ಶೀಘ್ರದಲ್ಲೇ i20 ರೀತಿಯ ಹ್ಯುಂಡೈ ಎಲೆಕ್ಟ್ರಿಕ್ ಕಾರು ಬಿಡುಗಡೆ!

By Web DeskFirst Published Nov 11, 2018, 7:06 PM IST
Highlights

ಹ್ಯುಂಡೈ ಸಂಸ್ಥೆ ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮುುಂದಾಗಿದೆ. ಈಗಾಗಲೇ ಕೋನಾ ಎಲೆಕ್ಟ್ರಿಕ್ ಕಾರು ತಯಾರಿಸುತ್ತಿರುವ ಹ್ಯುಂಡೈ ಇದೀಗ ನೂತನ ಸಾಗ ಕಾರು ಬಿಡಡುಡೆ ಮಾಡಲಿದೆ. ಹೇಗಿದೆ ಈ ನೂತನ ಕಾರು? ಇಲ್ಲಿದೆ.

ಬ್ರೆಜಿಲ್(ನ.11): ಹ್ಯುಂಡೈ ಕಾರು ಸಂಸ್ಥೆ ಇದೀಗ i20 ರೀತಿಯ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಮಿನಿ SUV ಶೈಲಿ ಹೋಲುವ ಈ ಕಾರು ಇತ್ತೀಚೆಗೆ ನಡೆದ ಸಾವೋ ಪೌಲೋ ಮೋಟಾರ್ ಶೋನಲ್ಲಿ ಪ್ರದರ್ಶನ ಮಾಡಲಾಗಿದೆ.

ಕಾಂಪಾಕ್ಟ್ ಕ್ರಾಸೋವರ್ ಶೈಲಿಯ ನೂತನ ಹ್ಯುಂಡೈ ಸಾಗಾ ಕಾನ್ಸೆಪ್ಟ್ ಕಾರನ್ನ ಮೋಟಾರ್ ಶೋನಲ್ಲಿ ಅನಾವರಣ ಮಾಡಲಾಗಿದೆ. 202ps ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ನೂತನ ಕಾರಿಗೆ  ಆಕರ್ಷಕ ಲುಕ್ ನೀಡಲಾಗಿದೆ.

64 kWh ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೂತನ ಸಾಗ ಕಾರು ಒಂದು ಬಾರಿ ಚಾರ್ಜ ಮಾಡಿದರೆ 470 ಕಿಮೀ ಪ್ರಯಾಣಿಸಬಹುದು. ಇನ್ನು ಕ್ವಿಕ್ ಚಾರ್ಜಿಂಗ್ ಮೂಲಕ 54 ನಿಮಿಷದಲ್ಲಿ ಶೇಕಡ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. 

ಹ್ಯುಂಡೈ ಈಗಾಗಲೋ ಕೋನಾ ಎಲೆಕ್ಟ್ರಿಕಲ್ SUV ಕಾರು ಬಿಡುಗಡೆಗೆ ಮುಂದಾಗಿದೆ. ಇದೀಗ ಕೋನಾ ಕಾರಿನ ತಂತ್ರಜ್ಞಾನ ಹೊಂದಿರುವ ಸಾಗ ಕಾರು ಬಿಡುಗಡೆಗೆ ತಯಾರಿ ಆರಂಭಿಸಿದೆ. 2019ರಲ್ಲಿ ಹ್ಯುಂಡೈ ಸಾಗ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 

click me!