ಇಂದಿನಿಂದ ಒಂದು ವರ್ಷ 'ಪರಾಭವ' ಸಂವತ್ಸರ: ವರ್ಷಕ್ಕೇಕೆ ಸೋಲಿನ ಹೆಸರು? ಇಲ್ಲಿದೆ ಕುತೂಹಲ

Published : Mar 19, 2026, 08:51 PM IST
Parabhava Samvatsara

ಸಾರಾಂಶ

ಹಿಂದೂಗಳ ಹೊಸ ವರ್ಷ ಯುಗಾದಿಯೊಂದಿಗೆ ಆರಂಭವಾಗುವ ಪರಾಭವ ಸಂವತ್ಸರವು ಸೋಲಿನ ಸಂಕೇತವಲ್ಲ. ಬದಲಿಗೆ, ಇದು ನಮ್ಮಲ್ಲಿರುವ ಅಹಂಕಾರ, ದುರ್ವ್ಯಸನ ಮತ್ತು ಕೆಟ್ಟ ಆಲೋಚನೆಗಳನ್ನು ಪರಾಭವಗೊಳಿಸಿ ಆತ್ಮಶುದ್ಧಿ ಮಾಡಿಕೊಳ್ಳುವ ವರ್ಷವಾಗಿದೆ. ಗುರು ಅಧಿಪತಿಯಾಗಿರುವ ಈ ಸಂವತ್ಸರದಲ್ಲಿ ಜ್ಞಾನಕ್ಕೆ ಪ್ರಾಮುಖ್ಯತೆ ಇರಲಿದೆ.

ಹಿಂದೂಗಳಿಗೆ ಹೊಸ ವರ್ಷದ ಆರಂಭ ಯುಗಾದಿ. ಎಲ್ಲೆಲ್ಲೂ ಯುಗ ಯುಗಾದಿ ಕಳೆದರೂ ಹಾಡಿನ ಕಂಪು. ಆದರೆ, ಇಂದಿನಿಂದ ಅರ್ಥಾತ್​ ಮಾರ್ಚ್​ 19ರಿಂದ ಮುಂದಿನ ವರ್ಷದ ಯುಗಾದಿಯವರೆಗೂ ಪರಾಭವ ಸಂವತ್ಸರ ಎಂದು ಹೆಸರು. ಪರಾಭವ ಎನ್ನುವುದು ಸೋಲಿನ ಅರ್ಥ. ಹಾಗಿದ್ದರೆ ಈ ವರ್ಷ ಎಲ್ಲರಿಗೂ ಸೋಲಾ? ಏಕೆ ಪರಾಭವ ಎನ್ನುವ ಹೆಸರು ಇದೆ? ಏನಿದು ಸಂವತ್ಸರ ಎಂದೆಲ್ಲಾ ಕೆಲವರಿಗೆ ಸಂದೇಹ ಕಾಡುವುದು ಇದೆ. ಅದರ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ.

ಯಾವುದಕ್ಕೆ ಸೋಲು?

ಅಷ್ಟಕ್ಕೂ ಪರಾಭವ ಎಂದರೆ ಸೋಲು ಎನ್ನುವುದು ನಿಜವೇ. ಆದರೆ ಯಾವುದರ ವಿರುದ್ಧ ಸೋಲು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಅಂದಹಾಗೆ ಹಿಂದೂ ಶಾಸ್ತ್ರದ ಪ್ರಕಾರ ಒಟ್ಟೂ 60 ಸಂವತ್ಸರಗಳಿವೆ. ಪರಾಭವ ಸಂವತ್ಸರ ಅದರಲ್ಲಿ 40ನೆಯದ್ದು. 60 ವರ್ಷಗಳ ಬಳಿಕ ಮತ್ತೆ ಆರಂಭದ ಸಂವತ್ಸರದಿಂದ ಶುರುವಾಗುತ್ತದೆ. ಹೀಗೆ 60 ವರ್ಷಗಳ ಚಕ್ರ ಇದಾಗಿದ್ದು, ಇದರಲ್ಲಿ 40ನೇಯದ್ದೇ ಪರಾಭವ ಸಂವತ್ಸರ. ನಮ್ಮ ಹಿರಿಯರು ಶಾಸ್ತ್ರ, ಪುರಾಣ ಮಾಡುವಾಗ ಸುಖಾಸುಮ್ಮನೇ ಏನನ್ನೋ ಮಾಡಿಲ್ಲ. ಪ್ರತಿಯೊಂದರಲ್ಲಿಯೂ ಅದರದ್ದೇ ಆದ ಅರ್ಥವಿದೆ. ಅದೇ ರೀತಿ ಪರಾಭವಕ್ಕೂ ಒಂದು ಅರ್ಥವಿದೆ. ಇಲ್ಲಿ ನಮ್ಮಲ್ಲಿರುವ ಅಹಂಕಾರ, ದುರ್ವ್ಯಸನ ಮತ್ತು ಕೆಟ್ಟ ಆಲೋಚನೆಗಳನ್ನು ನಾಶ ಮಾಡಿ ಅರ್ಥಾತ್​ ಅದನ್ನು ಪರಾಭವಗೊಳಿಸಿ ಆತ್ಮಶುದ್ಧಿ ಮಾಡುವುದು ಎಂದು ಇದರ ಅರ್ಥ.

