ಶವದ ಜೊತೆ ಸಂಬಂಧ ಬೆಳೆಸಿದ್ರೆ ಅಘೋರಿಗಳಿಗೆ ಸಿಗೋದೇನು?

By Roopa Hegde  |  First Published Nov 11, 2024, 12:07 PM IST

ಅಘೋರಿಗಳನ್ನು ನೋಡಿದ್ರೆ ಭಯವಾಗೋದು ಸಹಜ. ಅವರ ವೇಷ – ಭೂಷಣ, ಜೀವನ ಕ್ರಮ ಸಂಪೂರ್ಣ ಭಿನ್ನವಾಗಿದೆ. ನಮಗೆ ಕಾನೂನು ಬಾಹಿರವಾಗಿರುವ ಕೆಲಸವನ್ನು ಅವರು ಶಿವನ ಹೆಸರಿನಲ್ಲಿ ಮಾಡ್ತಾರೆ. 
 


ಅಘೋರಿ (Aghori) ಶಬ್ಧ, ಬೆಳಕಿನ ಕಡೆಗೆ ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಪವಿತ್ರವೆಂದು, ಎಲ್ಲ ದುಷ್ಟತನದಿಂದ ಮುಕ್ತವಾಗಿದ್ದು ಎಂದು ನಂಬಲಾಗುತ್ತದೆ. ಆದ್ರೆ ಅಘೋರಿ ಬಾಬಾಗಳು ಇದಕ್ಕೆ ವಿರುದ್ಧ ಜೀವನ ಶೈಲಿ (lifestyle )ಯನ್ನು ಅಳವಡಿಸಿಕೊಂಡಿದ್ದಾರೆ. ಅವರ ಬಹುತೇಕ ಕೆಲಸಗಳು ಕಾನೂನು ಬಾಹಿರವಾಗಿವೆ. ಮುಖದ ತುಂಬಾ ಬೂದಿ ಬಳಿದುಕೊಂಡು ಓಡಾಡುವ ಅಘೋರಿಗಳು, ಹಸಿ ಮಾಂಸ (Raw meat) ದ ಸೇವನೆ ಮಾಡುತ್ತಾರೆ. ವಾಮಾಚಾರ ಮಾಡುತ್ತಾರೆ. ಇದ್ರ ಜೊತೆ ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಭಯಾನಕ ಅಭ್ಯಾಸವನ್ನು ಅವರು ಹೊಂದಿದ್ದಾರೆ.

ಅಘೋರಿಗಳು ಶಿವ ಮತ್ತು ಶಕ್ತಿ (Shiva and Shakti )ಯ ಆರಾಧಕರು. ಅತ್ಯಂತ ಕೆಟ್ಟ ಸಂದರ್ಭಗಳಲ್ಲಿಯೂ ದೇವರಿಗೆ ಶರಣಾಗುವುದು ಪೂಜೆಯ ಸರಳ ಮಾರ್ಗ ಎಂದು ಅಘೋರಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಶವದ ಜೊತೆ ಶಾರೀರಿಕ ಸಂಬಂಧವನ್ನು ಬೆಳೆಸ್ತಾರೆ.

Tap to resize

Latest Videos

undefined

ಸುಖಮಯ ದಾಂಪತ್ಯದ 5 ರಹಸ್ಯ ಇಲ್ಲಿದೆ

ಅಘೋರಿ ಸಾಧುಗಳು, ಮೃತ ದೇಹಗಳನ್ನು ಪೂಜೆ ಮಾಡ್ತಾರೆ. ಜೊತೆಗೆ ದೈಹಿಕ ಸಂಬಂಧ ಬೆಳೆಸ್ತಾರೆ. ಶಿವ ಮತ್ತು ಶಕ್ತಿಯನ್ನು ಪೂಜಿಸುವ ವಿಧಾನವೆಂದು ಅವರು ನಂಬುತ್ತಾರೆ. ಮೃತದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗಿರುತ್ತದೆ ಎಂಬುದು ಅವರ ನಂಬಿಕೆ. ಮೃತ ದೇಹಕ್ಕೆ ಬೂದಿ ಬಳಿದ ಮಂತ್ರಗಳನ್ನು ಉಚ್ಚರಿಸ್ತಾ, ಡ್ರಮ್ ಬಾರಿಸುವ ಮೂಲಕ ದೈಹಿಕ ಸಂಬಂಧವನ್ನು ಸೃಷ್ಟಿಸುತ್ತಾರೆ. ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿದ್ದಾಗ ಶಾರೀರಿಕ ಸಂಬಂಧ ಬೆಳೆಸಿದ್ರೆ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಘೋರಿಗಳು ಇತರ ಸಾಧುಗಳಂತೆ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ. ಅವರು ಶವದ ಜೊತೆ ಮಾತ್ರವಲ್ಲ ಜೀವಂತ ವ್ಯಕ್ತಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ.

