ಬೇಸಿಗೆಯಲ್ಲಿ ಕಾರಿನ AC ಎಫೆಕ್ಟೀವ್ ಮಾಡಲು ಇಲ್ಲಿದೆ 5 ಸರಳ ಟಿಪ್ಸ್!

By Web DeskFirst Published Apr 25, 2019, 11:59 AM IST
Highlights

ಬೇಸಿಗೆಯಲ್ಲಿ ಕಾರು ಪ್ರಯಾಣದಲ್ಲಿ AC ಇಲ್ಲದೆ ಪ್ರಯಾಣ ಅಸಾಧ್ಯ. ಉರಿ ಬಿಸಿಲಿಗೆ ಕಾರಿನಲ್ಲಿ AC ಹಾಕಿದರೂ ಅದರ ಅನುಭವ ಆಗದೇ ಇರಬಹುದು. ಇಂತಹ ಸಂದರ್ಭದಲ್ಲಿ AC ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 5 ಟಿಪ್ಸ್ ನೀಡಲಾಗಿದೆ.

ಬೆಂಗಳೂರು(ಏ.25): ಬೇಸಿಗೆ ಪ್ರಯಾಣ ಆರಾಮದಾಯಕವಲ್ಲ. ಉರಿ ಬಿಸಿಲಿನಲ್ಲಿ ಒಂದು ಹೆಜ್ಜೆ ಹೊರಗಿಟ್ಟರೆ ಸಾಕು, ಸುಸ್ತು. ಇನ್ನು ಕಾರು ಅಥವಾ ವಾಹನದಲ್ಲಿ ಪ್ರಯಾಣ ಮಾಡುವಾಗ AC ಇಲ್ಲದಿದ್ದರೆ ಹೇಳೋದೆ ಬೇಡ. ಅದರಲ್ಲೂ ನಗರದಲ್ಲಿ AC ಇಲ್ಲದೆ ಕಾರು ಪ್ರಯಾಣ ಅಸಾಧ್ಯ. ಉರಿಸಿಬಿಸಿಲಿಗೆ ಕಾರಿನ AC ಅದೆಷ್ಟೇ ಇಟ್ಟರೂ ತಂಪಾದ ಗಾಳಿ ಅನುಭವ ಆಗೋದೇ ಇಲ್ಲ. ಕಾರಿನ AC ಮತ್ತಷ್ಟು ಪರಿಣಾಮಕಾರಿಯಾಗಲು ಇಲ್ಲಿದೆ 5 ಟಿಪ್ಸ್.

ನೆರಳಿನಲ್ಲಿ ಪಾರ್ಕ್ ಮಾಡಿ:
ನೆರಳಿನಲ್ಲಿ ಪಾರ್ಕ್ ಇದು ಹಳೇಯ ಟಿಪ್ಸ್ ಆದರೂ ತುಂಬಾ ಪರಿಣಾಮಕಾರಿ. ಅದರಲ್ಲೂ ಮರಳದ ಕೆಳಗೆ ಅಥವಾ ಬೇಸ್‌ಮೆಂಟ್ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿದರೆ ಕಾರು ಬಿಸಿಯಾಗುವುದಿಲ್ಲ. ನೆರಳಿನಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿ ಪ್ರಯಾಣಿಸಿದರೆ ಆರಾಮಾ. ಪ್ರಯಾಣದ ವೇಲೆ AC ಹಾಕಿದರೆ ತಕ್ಷಣವೇ ಕಾರಿನೊಳಗೆ ತಣ್ಣನೆ ಅನುಭವಾ ನಿಮ್ಮದಾಗಲಿದೆ.

