ವಾರ ಭವಿಷ್ಯ: ಈ ರಾಶಿಯವರು ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ

By Web Desk  |  First Published Dec 1, 2019, 7:19 AM IST

ಡಿಸೆಂಬರ್ 1 ಭಾನುವಾರ: ವಾರ ಭವಿಷ್ಯ| ಈ ವಾರ ಯಾರಿಗೆ ಶುಭ? ಇಲ್ಲಿದೆ ಈ ವಾರದ ಭವಿಷ್ಯ


ಮೇಷ: ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಮಸ್ಯೆಗೆ ಪರಿಹಾರ ಲಭ್ಯ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ. ಪ್ರಸಿದ್ಧ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುವ ಅವಕಾಶ. ಕೆಲಸದಲ್ಲಿ ಬದ್ಧತೆ ಹೆಚ್ಚಾಗಲಿದೆ. ನಿಮ್ಮ ಮೇಲಾಧಿಕಾರಿಯಿಂದ ಪ್ರಶಂಸೆಯ ಮಾತು ಕೇಳುವಿರಿ.

ವೃಷಭ: ಸಂಬಂಧಗಳ ಕಡೆಗೆ ಹೆಚ್ಚು ಗಮನ ನೀಡುವಿರಿ. ಸೂಕ್ಷ್ಮ ವಿಚಾರಗಳಲ್ಲಿ ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಿ. ಒಳ್ಳೆಯವರು ಅಂದುಕೊಂಡವರಿಂದಲೇ ಹೆಚ್ಚು ಅಪಾಯವಾಗುವ ಸಾಧ್ಯತೆ. ಬಿಚ್ಚು ಮನಸ್ಸಿನಿಂದ ನಿಮ್ಮ ಸಮಸ್ಯೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವಿರಿ. ಶುಭ ಫಲ ದೊರೆಯಲಿದೆ.

Tap to resize

Latest Videos

undefined

ಮಿಥುನ: ಸ್ನೇಹಿತರಿಗೆ ಸಹಾಯ ಮಾಡುವಿರಿ. ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಚಿಂತನಾ ಕ್ರಮಗಳು ಬದಲಾಗಲಿವೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹೆಚ್ಚಾಗಿ ಅದರ ಫಲವಾಗಿ ಸ್ವಾಭಿಮಾನ ಹೆಚ್ಚಲಿದೆ. ಯಾರಿಗೂ ಹೆದರುವುದು ಬೇಡ. ಆತ್ಮವಿಶ್ವಾಸ ಮೂಡಲಿದೆ.

ಕಟಕ: ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಟ-ನಟಿಯರಿಗೆ ಒತ್ತಡದಿಂದ ಮುಕ್ತಿ ಸಿಕ್ಕಲಿದೆ. ಮೊಣಕೈ ನೋವಿಗೆ ತಾತ್ಕಾಲಿಕ ಪರಿಹಾರ. ಹಿರಿಯ ವ್ಯಕ್ತಿಗಳ ಸಲಹೆಯಿಂದ ಕಾರ್ಯ ಸಿದ್ಧಿ. ಅತಿಯಾದ ಆತ್ಮವಿಶ್ವಾಸ ಬೇಡ. ಪ್ರೀತಿ-ಪ್ರೇಮದಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. 

ರಾಕ್ಷಸಿ ಮಹಿಷಿ ಸಂಹಾರಕ ಅಯ್ಯಪ್ಪನ ಜನ್ಮ ಜಾತಕ!

ಸಿಂಹ: ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ. ಆ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವುದು ಬೇಡ. ಗೃಹಿಣಿಯರಿಗೆ ಒಡವೆ ಕೊಳ್ಳುವ ಅವಕಾಶವಿದೆ. ಎಲ್ಲರನ್ನೂ ಮೆಚ್ಚಿಸಿ ಬದುಕುವುದಕ್ಕೆ ಆಗುವುದಿಲ್ಲ. ನಿಮ್ಮ ಪಾಡಿಗೆ ನೀವು ಇದ್ದುಬಿಡುವುದು ಲೇಸು. ಗಣೇಶನನ್ನು ಪೂಜಿಸಿ. ವಾರಾಂತ್ಯದಲ್ಲಿ ಶುಭ ಸುದ್ದಿ.

ಕನ್ಯಾ: ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹೆಣ್ಣು ಮಕ್ಕಳು ಹೆಚ್ಚು ಅವಸರ ಪಡುವುದು ಬೇಡ. ನಿಮ್ಮಿಂದ ಸಹಾಯ ಪಡೆದವರು ನಿಮಗೆ ಗೌರವ ನೀಡಲಿದ್ದಾರೆ. ದಿನಗೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಇಕ್ಕಟ್ಟು ಉಂಟಾಗಲಿದೆ. ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ.

