ಆ್ಯಕ್ಟೀವಾ ಅಲ್ಲ, ಹೀರೋ ಸ್ಪ್ಲೆಂಡರ್ ಭಾರತದ ನಂ.1 ದ್ವಿಚಕ್ರ ವಾಹನ!

By Web Desk  |  First Published Jul 28, 2019, 12:43 PM IST

2019ರ ಜೂನ್ ತಿಂಗಳ ಬೈಕ್ ಸ್ಕೂಟರ್ ಮಾರಾಟ ಅಂಕಿ ಅಂಶ ಪ್ರಕಟಗೊಂಡಿದೆ. ಗರಿಷ್ಠ ಮಾರಾಟ ದಾಖಲೆಯಲ್ಲಿ ಹೊಂಡಾ ಆ್ಯಕ್ಟೀವಾ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನಕ್ಕೇರಿದೆ.
 


ನವದೆಹಲಿ(ಜು.28): ಭಾರತದಲ್ಲಿ  ದ್ವಿಚಕ್ರ ವಾಹನಗಳಲ್ಲಿ ಭಾರಿ ಪೈಪೋಟಿ ಇದೆ.  2019ರ ಜೂನ್ ತಿಂಗಳ ಮಾರಾಟದ ಅಂಕಿ ಅಂಶ ಬಿಡುಗಡೆಯಾಗಿದೆ. ಗರಿಷ್ಠ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದ ಹೊಂಡಾ ಆಕ್ಟೀವಾ ಹಿಂದಿಕ್ಕಿರುವ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ಹೀರೋ ಸ್ಪ್ಲೆಂಡರ್ ದೇಶದ ನಂಬರ್ 1 ದ್ವಿಚಕ್ರ ವಾಹನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬಜಾಜ್ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶ!

Tap to resize

Latest Videos

undefined

2019ರ ಜೂನ್ ತಿಂಗಳಲ್ಲಿ 2,42,743  ಹೀರೋ ಸ್ಪ್ಲೆಂಡರ್ ಬೈಕ್ ಮಾರಾಟವಾಗಿದೆ. ಇನ್ನು ಮೊದಲ ಸ್ಛಾನದಲ್ಲಿದ್ದ ಆ್ಯಕ್ವೀವಾ ಸ್ಕೂಟರ್  2,36,739 ಮಾರಾಟವಾಗೋ ಮೂಲಕ 2ನೇ ಸ್ಥಾನಕ್ಕೆ ಕುಸಿದಿದೆ. 2019ರ ಸಾಲಿನಲ್ಲಿ ಹೀರೋ ಸ್ಪ್ಲೆಂಡರ್ ಬೈಕ್ ಮಾರಾಟದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ!

ಬೈಕ್-ಸ್ಕೂಟರ್ ಮಾರಾಟ ಅಂಕಿ ಅಂಶ

ತಿಂಗಳು ಸ್ಪ್ಲೆಂಡರ್ ಆಕ್ಟೀವಾ
ಜೂನ್ 2019 2,42,743  2,36,739
ಮೇ 2019 1,99,225 2,18,734
ಏಪ್ರಿಲ್ 2019 2,23,532 2,19,961
ಮಾರ್ಚ್ 2019 2,46,656 1,48,241


 

click me!