ವಿಂಡ್‌ಸ್ಕ್ರೀನ್:
ಎಲ್ಲಾ ಸಂದರ್ಭದಲ್ಲಿ ನೆರಳು, ಅಥವಾ ಪಾರ್ಕಿಂಗ್ ಸ್ಥಳ ಸಿಗುವುದಿಲ್ಲ. ಹಲವು ಬಾರಿ ಬಿಸಿನಲ್ಲೇ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಹುದು. ಈ ವೇಳೆ ಕಾರಿನ ಹಿಂಬದಿ ಸ್ಕ್ರೀನ್, ವಿಂಡೋ ಹಾಗೂ ಮುಂಭಾಗದ ಗಾಜಿಗೆ ಸ್ಕ್ರೀನ್ ಹಾಕಿದರೆ ಕಾರಿನೊಳಗಿನ ಬಿಸಿ ಕಡಿಮೆಯಾಗಲಿದೆ. ಇದರಿಂದ ಕಾರು ಪ್ರಯಾಣದ ವೇಲೆ AC ಪರಿಣಾಮಾಕಾರಿಗಿರಬಲ್ಲದು.

ವಿಂಡೋ ಪೂರ್ತಿ ಮುಚ್ಚಬೇಡಿ:
ಪಾರ್ಕ್ ಮಾಡುವ ಸಂದರ್ಭ ಅನಿವಾರ್ಯವಾದರೆ ಮಾತ್ರ ಕಾರಿನ ವಿಂಡೋ ಗ್ಲಾಸ್ ಪೂರ್ತಿಯಾಗಿ ಮುಚ್ಚಿರಿ. ಇಲ್ಲವಾದಲ್ಲಿ ಸ್ವಲ್ಪ ತೆರೆದಿಡಿ. ಇದರಿಂದ ಕಾರಿನೊಳಗೆ ಗಾಳಿಯಾಡುವುದರಿಂದ ಬಿಸಿ ಕಡಿಮೆಯಾಗಲಿದೆ. ಕಾರಿನೊಳಗಿನ ಟೆಂಪರೇಚರ್ ಕಡಿಮೆಯಾಗಲಿದೆ.

AC ಹಾಕುವ ಮುನ್ನ ವಿಂಡೋ ಗ್ಲಾಸ್ ಕೆಳಗಿಳಿಸಿ:
ಪಾರ್ಕ್ ಮಾಡಿದ ಸ್ಥಳದಿಂದ ಕಾರು ತೆಗೆಯುವಾಗಲೇ ವಿಂಡೋ ಕ್ಲೋಸ್ ಮಾಡಿ AC ಆನ್ ಮಾಡಬೇಡಿ.  ಬಿಸಿನಲ್ಲಿ ಪಾರ್ಕ್ ಮಾಡಿದ ಕಾರಿನಲ್ಲಿ ಪ್ರಯಾಣ ಮಾಡುವಾಗ ಕೆಲ ಹೊತ್ತು ವಿಂಡೋ ಗ್ಲಾಸ್ ಕೆಳಗಿಳಿಸಿ. ಬಳಿಕ AC ಹಾಕಿ. ಇದರಿಂದ ಸ್ವಚ್ಚ ಗಾಳಿ ಕಾರಿನೊಳಗೆ ಪ್ರವೇಶಿಸಿ, ಟೆಂಪರೇಚರ್ ಕಡಿಮೆ ಮಾಡಲಿದೆ. ಇಷ್ಟೇ ಅಲ್ಲ ಇದು ಆರೋಗ್ಯಕ್ಕೂ ಒಳ್ಳೆಯದು.

AC ಸರ್ವೀಸ್ ಮರೆಯದಿರಿ:
ಕಾರು ಸರ್ವೀಸ್ ವೇಳೆ AC ಕೂಡ ಸರ್ವೀಸ್ ಮಾಡುತ್ತಾರೆ. ಆದರೆ ಬೇಸಿಗೆ ಬರುತ್ತಿದ್ದಂತೆ ಕಾರಿನ AC ಪರಿಶೀಲಿಸಿ ಅಥವಾ ಸರ್ವೀಸ್ ಮಾಡಿಸಿಕೊಳ್ಳಿ. ಇದರಿಂದ ಎಸಿಯೊಳಗಿನ ಧೂಳು  ಅಥವಾ ಎಸಿ ಫ್ಯಾನ್, ಅಥವಾ ಕೂಲಿಂಗ್ ಎಂಜಿನ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯಾ ಎಂದು ಪರೀಶಿಲಿಸಿವುದು ಉತ್ತಮ.

click me!