ತುಲಾ: ಸ್ನೇಹಿತರೊಂದಿಗೆ ಸೇರಿ ಜಂಟಿ ಉದ್ಯಮ ಪ್ರಾರಂಭಿಸಲಿದ್ದೀರಿ. ಹೊಸ ವಾಹನ ಕೊಳ್ಳುವ ಅವಕಾಶ ಬರಲಿದೆ. ಅಡವಿಟ್ಟ ಚಿನ್ನವನ್ನು ಬಿಡಿಸಲಿದ್ದೀರಿ. ಬಂಧುಗಳು ಮನೆಗೆ ಬರಲಿದ್ದಾರೆ. ಎದುರಾದ ಸಮಸ್ಯೆಗಳನ್ನು ಶಾಂತವಾಗಿ ಇದ್ದುಕೊಂಡು ಬಗೆಹರಿಸಿಕೊಳ್ಳುವಿರಿ. ಶಿವನ ದೇವಾಲಯಕ್ಕೆ ಭೇಟಿ ನೀಡಿ.

ವೃಶ್ಚಿಕ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಓಡಾಟ ಹೆಚ್ಚಾಗಲಿದೆ. ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಯ. ಆತ್ಮೀಯರಿಂದಲೇ ತೊಂದರೆಯಾಗುವ ಸಾಧ್ಯತೆ. ಸರಿಯಾದ ಸಮಯಕ್ಕೆ ಆಹಾರ ಸೇವನೆಯ ಅಭ್ಯಾಸ ಮಾಡಿ ಕೊಳ್ಳಲಿದ್ದೀರಿ. ಜವಾಬ್ದಾರಿಯುತ ಕೆಲಸ ಹೆಗಲಿಗೆ ಬೀಳಲಿದೆ.

ಧನಸ್ಸು: ಸಹೋದ್ಯೋಗಿಗಳೊಂದಿಗೆ ವಿರಸ ಬೇಡ. ನಿಮ್ಮ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ರಾಜಕಾರಣಿಗಳಿಗೆ ಶುಭ ಸುದ್ದಿ ತಿಳಿಯಲಿದೆ. ಕೃಷಿಕರಿಗೆ ಹೆಚ್ಚು ಲಾಭವಾಗಲಿದೆ. ವಿಷ್ಣುವನ್ನು ಆರಾಧಿಸಿ.

ಮಕರ: ಅನಗತ್ಯ ಕಿರಿಕಿರಿಗಳು ದೂರಾಗಲಿವೆ. ಹಿಂದೆ ಕೂಡಿಟ್ಟ ಕಾಸು ಇಂದು ನಿಮ್ಮ ಸಹಾಯಕ್ಕೆ ಬರಲಿದೆ. ಕೆಲಸ ನಿಮಿತ್ತ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುವಿರಿ. ನಿಮ್ಮ ಜಾಣತನಕ್ಕೆ ಮಾನ್ಯತೆ ದೊರೆಯಲಿದೆ. ಅಸಮರ್ಥರ ಬಗ್ಗೆ ಚಿಂತೆ ಬೇಡ.

ಕುಂಭ: ನಿಮಗೆ ಇಷ್ಟವಿಲ್ಲದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಕೆಲವರಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಮುಂದೆ ಸಾಗಿ. ಎಲ್ಲರನ್ನೂ ಮೆಚ್ಚಿಸಿಕೊಂಡು ಬಾಳುವುದಕ್ಕೆ ಆಗುವುದಿಲ್ಲ. ಸ್ವಾರ್ಥಿಗಳ ನಡುವಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.

ಮೀನ: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕಾರ್ಯಗಳು ಈ ವಾರದಲ್ಲಿ ಆಗಲಿವೆ. ಹೆಚ್ಚಾಗಿ ಓದಿನಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಕೌಟುಂಬಿಕ ಸಮಸ್ಯೆ ಗಳು ಬಗೆಹರಿಯಲಿವೆ. ನಿಮ್ಮದಲ್ಲದ ವಿಚಾರಕ್ಕೆ ನೀವು ಮೂಗು ತೂರಿಸುವುದು ಬೇಡ. ನಿಮ್ಮ ವಯಕ್ತಿಕ ಬದುಕಿನ ಕಡೆಗೆ ಹೆಚ್ಚು ಗಮನ ನೀಡಿ. ಒಳಿತಾಗಲಿದೆ.

click me!