ವಾರ ಭವಿಷ್ಯ: ಉದ್ಯೋಗದಲ್ಲಿ ಬಡ್ತಿ, ವಾರಾಂತ್ಯದಲ್ಲಿ ಶುಭ ಸುದ್ದಿ

By Web Desk  |  First Published Feb 3, 2019, 7:24 AM IST

ಶುಭೋದಯ ಓದುಗರೇ, ಈ ವಾರ ನಿಮ್ಮ ರಾಶಿ ಫಲಗಳು ಹೀಗಿವೆ. ಈ ವಾರದ ಭವಿಷ್ಯ ನೋಡಿ ಬಿಡಿ ದಿನವನ್ನು ಆರಂಭಿಸಿ, ಶುಭದಿನ


ಮೇಷ: ಮಾಡುವ ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರದ್ಧೆ ನಿಮ್ಮಲ್ಲಿರಲಿದೆ. ಸ್ನೇಹಿತರಿಂದ ಪ್ರೋತ್ಸಾಹ ಸಿಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಈ ವಾರ ನೀವು ಅಂದುಕೊಂಡ ಕೆಲಸಗಳು ಸೂಸೂತ್ರವಾಗಿ ನೆರವೇರ ಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕಿರಿಕಿರಿ, ಮನಸ್ಸಲ್ಲಿ ಗೊಂದಲ. ಮಹಿಳೆಯರಿಗೆ ಉತ್ತಮ ಲಾಭ ಸಿಗಲಿದೆ.

ವೃಷಭ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಮೇಲಧಿ ಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಾರದ ಮಧ್ಯೆ ಒತ್ತಡದ ಕೆಲಸ ಬರಲಿದ್ದು, ಆದಷ್ಟು ಧ್ಯಾನ ಮಾಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವುದು ಉತ್ತಮ. ಜೀವನದಲ್ಲಿ ಹೊಸ ಸ್ನೇಹಿತರ ಆಗಮನ. ವಾರಾಂತ್ಯದಲ್ಲಿ ದೂರ ಪ್ರಯಾಣ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.

Tap to resize

Latest Videos

undefined

ಮಿಥುನ: ಸಣ್ಣ ವಿಚಾರಗಳಿಂದ ಮನೆಯಲ್ಲಿ ಮನಸ್ಥಾಪ ಎದುರಾಗಬಹುದು. ಆದಷ್ಟು ತಾಳ್ಮೆ ಕಂಡುಕೊಳ್ಳಿ. ನಿಮ್ಮ ನೇರ ಮಾತುಗಳೇ ನಿಮಗೆ ಮುಳುವಾಗಬ ಹುದು. ಮಹಿಳೆಯರಿಂದ ಮನೆ ನಿರ್ವಹಣೆ ಈ ವಾರ ಉತ್ತಮವಾಗಿ ನಡೆಯಲಿದೆ. ಹಿರಿಯರೊಂದಿಗೆ ದೇವಸ್ಥಾನ ಭೇಟಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಕಟಕ: ಈ ವಾರ ಹೊಸ ಕೆಲಸ ಆರಂಭಿಸಬೇಕು ಎನ್ನುವವ ರಿಗೆ ಉತ್ತಮ. ಕೈನಲ್ಲಿ ಹಣವಿದೆ ಎಂದು ನೀರಿನಂತೆ ಖರ್ಚು ಮಾಡದಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಮಹಿಳೆಯರಿಗೆ ಮನಸ್ಸಿನಲ್ಲಿ ಕೊಂಚ ಕಿರಿಕಿರಿ ಎದುರಾಗುವ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆ.

ಸಿಂಹ: ವಾರದ ಆರಂಭದಲ್ಲೇ ಅನಾರೋಗ್ಯದ ಸಮಸ್ಯೆ ಎದುರಾಗಲಿದೆ. ಆಹಾರದ ವಿಚಾರದಲ್ಲಿ ಮುಂಜಾಗ್ರತೆ ಅಗತ್ಯ. ಕಾರ್ಮಿಕ ವರ್ಗದವರಿಗೆ ಬಂಪರ್ ಸಾಧ್ಯತೆ. ಮಹಿಳೆಯರು ತಮ್ಮ ಸಣ್ಣ ಕೈ ಕೆಲಸದಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ. ವಾರಾಂತ್ಯದಲ್ಲಿ ಬಂಧುಗಳ ಆಗಮನ. ಶುಭ ಸುದ್ದಿ ಕೇಳುವಿರಿ

ಕನ್ಯಾ: ಸ್ನೇಹಿತರ ಜೊತೆಗೂಡಿ ಒಳ್ಳೆಯ ಕೆಲಸ ಕೈಗೂಡ ಲಿದೆ. ನಿಮ್ಮಿಂದ ಇನ್ನೊಬ್ಬರ ಜೀವನದಲ್ಲಿ ಸಂತಸ ಮೂಡಲಿದೆ. ಕಂಕಣ ಭಾಗ್ಯ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅಧ್ಯಾತ್ಮದಲ್ಲಿ ಹೆಚ್ಚು ಒಲವು ಮೂಡಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮಕ್ಕಳಿಂದ ನೆಮ್ಮದಿ ನೆಲೆಸಲಿದೆ.

