ಜಾವಾ ಮೋಟರ್ ಬೈಕ್ ಬೆನ್ನಲ್ಲೇ ರಸ್ತೆಗಿಳಿಯಲಿದೆ ಯಜ್ಡಿ ಬೈಕ್!

By Web Desk  |  First Published Nov 18, 2018, 12:30 PM IST

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಮೋಟರ್ ಬೈಕ್ ಬಿಡುಗಡೆಯಾಗಿದೆ. ಈ ಮೂಲಕ  ಬೈಕ್ ಪ್ರಿಯರ ಸಂತಸ ಇಮ್ಮಡಿಗೊಂಡಿದೆ. ಇದೀಗ  ಜಾವಾ ಬಿಡುಗಡೆ ಬೆನ್ನಲ್ಲೇ ಯಜ್ಡಿ ಬೈಕ್ ಕೂಡ ಬಿಡುಗಡೆಗೆ ಸಜ್ಜಾಗಿದೆ.
 


ಮುಂಬೈ(ನ.18): ಭಾರತದಲ್ಲಿ 1996ರಿಂದ ಕಣ್ಮರೆಯಾಗಿದ್ದ ಜಾವಾ ಮೋಟಾರ್ ಈಗಾಗಲೇ ಮತ್ತೆ ಬಿಡುಗಡೆಯಾಗಿದೆ. ಕ್ಲಾಸಿಕ್ ಲೆಜೆಂಡ್ ಹಾಗೂ ಮಹೀಂದ್ರ ಮೋಟಾರ್ಸ್ ಭಾರತದಲ್ಲಿ ಜಾವಾ ಬೈಕ್‌ಗಳನ್ನ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಮಹೀಂದ್ರ ಇದೀಗ ಯಜ್ಡಿ ಬೈಕ್ ಬಿಡುಗಡಗೆ ಮುಂದಾಗಿದೆ.

Tap to resize

Latest Videos

undefined

ಜಾವಾ ಹಾಗೂ ಯಜ್ಡಿ ಬೈಕ್‌ಗಳ ನಿರ್ಮಾಣದ ಹಕ್ಕನ್ನ ಮಹೀಂದ್ರ ಸಂಸ್ಥೆ ಹೊಂದಿದೆ. ಹೀಗಾಗಿ ಶೀಘ್ರದಲ್ಲೇ ಮಹೀಂದ್ರ ಯಜ್ಡಿ ಬೈಕ್ ಕೂಡ ರಸ್ತೆಗಿಳಿಸಲು ಯೋಜಜನೆ ಹಾಕಿಕೊಂಡಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ‌ಬೈಕ್‌ಗಳಿಗೆ ಮತ್ತೊಂದು ಹೊಡೆತ ನೀಡಲು ಮುಂದಾಗಿದೆ.

ಜಾವಾ ಬೈಕ್ ಬಿಡುಗಡೆ ಸಮಾರಂಭದಲ್ಲಿ ಮಹೀಂದ್ರ ಗ್ರೂಪ್ ಚೇರ್ಮೆನ್ ಆನಂದ್ ಮಹೀಂದ್ರ ಯಜ್ಡಿ ಬೈಕ್ ಬಿಡುಗಡೆ ಸುಳಿವು ನೀಡಿದ್ದಾರೆ.  ಸದ್ಯ ಬಿಡುಗಡೆಯಾಗಿರುವ ಜಾವಾ 293 ಸಿಸಿ ಬೈಕ್ ಆಗಿದ್ದು ಇದೀಗ ಯಜ್ಡಿ 250 ಸಿಸಿ ಎಂಜಿನ್ ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ.

ಮಹೀಂದ್ರ ಬಿಡುಗಡೆ ಮಾಡಿರುವ ಜಾವಾ ಹಾಗೂ ಜಾವಾ 42 ಬೈಕ್ ಮೋಟರ್‍ ‌ಬೈಕ್ 293 ಸಿಸಿ ಎಂಜಿನ್ ಹೊಂದಿದ್ದರೆ, ಜಾವಾ ಪೆರಾಕ್ 334 ಸಿಸಿ ಎಂಜಿನ್ ಹೊಂದಿದೆ. ಜಾವಾ ಹಾಗೂ ಜಾವಾ 42 ಎರಡೂ ಬೈಕ್ ರೆಟ್ರೋ ಲುಕ್ ಹೊಂದಿದೆ. ಈ ಹಿಂದೆ ಇದ್ದ ಜಾವಾ ಬೈಕ್ ಲುಕನ್ನೇ ನೂತನ ಬೈಕ್ ಹೊಂದಿದೆ. ಎಂಜಿನ್‌ಗಳಲ್ಲೂ ಹೆಚ್ಚಿನ ಬದಲಾವಣೆ ಇಲ್ಲ. 293 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ.

2019ರ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನೂತನ ಯಜ್ಡಿ ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮಹೀಂದ್ರ ಯೋಜನೆ ಹಾಕಿಕೊಂಡಿದೆ. ಜಾವಾ ರೀತಿಯಲ್ಲಿ ಹಳೆೇ ರೆಟ್ರೋ ಲುಕ್‌ನಲ್ಲಿ ಯಜ್ಡಿ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

click me!