ಮಾರುತಿ ಬ್ರಿಜಾಗೆ ಮತ್ತೊಂದು ಪ್ರತಿಸ್ಪರ್ಧಿ- ಬರುತ್ತಿದೆ ಕಿಯಾ ಕಾರು!

Published : Nov 11, 2018, 05:23 PM IST
ಮಾರುತಿ ಬ್ರಿಜಾಗೆ ಮತ್ತೊಂದು ಪ್ರತಿಸ್ಪರ್ಧಿ- ಬರುತ್ತಿದೆ ಕಿಯಾ ಕಾರು!

ಸಾರಾಂಶ

ಕಿಯಾ ಮೋಟಾರ್ಸ್ ಇದೀಗ   SUV ಕಾರು ಬಿಡುಗಡೆಗೆ ಮುಂದಾಗಿದೆ. ಮಾರುತಿ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ಮಾಹಿತಿ.  

ಮುಂಬೈ(ನ.11): ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ SUV ಕಾರಿಗೆ ಮತ್ತೊಂದು ಪ್ರತಿಸ್ಪರ್ಧಿಯ ಉದಯವಾಗಿದೆ. ಕಿಯಾ ಮೋಟಾರ್ಸ್ ಇದೀಗ ಭಾರತದಲ್ಲಿ ಸಬ್ 4 ಮೀಟರ್ SUV ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಹ್ಯುಂಡೈ ಕ್ರೆಟಾ ಮಾದರಿಯಲ್ಲೇ ಕಿಯಾ ಮೋಟಾರ್ಸ್ ನೂತನ  SUV ಕಾರು ಬಿಡುಗಡೆ ಮಾಡಲಿದೆ. ಕಿಯಾ ಹಾಗೂ ಹ್ಯುಂಡೈ ಸಹೋದರ ಸಂಸ್ಥೆಗಳು. ಹೀಗಾಗಿ ಭಾರತದಲ್ಲಿ ಕಿಯಾ ಮೋಟಾರ್ಸ್ ಹ್ಯುಂಡೈ ಕಾರಿನ ತಂತ್ರಜ್ಞಾನವನ್ನೇ ಬಳಸಿಕೊಳ್ಳಲಿದೆ.

ಈಗಾಗಲೇ ಮಹೀಂದ್ರ ಮೋಟಾರ್ಸ್ ಬಿಜಾ ಪ್ರತಿಸ್ಪರ್ಧಿ ಕಾರನ್ನ ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಕಿಯಾ ಮೋಟಾರ್ಸ್ ಕೂಡ   SUV ಕಾರು ಬಿಡುಗಡೆಗೆ ಮುಂದಾಗಿದೆ. ಆಕರ್ಷಕ ಲುಕ್, ಅತ್ಯಂತ ಬಲಿಷ್ಠ ಎಂಜಿನ್ ಹೊಂದಿರು ಕಿಯಾ 2019ರಲ್ಲಿ   SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ.ಇದರ ಬೆಲೆ ಕುರಿತು ಕಿಯಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು