಸಿ ಕ್ಲೀನ್ ಮಾಡುವುದು ಸೂಕ್ತ. 

3 ಹೆಡ್‌ಲ್ಯಾಂಪ್ ಲೋ ಬೀಮ್‌ನಲ್ಲಿಡಿ
ಹೈವೇ ಪ್ರಯಾಣದ ವೇಳೆ ಹೆಡ್‌ಲೈಟ್ಸ್ ಲೋ ಬೀಮ್‌ನಲ್ಲಡಿ. ಇದರಿಂದ ಎದುರಿನಿಂದ ಬರವು ವಾಹನಗಳಿಗೂ ಅನುಕೂಲವಾಗುತ್ತೆ. ಅನಿವಾರ್ಯತೆ ಇದ್ದಲ್ಲಿ ಮಾತ್ರ ಹೈ ಬೀಮ್ ಲೈಟ್  ಬಳಸಿ. ಹೈ ಬೀಮ್ ಲೈಟ್‌ ಹಾಗೂ ಹೆಚ್ಚುವರಿ ಲೈಟ್ಸ್‌ಗಳಿಂದ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ.

4 ಅತಿಯಾದ ವೇಗ ಸೂಕ್ತವಲ್ಲ
ದುಬಾರಿ ಅಥವಾ ಗರಿಷ್ಠ ಸುರಕ್ಷತೆಯ ಕಾರಾಗಿದ್ದರೂ ರಾತ್ರಿ ಡ್ರೈವಿಂಗ್ ವೇಳೆ ಅತೀಯಾದ ವೇಗ ಸೂಕ್ತವಲ್ಲ. ಹೈವೇ ಡ್ರೈವ್ ವೇಳೆ ರಸ್ತೆ ಗುಂಡಿಗಳು, ಹಂಪ್‌ಗಳು ಅಥವಾ ಪ್ರಾಣಿಗಳು ತಕ್ಷಣ ಎದುರಾಗಬಹುದು. ಹೆಡ್‌ಲೈಟ್‌ಗೆ ಕಾಣಿಸದೇ ಇರುವ ಹಲವು ವಸ್ತುಗಳು ದಾರಿಯಲ್ಲಿರಬಹುದು. ಹೀಗಾಗಿ ರಾತ್ರಿ ವೇಳೆ ಅತೀ  ವೇಗ ಸೂಕ್ತವಲ್ಲ.

5 ರಾತ್ರಿ ಕಾರು ಪಾರ್ಕ್ ಮಾಡುವಾಗ ಎಚ್ಚರವಹಿಸಿ
ರಾತ್ರಿ ಡ್ರೈವಿಂಗ್ ವೇಳೆ ವಿಶ್ರಾಂತಿಗಾಗಿ ಕಾರು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ಕಾರು ಪಾರ್ಕ್ ಮಾಡುವಾಗ ಹೈವೇಯಿಂದ ದೂರವಿರಿ. ಪಾರ್ಕಿಂಗ್ ಲೈಟ್ ಆನ್ ಮಾಡಲೇಬೇಕು. ಇನ್ನು ತಿರುವು ರಸ್ತೆ ಇಳಿಜಾರು ರಸ್ತೆಗಳಲ್ಲಿ ಪಾರ್ಕ್ ಮಾಡಬೇಡಿ. ಹೈವೇಯಿಂದ ಪಕ್ಕದಲ್ಲಿ ಸೂಕ್ತ ಜಾಗದಲ್ಲಿ ಪಾರ್ಕ್ ಮಾಡಿ

6 ನಿದ್ದೆ ಕುರಿತು ಎಚ್ಚರವಹಿಸಿ
ರಾತ್ರಿ ಡ್ರೈವಿಂಗ್ ವೇಳೆ ಚಾಲಕರು ನಿದ್ದೆಗೆ ಜಾರದಂತೆ ಎಚ್ಚರವಹಿಸಿ. ನಿದ್ದೆ ಬರುತ್ತಿದೆ ಎಂದ ತಕ್ಷಣ ಕಾರು ನಿಲ್ಲಿಸಿ ಕೆಲ ಹೊತ್ತು ವಿಶ್ರಾಂತಿಗೆ ಜಾರುವುದು ಸೂಕ್ತ. ಆಯಾಸ, ನಿದ್ದೆಯಲ್ಲಿ ಕಾರು ಚಲಾಯಿಸುವುದು ಸೂಕ್ತವಲ್ಲ. 

7 ಕಾರಿನ ಇಂಧನ ಪರೀಕ್ಷಿಸಿ
ರಾತ್ರಿ ಪ್ರಯಾಣದ ವೇಳೆ ಕಾರಿನ ಇಂಧನ ಕುರಿತು ಪರೀಕ್ಷಿಸುವುದು ಸೂಕ್ತ. ಈ ಮೂಲಕ ನಿಮ್ಮ ಪ್ರಯಾಣ ಸುಖಕರವಾಗಿಸಬಹುದು.

click me!