
ನವದೆಹಲಿ (ಸೆ.07) ಇಂದು ರಾತ್ರಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 8.58ಕ್ಕೆ ಚಂದ್ರಗ್ರಹಣ ಆರಂಭಗೊಳ್ಳಲಿದೆ. ರಕ್ತ ಚಂದ್ರಗ್ರಹಣದ ವೇಳೆ ಬಹುತೇಕ ದೇವಸ್ಥಾನದ ಬಾಗಿಲು ಮುಚ್ಚಲಿದೆ. ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಲಾಗುತ್ತದೆ. ತಿರುಪತಿ ತಿರುಮಲ ಸೇರಿದಂತೆ ಬಹುತೇಕ ದೇವಸ್ಥಾನಗಳು ಚಂದ್ರಗ್ರಹಣದ ವೇಳೆ ಬಂದ್ ಆಗಲಿದೆ. ಚಂದ್ರಗ್ರಹಣ, ಸೂರ್ಯಗ್ರಹಣ ಸಂಭವಿಸುವ ವೇಳೆ ಹಲವು ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತದೆ. ಈ ಪೈಕಿ ಇಂದು ರಾತ್ರಿ ಸಂಭವಿಸಲಿರುವ ಚಂದ್ರಗ್ರಹಣದ ವೇಳೆ ಪ್ರಯಾಣ ಮಾಡಬಹುದಾ? ಅನ್ನು ಪ್ರಶ್ನೆ ಕೂಡ ಪ್ರಮುಖವಾಗಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ
ಹಿಂದೂ ನಂಬಿಕೆ, ಭಾರತೀಯ ಸಂಪ್ರದಾಯಗಳು ಪ್ರಕೃತಿಯನ್ನು ಆರಾಧಿಸುವ ಹಾಗೂ ಪ್ರಕೃತಿಯೊಂದಿಗೆ ಜೀವಿಸುವ ಪದ್ಧತಿಯಾಗಿದೆ. ಸೂರ್ಯನ ಬೆಳಕು, ಚಂದ್ರ, ಗಾಳಿ, ನೀರು, ಮರ ಸೇರಿದಂತೆ ಹಲವು ಮನುಷ್ಯನ ಬದುಕಿಗೆ ಅತ್ಯವಶ್ಯಕ. ಹೀಗಾಗಿ ಪ್ರಕೃತಿಯಲ್ಲಿನ ಸಣ್ಣ ಬದಲಾವಣೆಗಳು ಆರೋಗ್ಯ, ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಪೈಕಿ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣ ಅತ್ಯಂತ ಪ್ರಮುಖ. ಇಂದು ರಾತ್ರಿ ಸಂಭವಿಸುವ ಚಂದ್ರಗ್ರಹಣದ ವೇಳೆ ಪ್ರಯಾಣ ಉತ್ತಮವಲ್ಲ ಎಂದು ಹಿಂದೂ ನಂಬಿಕೆ, ಜ್ಯೋತಿಷ್ಯಶಾಸ್ತ್ರಗಳು ಹೇಳುತ್ತದೆ. ಇದಕ್ಕೆ ಹಲವು ಕಾರಣಗಳೂ ಇವೆ.
ಚಂದ್ರಗ್ರಹಣದ ವೇಳೆ ನೆಗಟೀವ್ ಎನರ್ಜಿ ತುಂಬಿರುತ್ತದೆ. ಗ್ರಹಣ ಉತ್ತಮ ಘಳಿಗೆಯಲ್ಲ ಎಂಬ ನಂಬಿಕೆಯೂ ಇದೆ. ನೆಗಟೀವ್ ಎನರ್ಜಿ, ಆರೋಗ್ಯದ ಮೇಲೆ ಪರಿಣಾಮ ಬೀರುವ ಸಮಯ ಹಾಗೂ ಶುಭ ಘಳಿಗೆಯಲ್ಲದ ಕಾರಣ ಗ್ರಹಣ ವೇಳೆ ಪ್ರಯಾಣ ಉತ್ತಮವಲ್ಲ. ಈ ಸಂದರ್ಭದಲ್ಲಿ ಪ್ರಯಾಣ ಮಾಡುವ ಉದ್ದೇಶ ಈಡೇರದೆ ಇರಬಹುದು, ಕೆಲ ಅಡಚಣೆಗಳು ಎದುರಾಗಬಹುದು. ಮಾನಸಿಕ ನೆಮ್ಮದಿ ಹಾಳಾಗಬಹುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನೆಂದರೆ ಮನಸ್ಸು ಹಾಗೂ ಭಾವನೆ. ಚಂದ್ರನಿಗೆ ಮತ್ತೊಂದು ಗ್ರಹ ಅಡ್ಡಬಂದಾಗ ಮನಸ್ಸು ಹಾಗೂ ಭಾವನೆಗಳು ತಳಮಳಗೊಳ್ಳುತ್ತದೆ. ಜೊತೆಗೆ ಈ ಸಂದರ್ಭದಲ್ಲಿನ ಪ್ರಯಾಣ ಫಲ ನೀಡುವುದಿಲ್ಲ ಎಂದು ಹೇಳಲಾಗುತ್ತದೆ.