ತುಲಾ: ಶಾಂತ ಮನಸ್ಸಿನಿಂದ ಎಂಥಹ ಕೆಲಸವೂ ಫಲಿಸು ವುದು. ಕೆಲಸ ಕಾರ್ಯದಲ್ಲಿ ಗೊಂದಲ ಬೇಡ. ಈ ವಾರ ಹಣಕಾಸಿನಲ್ಲಿ ಹೆಚ್ಚಿನ ಲಾಭ. ಅಕ್ಕಪಕ್ಕದ ಮನೆಯವರೊಂದಿಗೆ ಗೊಂದಲ ಎದುರಾಗಲಿದೆ. ಹೊಸ ವ್ಯಕ್ತಿಗಳ ಪರಿವಯವಾಗಲಿದೆ. ಮನೆಯಲ್ಲಿ ಶುಭ ಕಾರ್ಯಕ್ರ ಮಗಳು ನಡೆಯಲಿದೆ. ಸಂತಸದ ವಾರ ಇದಾಗಲಿದೆ.

ವೃಷ್ಚಿಕ: ಆತ್ಮವಿಶ್ವಾಸ ಹೆಚ್ಚಲಿದ್ದು, ಅಂದುಕೊಂಡ ಕೆಲಸಗಳು ಸೂಸೂತ್ರವಾಗಿ ನೆರವೇರಲಿದೆ. ಮನಸ್ಥಾಪ ಎದುರಾಗಬಹುದು, ಹಾಗಾಗಿ ಯಾರೊಂದಿಗೂ ವಾದ ಬೇಡ. ಪರೀಕ್ಷೆಗಳು ಈವಾರ ಎದುರಾಗುವ ಸಾಧ್ಯತೆ, ಆದರೆ ಅದನ್ನು ಉತ್ತಮವಾಗಿ ಎದುರಿಸಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ಗೌರವ ತಂದುಕೊಡಲಿದೆ.

ಧನುಸ್ಸು: ಯಾರನ್ನೂ ಅತಿಯಾಗಿ ನಂಬದಿರಿ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಚಾಣಾಕ್ಷ ನಡಿಗೆ ನಿಮ್ಮದಾಗಲಿದೆ. ಉತ್ತಮ ರೀತಿಯಲ್ಲಿ ಮನೆ ನಿರ್ವಹಣೆ. ಸುತ್ತಲಿನವರ ಪ್ರೀತಿ ಪಾತ್ರಕ್ಕೆ ಭಾಜನರಾಗುವಿರಿ.

ಮಕರ: ನಿಮ್ಮದಲ್ಲದ ತಪ್ಪಿಗೆ ಹೊಣೆರರಾಗಲಿದ್ದೀರಿ. ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಆರೋ ಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದ್ದು, ಹೆಚ್ಚು ನೀರು ಕುಡಿಯಿರಿ. ಹೊಸ ಕೆಲಸಗಳು ಬಂದಾಗ ಅದನ್ನು ತಿರಸ್ಕರಿಸ ದಿರಿ. ಹಿರಿಯರ ಸಲಹೆ ನಿಮಗೆ ಮಾರ್ಗದರ್ಶನ ತೋರಲಿದೆ

ಕುಂಭ: ಮಾಡಿದ ಕೆಲಸಗಳಿಗೆ ನಿರೀಕ್ಷೆಯಂತೆ ಉತ್ತಮ ಫಲ ಸಿಗಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾದರೂ ಅದನ್ನು ಯಶಸ್ವಿಯಾಗಿಯೇ ಪೂರೈಸಲಿದ್ದೀರಿ. ನಿಮ್ಮ ಕೆಲಸಗಳು ಇತರರಿಗೆ ಮಾದರಿಯಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ವಾರದ ಆರಂಭದಲ್ಲಿ ಅತಿಯಾದ ಸಂತೋಷ ವಾರಾಂತ್ಯದಲ್ಲಿ ಮರೆಮಾಚಲಿದೆ. ಕಹಿ ಸುದ್ದಿ ಕೇಳುವಿರಿ.

ಮೀನ: ಪ್ರೀತಿ ಪಾತ್ರರ ಆಗಮನದಿಂದ ಮನೆಯಲ್ಲಿ ಸಂತೋಷ ನೆಲಸಲಿದೆ. ಸ್ನೇಹಿತರೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳದಿರಿ. ದೂರ ಪ್ರಯಾ ಣ ಸಾಧ್ಯತೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಕೊಂಚ ಕಿರಿಕಿರಿ ಎದುರಾಗಲಿದ್ದು, ಪೋಷಕರ ಸಲಹೆ, ಸಹಕಾರ ಅಗತ್ಯ.

click me!