ಲೌಕಿಕ ಸೋಲಲ್ಲ

ಇದು ಕೇವಲ ಲೌಕಿಕ ಸೋಲಲ್ಲ, ಬದಲಿಗೆ ಕೆಟ್ಟದ್ದರ ಮೇಲೆ ಒಳ್ಳೆಯದಿನ ವಿಜಯ ಸಾಧಿಸುವ ಸಂಕೇತ ಎಂದು ಹೇಳಲಾಗಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಗುರುವು ಈ ಸಂವತ್ಸರದ ಅಧಿಪತಿ ಗುರು. ಜ್ಞಾನ, ಶಿಕ್ಷಣ ಮತ್ತು ನೈತಿಕ ನಾಯಕತ್ವದ ಪ್ರಾಮುಖ್ಯತೆಗೆ ಈ ವರ್ಷ ಹೆಚ್ಚಿನ ಒತ್ತು ನೀಡುತ್ತದೆ; ಹಾಗೆಯೇ ಕಪಟ ಗುರುಗಳನ್ನು ಪರೀಕ್ಷೆಗೆ ಒಡ್ಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ವರ್ಷದ ಪ್ರಮುಖ ಬದಲಾವಣೆಗಳಲ್ಲಿ ಜೂನ್ 2 ರಂದು ಗುರುವು ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದು ಮತ್ತು ನಂತರ ಸಿಂಹ ರಾಶಿಗೆ ಚಲಿಸುವುದು ಸೇರಿದೆ. ಇದರೊಂದಿಗೆ ಡಿಸೆಂಬರ್ 6 ರಂದು ರಾಹು-ಕೇತುಗಳು ಮಕರ-ಕರ್ಕಾಟಕ ರಾಶಿಗಳಿಗೆ ಸ್ಥಳಾಂತರಗೊಳ್ಳಲಿದ್ದು, ಇವು ಜಾಗತಿಕ ವಿದ್ಯಮಾನಗಳನ್ನು ಗಣನೀಯವಾಗಿ ಬದಲಾಯಿಸಲಿವೆ.

60 ಸಂವತ್ಸರಗಳು (60 Samvatsaras)

1. ಪ್ರಭವ, 2. ವಿಭವ, 3. ಶುಕ್ಲ, 4. ಪ್ರಮೋದ, 5. ಪ್ರಜೋತ್ಪತ್ತಿ, 6. ಆಂಗೀರಸ, 7. ಶ್ರೀಮುಖ, 8. ಭಾವ, 9. ಯುವ, 10. ಧಾತ್ರಿ,

11. ಈಶ್ವರ, 12. ಬಹುಧಾನ್ಯ, 13. ಪ್ರಮಾಧಿ, 14. ವಿಕ್ರಮ, 15. ವರುಷ/ವೃಷ, 16. ಚಿತ್ರಭಾನು, 17. ಸ್ವಭಾನು, 18. ತಾರಣ, 19. ಪಾರ್ಥಿವ, 20. ವ್ಯಯ,

21. ಸರ್ವಜಿತ್, 22. ಸರ್ವಧಾರಿ, 23. ವಿರೋಧಿ, 24. ವಿಕೃತ, 25. ಖರ, 26. ನಂದನ, 27. ವಿಜಯ, 28. ಜಯ, 29. ಮನ್ಮಥ, 30. ದುರ್ಮುಖ,

31. ಹೇವಿಳಂಬಿ, 32. ವಿಳಂಬಿ, 33. ವಿಕಾರಿ, 34. ಶಾರ್ವರಿ, 35. ಪ್ಲವ, 36. ಶುಭಕೃತ, 37. ಶೋಭಾಕೃತ, 38. ಕ್ರೋಧಿ, 39. ವಿಶ್ವಾವಸು, 40. ಪರಾಭವ,

41. ಪ್ಲವಂಗ, 42. ಕೀಲಕ, 43. ಸೌಮ್ಯ, 44. ಸಾಧಾರಣ, 45. ವಿರೋಧಿಕೃತ, 46. ಪರಿಧಾವಿ, 47. ಪ್ರಮಾಧಿ, 48. ಆನಂದ, 49. ರಾಕ್ಷಸ, 50. ನಳ,

51. ಪಿಂಗಳ, 52. ಕಾಳಯುಕ್ತಿ, 53. ಸಿದ್ಧಾರ್ಥಿ, 54. ರುದ್ರ, 55. ದುರ್ಮತಿ, 56. ದುಂದುಭಿ, 57. ರುದಿರೋದ್ಗಾರಿ, 58. ರಕ್ತಾಕ್ಷಿ, 59. ಕ್ರೋಧನ, 60. ಅಕ್ಷಯ / ಕ್ಷಯ?

PREV
Read more Articles on
click me!

Recommended Stories

ಈ ಸಂಖ್ಯೆ ಹೊಂದಿರುವ ಜನರು ಶ್ರೀಮಂತರಾಗಲು ಹುಟ್ಟಿದವರು, ಇವರೇ ನಂಬರ್ ಒನ್
Vastu Tips: ಮನೆಯ ವಾಸ್ತು ಬಾಗಿಲು ಹೇಗಿರಬೇಕು? ಸರಿಯಾದ ದಿಕ್ಕು ಯಾವುದು ಗೊತ್ತಾ