ಆ ಮಹಿಳೆ "ಚಂದ್ರ ಗ್ರಹಣದಂದು ಹೆರಿಗೆ ಬೇಡ" ಅಂದಿದ್ದಕ್ಕೆ ಡಾಕ್ಟರ್ ಕೊಟ್ಟ ಉತ್ತರ ಅಚ್ಚರಿಯಾಗಿತ್ತು!
ಅನಗತ್ಯ ಪ್ರಯಾಣವನ್ನು ರದ್ದು ಮಾಡಬಹುದು. ಅನಿವಾರ್ಯತೆ ಪ್ರಯಾಣದ ಮಂದಿ ಮುಂದೆ ಬೇರೆ ಆಯ್ಕೆಗಳಿರುವುದಿಲ್ಲ.ಈ ಸಂದರ್ಭದಲ್ಲಿ ಗರ್ಭಿಣಿಯರು ಪ್ರಯಾಣ ಮಾಡುವುದು ಉತ್ತಮವಲ್ಲ ಎಂದು ಹಿಂದೂ ಶಾಸ್ತ್ರಗಳು ಹೇಳುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಣದ ವೇಳೆ ಪ್ರಯಾಣ, ಹೊರಗಡೆ ಸುತ್ತಾಡುವುದು, ಆಹಾರ ಸೇವನೆ ಸೇರಿದಂತೆ ಹಲವು ಕಾರ್ಯಗಳಿಗೂ ನಿರ್ಬಂಧ ಹೇರಲಾಗುತ್ತದೆ. ಹಿಂದೂ ನಂಬಿಕೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ವೇಳೆ ಮನೆಯೊಳಗಿರಬೇಕು. ದೇವರ ಭಜನೆ, ಜಪ, ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಈ ವೇಳೆ ಆಹಾರ ಸೇವೆ ಆರೋಗ್ಯದ ಮೇಲೇ ಪರಿಣಾಮ ಬೀರಬಹುದು. ದೇವಸ್ಥಾನದ ಬಾಗಿಲು ಕೂಡ ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ ಶುದ್ದೀಕರಣ ಕಾರ್ಯಗಳು ನಡೆಯಲಿದೆ. ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.
ಇಂದು (ಸೆ.07) ರಾತ್ರಿ 8.58 ಚಂದ್ರಗ್ರಹಣ ಆರಂಭಗೊಳ್ಳಲಿದೆ. ರಾತ್ರಿ 11 ಗಂಟೆಯಿಂದ 12.22ರ ನಡುವೆ ರಕ್ತ ಚಂದ್ರಗ್ರಹಣ ಘಟಿಸಲಿದೆ. ಇನ್ನು ಚಂದ್ರಗ್ರಹಣ ಸಂಪೂರ್ಣಗೊಳ್ಳುವ ಸಮಯ ಸೆಪ್ಟೆಂಬರ್ 8ರ ರಾತ್ರಿ 2.25ರ ಸಮಯದಲ್ಲಿ . ವಿಶೇಷ ಅಂದರೆ ಈ ಬಾರಿಯ ಚಂದ್ರಗ್ರಹಣ ಬರೋಬ್ಬರಿ 82 ನಿಮಿಷಗಳ ಕಾಲ ಇರಲಿದೆ. ಈ ಮೂಲಕ ಸುದೀರ್ಘ ಸಮಯದ ಚಂದ್ರಗ್ರಹಣ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಲಿದೆ.