ಬೆಂಗಳೂರಿನಲ್ಲಿ ದಕ್ಷಿಣ ಡೇರ್ ರ‍್ಯಾಲಿಗೆ ಚಾಲನೆ!

By Web Desk  |  First Published Jul 29, 2019, 2:24 PM IST

ದಕ್ಷಿಣ ಭಾರತದ ಅತಿ ದೊಡ್ಡ ಮೋಟಾರ್ ಸ್ಪೋರ್ಟ್ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಆರಂಭವಾಗಿರುವ ರ್ಯಾಲಿಯ ಚಿತ್ರದುರ್ಗದ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಸ್ಥಗಳನ್ನು ಪ್ರವೇಶಿಸಲಿದೆ. 6 ದಿನದ ಈ ರ್ಯಾಲಿಯ ವಿಶೇಷತೆ ಇಲ್ಲಿದೆ


ಬೆಂಗಳೂರು(ಜು.27): 11ನೇ ಆವೃತ್ತಿಯ ಪ್ರತಿಷ್ಠಿತ ದಕ್ಷಿಣ ಡೇರ್ ಮೋಟಾರು ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. 2000 ಕಿ.ಮೀ ದೂರದ ರ್ಯಾಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಆಗಸ್ಟ್ 1 ರಂದು ಹುಬ್ಬಳ್ಳಿಯಲ್ಲಿ ಅಂತ್ಯಗೊಳ್ಳಲಿದೆ.  ಕಾರು ಹಾಗೂ ಬೈಕ್ ವಿಭಾಗದಲ್ಲಿ 100ಕ್ಕೂ ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳು ದಕ್ಷಿಣ ಡೇರ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

Latest Videos

undefined

ಇದನ್ನೂ ಓದಿ: ಸ್ಕೋಡಾ ಒಕ್ಟಾವಿಯಾ VS ಮಾರುತಿ ಇಗ್ನಿಸ್ ರೇಸ್- ಅಚ್ಚರಿ ನೀಡಿದ ರಿಸಲ್ಟ್!

ಪೊಲೀಸ್ ಗುಪ್ತಚರ ವಿಭಾಗದ ಸೂಪರಿಡೆಂಟ್ ಹಮ್ಝಾ ಹುಸೇನ್ ಹಸಿರು ನಿಶಾನೆ ತೋರೋ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಚಾಲಕನ ಕೌಶಲ್ಯ, ವೇಗಿ ಮತ್ತು ಧರ್ಯವನ್ನು ಪರೀಕ್ಷೆಗೆ ಒಳಪಡಿಸುವ 6 ದಿನದ ಮೋಟಾರ್ ಸ್ಪೋರ್ಟ್ ರ್ಯಾಲಿ ಅಭಿಮಾನಿಗಳ ಕುತೂಹಲವನ್ನು ಹಿಡಿದಿಟ್ಟುಕೊಂಡಿದೆ. ದಕ್ಷಿಣ ಭಾರತದ ಅತ್ಯಂತ ಬೇಡಿಕೆ ಹಾಗೂ ಆಕರ್ಷಣೀಯ ರ್ಯಾಲಿ ಇದಾಗಿದ್ದು, ದುರ್ಗಮ ಪ್ರದೇಶಗಳ ಮೂಲಕ ಉತ್ತರ ಕರ್ನಾಟಕದ ಸಂದುರ ತಾಣಗಳನ್ನು ಪ್ರವೇಶಿಸಲಿದೆ. 

ಇದನ್ನೂ ಓದಿ: ಶ್ರೇಷ್ಠ ರಸ್ತೆ-ವಿಶ್ವದ ಕೆಟ್ಟ ಬೈಕ್ ಇದುವೇ ಮಂಕಿ ರನ್ ರೇಸ್!

ಈ ಬಾರಿಯ ರ್ಯಾಲಿಯಲ್ಲಿ ಅಲ್ಟಿಮೇಟ್ ಕಾರು ವಿಭಾಗದಲ್ಲಿ ಮಹೀಂದ್ರ ಮೋಟಾರ್ ಸ್ಪೋಟ್ರ್ ತಂಡದ ಗೌರವ್ ಗಿಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಕಳೆದ ವರ್ಷ ದಕ್ಷಿಣ ಡೇರ್ ರ್ಯಾಲಿ ವಿಜೇತ ಹಾಗೂ ಏಷ್ಯಾ ಪೆಸಿಫಿಕ್ ಚಾಂಪಿಯನ್ ಆಗಿರುವ ಗೌರವ್ ಗಿಲ್, ಈ ಬಾರಿಯೂ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದ್ದಾರೆ. ಕರ್ನಾಟಕ ಹಾರ್ಜಿ ಮೋಟಾರ್ ಸ್ಪೋರ್ಟ್‌ನ ಸಂಜಯ್ ಮತ್ತು ವಿಶ್ವಾಸ ಕೂಡ ಕನ್ನಡಿಗರ ವಿಶ್ವಾಸ ಉಳಿಸಲು ಪಣತೊಟ್ಟಿದ್ದಾರೆ.

ಜೈದಾಸ್ ಮೆನನ್ ನೇತೃತ್ವದ ಮೋಟಾರ್ ಸ್ಪೋರ್ಟ್ .ಇಂಕ್ ದಕ್ಷಿಣ ಡೇರ್ ರ್ಯಾಲಿ ಆಯೋಜಿಸುತ್ತಿದೆ. 10 ಯಶಸ್ವಿ ರ್ಯಾಲಿ ಆಯೋಜಿಸಿರುವ ಮೋಟಾರ್ ಸ್ಪೋರ್ಟ್ .ಇಂಕ್ ಇದೀಗ ಎಲ್ಲಾ ಸರುಕ್ಷತೆಯೊಂದಿಗೆ 11ನೇ ಆವೃತ್ತಿಯನ್ನು ಆಯೋಜಿಸಿದೆ. ಸ್ಪರ್ಧಿಗಳ ಸುರಕ್ಷತೆ ಹೆಚ್ಚಿನ ಕಾಳಜಿ ವಹಿಸಲಾಗಿದೆ.

click me!