ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್!

By Web DeskFirst Published Nov 18, 2018, 6:25 PM IST
Highlights

ಹೊಸ ಬೈಕ್ ಖರೀದಿಸಿದವರೂ ಅದನ್ನ ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮ್ಮ ರೈಡ್  ಅಥವಾ ಬಳಕೆ ಸಮರ್ಪಕವಾಗಿಲ್ಲದಿದ್ದರೆ, ಬೈಕ್ ಬಹುಬೇಗನೆ ಸಮಸ್ಯೆಗೆ ತುತ್ತಾಗಲಿದೆ. ಹೀಗಾಗಿ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿದೆ 10 ಟಿಪ್ಸ್
 

ಬೆಂಗಳೂರು(ನ.18): ಹೊಸ ಬೈಕ್ ಖರೀದಿಸಿದವರು ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ನೂತನ ಬೈಕ್ ಬಳಕೆ, ಸ್ಪೀಡ್ ಸೇರಿದಂತೆ ಎಲ್ಲವೂ ಕೂಡ ಬಹಳ ಮುಖ್ಯ. ಹೀಗೆ ಹೊಸ ಬೈಕ್ ಖರೀದಿಸಿದವರಿಗೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.

  • ಆರಂಭಿಕ 1000 ಕಿ.ಮೀ ವರೆಗೆ 40 ಕಿ.ಮಿ/ ಪ್ರತಿ ಗಂಟೆಗೆ ವೇಗದಲ್ಲಿ ಪ್ರಯಾಣಿಸಿ
  • ಸರಿಯಾದ ಗೇರ್ ಬಳಕೆ ಮಾಡಿ- ಎಂಜಿನ್ ಮೇಲಿನ ಹೊರೆ ತಪ್ಪಿಸಿ
  • ಗೇರ್ ಶಿಫ್ಟ್ ಮಾಡುವಾಗ ಕ್ಲಚ್ ಸಂಪೂರ್ಣವಾಗಿ ಬಳಸಿ
  • ಹೊಸ ಬೈಕ್ ಮೈಲೇಜ್ ನೀಡುತ್ತಿಲ್ಲ ಎಂದು ಕಾರ್ಬೋರೇಟರ್ ಅಥವಾ ಇತರ ಯಾವುದೇ ಸೆಟ್ಟಿಂಗ್ ಬದಲಾಯಿಸಬೇಡಿ
  • ಸರಿಯಾದ ಸಮಯಕ್ಕೆ ಸರ್ವೀಸ್ ಮಾಡಿಸಿಕೊಳ್ಳಿ
  • ಎರಡನೇ ಸರ್ವೀಸ್ ಬಳಿಕ ನಿಮ್ಮ ವೇಗದ ಮಿತಿಯಲ್ಲಿ ನಿಯಮಿತವಾಗಿ ಏರಿಕೆ ಮಾಡಬಹುದು
  • 2ನೇ ಸರ್ವೀಸ್ ಬಳಿಕ ಬೈಕ್ ನಿಗದಿತ ಮೈಲೇಜ್ ನೀಡದಿದ್ದರೆ ಪರೀಕ್ಷಿಸಿ
  • ಪೆಟ್ರೋಲ್ ಪೂರ್ತಿ ಖಾಲಿಯಾಗುವ ವರೆಗೂ ಓಡಿಸಬೇಡಿ-ರಿಸರ್ವ್ ಬಿದ್ದ ಬಳಿಕ ಪೆಟ್ರೋಲ್ ಹಾಕಿ
  • ಎರಡು ಚಕ್ರದ ಗಾಳಿ ಸರಿಯಾದ ಪ್ರಮಾಣದಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಿ
  • ಆದಷ್ಟು ಬೈಕ್ ಶುಚಿಯಾಗಿಡಿ-ಕೆಸರು ಮಣ್ಣು, ಧೂಳು ಮೆತ್ತಿಕೊಳ್ಳದಂತೆ ನೋಡಿಕೊಳ್ಳಿ
click me!