ಒತ್ತಡದಿಂದ ಹೊರ ಬರುತ್ತೀರಿ, ಸಿಹಿ ಸುದ್ದಿ ಕೇಳುವಿರಿ: ವಾರ ಭವಿಷ್ಯ

By Web Desk  |  First Published Aug 4, 2019, 7:12 AM IST

ಈ ವಾರದ ಭವಿಷ್ಯ ಹೇಗಿದೆ? ಯಾರಿಗೆಲ್ಲಾ ಶುಭ? ಇಲ್ಲಿದೆ ವಾರ ಭವಿಷ್ಯ


ಮೇಷ: ನೆಮ್ಮದಿಯ ನಾಳೆಗಳಿಗೆ ಇಂದಿನಿಂದ ತಯಾರಿ ನಡೆಯಲಿ. ಒತ್ತಡದಿಂದ ಹೊರಗೆ ಬರಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಉಳಿತಾಯದ ಕಡೆ ಗಮನ ಹರಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಳ. ಮಹಿಳೆಯರ ಕೈ ಕೆಲಸದಲ್ಲಿ ಚುರುಕಾಗಲಿದ್ದು, ಮನೆಯವರಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ

ವೃಷಭ: ವ್ಯಾಪರಕ್ಕೆ ಸಂಬಂಧಿಸಿದಂತೆ ದುಡುಕು ನಿರ್ಧಾರ ಕೈಗೊಳ್ಳದಿರಿ. ಅಂದುಕೊಂಡಂತೆ ಮಹತ್ವದ ಘಟನೆಗಳು, ನಿಮ್ಮ ಉತ್ತಮ ನಿರ್ಧಾರದಿಂದ ಈಡೇರಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಇದು ಸರಿಯಾದ ಸಮಯ. ಮೂರನೆಯವರ ಮಾತಿಗೆ ತಲೆಕೆಡಿಸಿಕೊಳ್ಳದಿರಿ. ಹಿರಿಯರ ಮಾತು ಕೇಳಿ ಮುನ್ನಡೆಯಿರಿ.

Tap to resize

Latest Videos

undefined

ಮಿಥುನ: ದಾಂಪತ್ಯ ಜೀವನದಲ್ಲಿ ಇಷ್ಟು ದಿನ ಇದ್ದ ಮನಸ್ಸಿನ ಅಂತರವು ಸರಿಯಾಗುವ ಸಮಯ ಬಂದಿದೆ. ಸುಖ ಸಂಸಾರ ಸಾಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಹೊಸತನ್ನು ಹೊಸದಾಗಿಯೇ ನೋಡಿದರೆ ನಿಮಗೇ ಒಳಿತು. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಏರಿಳಿತ ಕಾಣಲಿದ್ದೀರಿ.

ಕಟಕ: ದಕ್ಕಿದ್ದಷ್ಟೇ ನಿಮಗೆ ಸಿಗದಿದ್ದದ್ದು ಪರರಿಗೆ ಎಂದು ಸುಮ್ಮನಿದ್ದರೆ ನಿಮಗೇ ಒಳಿತು. ಅತಿಯಾಗಿ ಯಾರನ್ನೇ ಹಚ್ಚಿಕೊಂಡಷ್ಟು, ನಂಬಿಕೆ ಇಟ್ಟಷ್ಟು ಅದು ಹುಸಿಯಾಗುವುದು ಸಹಜ. ಅದನ್ನೇ ಮನಸ್ಸಲ್ಲಿಟ್ಟು ಕೊಂಡು ಕೊರಗದೆ, ಇರುವುದರಲ್ಲೇ ಖುಷಿ ಪಡಿ. ಮನಸ್ಸಿಗೆ ಕಿರಿಕಿರಿಯಾದರೆ ಧ್ಯಾನ ಮಾಡಿ.

ಸಿಂಹ: ಕೆಲವೊಮ್ಮೆ ಜೀವನಕ್ಕೆ ಸೋಲಬೇಕಾಗುತ್ತದೆ. ನಮ್ಮದೇ ನಡೆಯಬೇಕೆನ್ನುವ ಹುಂಬುತನ ಬಿಟ್ಟು ಬದುಕಿಗೆ ಸೋತು ಅದು ನಡೆಸಿದಂತೆ ಮುನ್ನಡೆಯಬೇಕು. ನಿಮ್ಮ ಜೊತೆಗಿನ ಜೀವಕ್ಕಾದರೂ ನೀವು ಈ ಕೆಲಸ ಮಾಡಬೇಕಾಗುತ್ತದೆ. ಹಳೆಯದನ್ನು ಮರೆತು ಮುಂದೆ ಸಾಗಬೇಕು. 

ಕನ್ಯಾ: ನೋವು ನಲಿವೆಂಬುದು ಸಿಹಿ-ಕಹಿಯಂತೆ. ಮನುಷ್ಯನ ಗುಣಕ್ಕೆ ಅವು ಅಂಟಿಕೊಂಡಿರುತ್ತವೆ. ಆದ ತಪ್ಪನ್ನು ಸರಿಪಡಿಸಿಕೊಳ್ಳಿ. ಯಾರನ್ನು ಮೆಚ್ಚಿಸಲೆಂದು ಕೆಲಸ ಮಾಡದೆ, ಮಾಡುವ ಕೆಲಸವನ್ನು ನಿಮ್ಮ ಆತ್ಮ ತೃಪ್ತಿಗಾಗಿ ಮನಸ್ಸಿಟ್ಟು ಮಾಡಿ. ನಿಮಗೆ ಸಿಗುವ ಖುಷಿಯೇ ಒಂದು ಸರ್ಟಿಫಿಕೆಟ್ ಇದ್ದಂತೆ.

