ಕೊರೋನಾ ನಡುವೆ: ಸದ್ದು ಮಾಡಿದ ರಾಯಲ್ ಎನ್‌ಫೀಲ್ಡ್ ಬೈಕ್‌ನ 4 ವಿಚಾರ!

By Suvarna News  |  First Published Sep 12, 2020, 10:39 PM IST

ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆ ಇದೀಗ ಮನೆ ಬಾಗಿಲಿಗೆ ಸರ್ವಿಸ್‌ ಒದಗಿಸುವ ಸವೀರ್‍ಸ್‌ ಆನ್‌ ವೀಲ್ಸ್‌ ಸೇವೆ ಆರಂಭಿಸಿದೆ. ಕೊರೋನಾ ಕಾಲಘಟ್ಟದಲ್ಲಿ ಸಂಸ್ಥೆಯಲ್ಲಿ ಏನೇನು ಬೆಳವಣಿಗೆ ನಡೆದಿದೆ ಎಂಬ ಕುತೂಹಲಕ್ಕೆ ಈ ನಾಲ್ಕು ವಿಚಾರಗಳನ್ನು ಗಮನಿಸಬಹುದು.


ಬೆಂಗಳೂರು(ಸೆ.12):  ಕೊರೋನಾ ವೈರಸ್ ಲಾಕ್‌ಡೌನ್ ಮುಗಿದ ಬೆನ್ನಲ್ಲೇ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ ಗ್ರಾಹಕರಿಗೆ ಸೇವೆ ಆರಂಭಿಸಿದೆ. ಇದರ ನಡುವೆ ಗ್ರಾಹಕರಿಗಾಗಿ ಕೆಲ ಕೂಡುಗೆಗಳನ್ನು ನೀಡಿದೆ.  ಕೊರೋನಾ ನಡುವೆ ರಾಯಲ್ ಎನ್‌ಫೀಲ್ಡ್ ಜಾರಿಗೊಳಿಸಿದ ಗಮನಸೆಳೆದ 4 ವಿಚಾರದ ಮಾಹಿತಿ ಇಲ್ಲಿದೆ.

ಬರುತ್ತಿದೆ ಹೊಚ್ಚ ಹೊಸ 650cc ಕ್ರೂಸರ್ ರಾಯಲ್ ಎನ್‌ಫೀಲ್ಡ್ ಬೈಕ್!.

Latest Videos

undefined

1. ಮನೆ ಬಾಗಿಲಿಗೆ ಬಂದು ಬೈಕ್‌ ಸರ್ವೀಸ್ ನೀಡುವ ವ್ಯವಸ್ಥೆ ಸರ್ವೀಸ್ ಆನ್‌ ವೀಲ್ಸ್‌. ಟೂಲ್ಸ್‌ ಮತ್ತು ಸ್ಪೇರ್‌ ಪಾರ್ಟ್ಸ್ ತುಂಬಿಕೊಂಡು ರೆಡಿ ಇರುವ ಬೈಕ್‌ ಜತೆ ಟೆಕ್ನಿಷಿಯನ್‌ ಅವಶ್ಯ ಇರುವ ಕಡೆಗೆ ಹೋಗಿ ಸರ್ವೀಸ್ ನೀಡುವ ಸೇವೆ ಇದು. ರಾಯಲ್‌ ಎನ್‌ಫೀಲ್ಡ್‌ನ ಒರಿಜಿನಲ್‌ ಪಾರ್ಟ್‌ಗಳನ್ನೇ ಒದಗಿಸಲಾಗುತ್ತದೆ ಮತ್ತು ಅದಕ್ಕೆ 12 ತಿಂಗಳ ವಾರಂಟಿ ಇದೆ. ಐನೂರಕ್ಕೂ ಹೆಚ್ಚು ನಗರಗಳಲ್ಲಿ ಈ ಸೇವೆ ಲಭ್ಯವಿದೆ. 800 ಬೈಕುಗಳನ್ನು ಇದಕ್ಕಾಗಿ ರೆಡಿ ಮಾಡಲಾಗಿದೆ. ಅದರಲ್ಲಿ 32 ಬೈಕುಗಳು ಬೆಂಗಳೂರಲ್ಲೇ ಇವೆ. 10 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಈ ಸೇವೆ ಲಭ್ಯವಾಗಲಿದೆ.

BS6 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್: ಫಸ್ಟ್ ಲುಕ್ ರಿವ್ಯೂವ್!.

2. ಬೆಂಗಳೂರು ಯಾವತ್ತಿಗೂ ರಾಯಲ್‌ ಎನ್‌ಫೀಲ್ಡ್‌ಗೆ ಜಾಸ್ತಿ ಗೌರವ ನೀಡಿದೆ. ಕ್ಲಾಸಿಕ್‌ ಬೈಕಿಗೆ ಯಾವತ್ತಿನಿಂದಲೂ ಬೇಡಿಕೆ ಇದೆ. ಈಗ ಹಿಮಾಲಯನ್‌ ಮತ್ತು ಟ್ವಿನ್‌ ಬೈಕುಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ.

3. ರಾಯಲ್‌ ಎನ್‌ಫೀಲ್ಡ್‌ನ ಒಂದು ತಂಡ ಎಲೆಕ್ಟ್ರಿಕ್‌ ಬೈಕುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲೆಕ್ಟ್ರಿಕ್‌ ಬೈಕುಗಳನ್ನು ಸದ್ಯಕ್ಕಂತೂ ಬಿಡುಗಡೆ ಮಾಡುವ ಸಾದ್ಯತೆ ಇಲ್ಲ.

4. ಕಳೆದ ಜನವರಿಯಲ್ಲಿ ಬಿಡುಗಡೆಯಾದ ಕ್ಲಾಸಿಕ್‌ 350 (ಡ್ಯುಯಲ್‌ ಎಬಿಎಸ್‌) ಜನಪ್ರೀತಿ ಗಳಿಸಿಕೊಂಡಿವೆ. ಅಲ್ಲದೇ ರಾಯಲ್‌ ಎನ್‌ಫೀಲ್ಡ್‌ನ ಬಿಎಸ್‌ 6 ಬೈಕುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೊಸ ಬೈಕುಗಳ ಅಚ್ಚರಿ ಕೆಲವೇ ದಿನಗಳಲ್ಲಿ ಸಿಗಲಿದೆ.

click me!