ಶಿವ - ಮೃತದೇಹದ ಆರಾಧಕರು : ಅಘೋರಿಗಳು ಸಂಪೂರ್ಣವಾಗಿ ಶಿವನ ಭಕ್ತಿಯಲ್ಲಿ ಲೀನವಾಗಲು ಬಯಸ್ತಾರೆ. ಅಘೋರವು ಶಿವನ ಐದು ರೂಪಗಳಲ್ಲಿ ಒಂದಾಗಿದೆ. ಶಿವನನ್ನು ಪೂಜಿಸಲು ಈ ಅಘೋರಿಗಳು ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾರೆ. ಶಿವನ ಕೃಪೆಗೆ ಪಾತ್ರರಾಗಲು ಈ ವಿಧಾನವು ಅಘೋರ ಪಂಥದ ವಿಶಿಷ್ಟ ವಿಧಾನವಾಗಿದೆ. ಅಘೋರಿಗಳು ಶವ ಸಾಧನ ಎಂಬ ಮೂರು ವಿಧದ ಸಾಧನಗಳನ್ನು ಮಾಡುತ್ತಾರೆ. ಇದರಲ್ಲಿ ಮೃತ ದೇಹಕ್ಕೆ ಮಾಂಸ ಮತ್ತು ಮದ್ಯವನ್ನು ಅರ್ಪಿಸಲಾಗುತ್ತದೆ. ಮೂರನೇಯದು, ಶವದ ಮೇಲೆ ಒಂದು ಕಾಲನ್ನಿಟ್ಟು ತಪಸ್ಸು ಮಾಡುವುದು. ಇದು ಸ್ಮಶಾನದಲ್ಲಿ ನಡೆಯುತ್ತದೆ. ಈ ವೇಳೆ ಹವನ ಮಾಡಲಾಗುತ್ತದೆ.

ಸಾಮಾನ್ಯ ಜನರಿಗೆ ಅಘೋರಿಗಳು ಮಾಡುವಂತಹ ಕೆಲಸಗಳು ಅಸಹ್ಯಕರ ಸಂಗತಿಗಳಾಗಿವೆ. ಆದ್ರೆ ಅಘೋರಿಗಳಿಗೆ ಇದು ಆಧ್ಯಾತ್ಮಿಕ ಅಭ್ಯಾಸದ ಒಂದು ಭಾಗವಾಗಿದೆ. ಮೃತ ದೇಹದಿಂದ ಎಣ್ಣೆಯನ್ನು ತೆಗೆಯುವ ಅಘೋರಿಗಳು ಅದನ್ನು ಖಾಯಿಲೆಗೆ ಬಳಸುತ್ತಾರೆ. ಏಡ್ಸ್, ಕ್ಯಾನ್ಸರ್ ನಂತಹ ಖಾಯಿಲೆಗೆ ಔಷಧವಿದೆ ಎಂದು ಅವರು ನಂಬುತ್ತಾರೆ. ಆದ್ರೆ ಈ ಬಗ್ಗೆ ಯಾವುದೇ ಸಂಶೋಧನೆಯಾಗಿಲ್ಲ. 

ದೇವರಿಗೆ ಅಗರಬತ್ತಿ ಉರಿಸುವಾಗ ಇದು ಗೊತ್ತಿರಲಿ! ಯಾವ ದೇವರಿಗೆ ಯಾವ ಪರಿಮಳದ ಅಗರಬತ್ತಿ?

ಅಘೋರಿಗಳ ಜೀವನ : ಅಘೋರಿಗಳು ಶಿವನನ್ನು ಬಿಟ್ಟು ಮತ್ತ್ಯಾವ ದೇವರ ಮೇಲೂ ನಂಬಿಕೆ ಹೊಂದಿಲ್ಲ. ಅವರು ಯಾರೊಬ್ಬರನ್ನು ಕೂಡ ದ್ವೇಷ ಮಾಡೋದಿಲ್ಲ. ಅಘೋರಿಗಳು ನಾಯಿಗಳನ್ನು ಬಿಟ್ಟು ಹಸು, ಕೋಳಿ ಸೇರಿದಂತೆ ಮತ್ತ್ಯಾವ ಪ್ರಾಣಿಯನ್ನು ಸಾಕುವುದಿಲ್ಲ. ಅಘೋರಿಗಳಿಗಾಗಿಯೇ ಕೆಲ ದೇವಸ್ಥಾನಗಳಿದ್ದು, ಅವರು ಅಲ್ಲಿ ವಾಸ ಮಾಡುತ್ತಾರೆ. ಕಾಶಿಯಲ್ಲಿ ಮೊದಲು ಹೆಚ್ಚಾಗಿ ಕಾಣಿಸಿಕೊಳ್ತಿದ್ದ ಈ ಅಘೋರಿಗಳು ಈಗ ದೇಶದ ಮೂಲೆ ಮೂಲೆಯಲ್ಲಿದ್ದಾರೆ. ನೇಪಾಳದ ಅಘೋರಿ ಕುಟಿ, ಕಾಳಿ ಮಠ, ಚಿತ್ರಕೂಟ ಸೇರಿದಂತೆ ಅನೇಕ ದೇವಸ್ಥಾನಗಳು ಅವರಿಗೆ ಮೀಸಲಾಗಿವೆ. 
 

click me!