ತುಲಾ: ಅಹಂನಿಂದ ಇನ್ನೊಬ್ಬರನ್ನು ಗೆಲ್ಲುತ್ತೀನಿ ಎನ್ನುವುದನ್ನು ಬಿಟ್ಟು ಪ್ರೀತಿ ವಿಶ್ವಾಸದಿಂದ ಗೆಲ್ಲುತ್ತೀನೆಂದು ಮುಂದೆ ಸಾಗಿ. ಅಹಂ ಎಂಬುದು ನಿಮ್ಮನ್ನು ಸುಟ್ಟು ಹಾಕುತ್ತದಾದರೆ, ವಿಶ್ವಾಸದಿಂದ ಗೆದ್ದರೆ ಎರಡು ಜೀವದ ಜೊತೆಗೆ ಮತ್ತಷ್ಟು ಜೀವಗಳು ಮೆಚ್ಚಿ ನಿಮ್ಮ ಜೊತೆಯಾಗುತ್ತವೆ.

ವೃಶ್ಚಿಕ: ಜೀವನದ ಪ್ರತಿ ಕ್ಷಣವೂ ಒಂದು ಪರೀಕ್ಷೆಯಂತೆ. ಅದನ್ನು ಎದುರಿಸಲು ಹೇಗೆ ತಯಾರಾಗಬೇಕು ಎನ್ನುವುದು ಮನಸ್ಸಿಗೆ ಬಿಟ್ಟಿದ್ದು. ಅದರಿಂದ ಬಂದ ರಿಸಲ್ಟ ಹೇಗಿದ್ದರೂ ಅದನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿ. ಆದಷ್ಟು ಪುಸ್ತಕ ಓದಿ, ಮನಸ್ಸಿನ ದುಗುಡ, ಗೊಂದಲಗಳನ್ನು ಅಳಿಸಿಬಿಡಿ. ದೂರ ಪ್ರಯಾಣ ಸಾಧ್ಯತೆ.

ಧನುಸ್ಸು: ಸಂಬಂಧಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚಾದರೆ ಒಡಕು ಮೂಡಲು ಕಾರಣವಾಗ ಬಹುದು. ಸಹಾಯವೂ ಎಷ್ಟು ಬೇಕೋ ಅಷ್ಟಿದ್ದರೆ ಒಳ್ಳೆಯದು. ಸಹೋದರರೆಲ್ಲರೂ ಮನೆಯಲ್ಲಿ ಒಟ್ಟಿಗೆ ಸೇರಿವುದರಿಂದ ಸಂಭ್ರಮ ನೆಲೆಸಲಿದೆ.

ಮಕರ: ಅಗತ್ಯ ಎನಿಸಿದ ವಿಚಾರದ ಕಡೆ ಮಾತ್ರ ಗಮನ ಕೊಡಿ. ಅನಾವಶ್ಯಕವಾಗಿ ಯಾರ ವಿಷಯದಲ್ಲೂ ತಲೆಹಾಕಬೇಡಿ. ಇಬ್ಬರ ನಡುವೆ ಮೂರನೇಯವರು ಸಮಸ್ಯೆ ಸರಿ ಮಾಡಲು ಹೋದರೆ ನಿಷ್ಟೂರವಾಗುವುದು ಮೂರನೇಯವರೆಂದು ನೆನಪಿರಲಿ.

ಕುಂಭ: ಸಣ್ಣ ಕೆಲಸಗಳಲ್ಲೂ ಖುಷಿ ಇರುತ್ತದೆ. ಅದನ್ನು ನಾವೇ ಹೆಕ್ಕಿ ಹುಡುಕಬೇಕಷ್ಟೆ. ಇರುವುದರಲ್ಲಿ ತೃಪ್ತಿ ಪಡಿ. ಹೆಚ್ಚಿನ ಆಸೆ ಇಲ್ಲಸಲ್ಲದ ಅಹಂಕಾರಕ್ಕೆ ದಾರಿ ಮಾಡಿಕೊಡುತ್ತದೆ. ಕಷ್ಟ ಬಂದಾಗ ವೆಂಕಟರಮಣ ಎನ್ನುವುದಕ್ಕಿಂತ, ಮುಂದಿನ ದಿನಗಳ ಯೋಚನೆ ಈಗಿನಿಂದಲೇ ಇರಲಿ. ಬಂಧುಗಳ ಆಗಮನ ಸಾಧ್ಯತೆ

ಮೀನ: ಮನೆಯ ಶುಭ ಸಂದರ್ಭಗಳಲ್ಲಿ ಮನಸ್ಸಿನಿಂದ ತೊಡಗಿಕೊಳ್ಳಲಿದ್ದೀರಿ. ಇದರಿಂದ ಮನೆಯವರಿಗೆ ನಿಮ್ಮ ಮೇಲೆ ಗೌರವ ಹೆಚ್ಚಿಸಲಿದೆ. ಎಲ್ಲರಿಂದ ಮೆಚ್ಚುಗೆಯ ಮಾತುಗಳು ಸಿಗಲಿದೆ. ಸಂತೋಷ ಮನೆಮಾಡಲಿದೆ. ಸಿಹಿ ಸುದ್ದಿ ಕೇಳುವಿರಿ.

click me!