11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಬಲೆನೊ ಕಾರು!

By Web Desk  |  First Published Jan 22, 2019, 4:52 PM IST

ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ದಾಖಲೆ ಮಾರಾಟ ಕಂಡಿರುವ ಮಾರುತಿ ಬಲೆನೊ ಕೆಲ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದೆ. ಈಗಾಗಲೇ ನೂತನ ಬಲೆನೊ ಕಾರಿನ ಬುಕಿಂಗ್ ಆರಂಭಗೊಂಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.


ನವದೆಹಲಿ(ಜ.22): ಮಾರುತಿ ಸುಜುಕಿ 2019ರ ಬಲೆನೊ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರು ಬಿಡುಗಡೆ ಮಾಡಿತ್ತು. ಇದೀಗ 4 ವರ್ಷಗಳ ಬಳಿಕ ಬಲೆನೊ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.  ಕೇವಲ 11,000 ರೂಪಾಯಿ ನೀಡಿ ಕಾರು ಬುಕಿಂಗ್‌ ಮಾಡಬಹುದಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

2017ರಲ್ಲಿ ಬಲೆನೊ RS ಕಾರು ಬಿಡುಗಡೆಯಾಗಿತ್ತು. ಇದೀಗ 2019ರ ನೂತನ ಬಲೆನೊ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 5.38 ಲಕ್ಷ ರೂಪಾಯಿಂದ ಆರಂಭಗೊಳ್ಳಲಿರುವ ಬೆಲೆನೋ ಟಾಪ್ ಮಾಡೆಲ್ ಬೆಲೆ 8.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಹೆಡ್ ಲ್ಯಾಂಪ್ ಕ್ಲಸ್ಟರ್, ಮುಂಭಾಗದ ಬಂಪರ್ ಸೇರಿದಂತೆ ಕೆಲ ಬದಲಾವಣೆಗಳೊಂದಿಗೆ ಹೊಸ ಬಲೆನೋ ಕಾರು ಬಿಡುಗಡೆಯಾಗುತ್ತಿದೆ.  ಸ್ಟೈಲಿಶ್ ಫಾಗ್ ಲ್ಯಾಂಪ್, ಆಲೋಯ್ ವೀಲ್ಹ್ಸ್ ಸೇರಿದಂತೆ ಹೊರ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇನ್ನೂ ಡ್ಯಾಶ್ ಬೋರ್ಡ್ ಸೇರಿದಂತೆ ಒಳವಿನ್ಯಾಸದಲ್ಲೂ ಕೆಲ ಬದಲಾವಣೆಗಳೊಂದಿಗೆ ಬಲೆನೋ ರಸ್ತೆಗಿಳಿಯಲಿದೆ.

ಇದನ್ನೂ ಓದಿ: ತಂದೆ ಹುಟ್ಟುಹಬ್ಬಕ್ಕೆ ಮಗನಿಂದ ಆಡಿ ಕಾರು ಸರ್ಪ್ರೈಸ್ ಗಿಫ್ಟ್!

ನೂತನ ಬಲೆನೋ 1.2 ಲೀಟರ್ ಕೆ12 ಪೆಟ್ರೋಲ್ ಎಂಜಿನ್ ಹೊಂದಿದೆ. 83 bhp ಪವರ್ ಹಾಗೂ 115nm ಟಾರ್ಕ್ ಹೊಂದಿದೆ. ಇನ್ನು 1.3 ಲೀಟರ್ ಡೀಸೆಲ್ ಎಂಜಿನ್ ಕಾರು ಕೂಡ ಲಭ್ಯವಿದೆ. ಕಳೆದ ವರ್ಷ ಪ್ರತಿ ತಿಂಗಳು ಸರಾಸರಿ 17,000 ಕಾರುಗಳು ಮಾರಾಟವಾಗಿತ್ತು. ಇದೀಗ ಈ ದಾಖಲೆಯನ್ನ ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಮಾರುತಿ ಮುಂದಾಗಿದೆ. 

click me!