ಯಾವ ರಾಶಿಗೆ ಅನುಕೂಲ : ಯಾವ ರಾಶಿಗೆ ಅನಾನೂಕೂಲ : ವಾರ ಭವಿಷ್ಯ

By Web Desk  |  First Published Aug 18, 2019, 7:20 AM IST

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ? 



ಯಾವ ರಾಶಿಗೆ ಅನುಕೂಲ : ಯಾವ ರಾಶಿಗೆ ಅನಾನೂಕೂಲ : ವಾರ ಭವಿಷ್ಯ

ಮೇಷ
ಅಗತ್ಯ ವಿಚಾರಗಳ ಕಡೆಗೆ ಮಾತ್ರ ನಿಮ್ಮ
ಗಮನವಿರಲಿ. ಹೊಸ ವಿಚಾರಗಳ ಬಗ್ಗೆ ನಿಮ್ಮ
ಆಸಕ್ತಿ ಹೆಚ್ಚಿಸಿಕೊಳ್ಳಿ. ಬಂಧು ಬಳಗದಿಂದ ನಿಮ್ಮ
ಬೆಳವಣಿಗೆಗೆ ಪ್ರೋತ್ಸಾಹ ಸಿಗಲಿದೆ. ಹೊಸ ಸ್ನೇಹಿತರಿಂದ
ಆರ್ಥಿಕ ಸಹಾಯವಾಗಲಿದ್ದು, ಹೊಸ ಉದ್ಯೋಗ
ಸ್ಥಾಪಿಸುವವರಿಗೆ ಇದು ಒಳ್ಳೆಯ ಕಾಲ.

Tap to resize

Latest Videos

undefined

ವೃಷಭ
ಒಳ್ಳೆಯ ಚಿಂತನೆಗಳು ಹೆಚ್ಚಾಗಲಿದೆ. ಮನೆಯಲ್ಲಿ
ಧಾರ್ಮಿಕ ಚಟುವಟಿಕೆಗಳು ನಡೆಯಲಿದ್ದು,
ನೆಮ್ಮದಿಯ ವಾತಾವರಣ ಸಿಗಲಿದೆ. ಮಳೆ
ಹೆಚ್ಚಿರುವುದರಿಂದ ಸ್ವಲ್ಪ ಮಟ್ಟಿಗೆ ಹೊರಗೆ ಹೋಗು
ವುದನ್ನು ನಿಲ್ಲಿಸಿದರೆ ಒಳಿತು. ಮಕ್ಕಳ ಆರೋಗ್ಯದಲ್ಲಿ
ಏರುಪೇರು ಸಾದ್ಯತೆ. ಬಂಧುಗಳ ಆಗಮನ.

ಮಿಥುನ
ಮಕ್ಕಳ ವಿಚಾರದಲ್ಲಿ ನೀವು ಮೊದಲೇ
ತೆಗೆದುಕೊಂಡ ನಿರ್ಧಾರ ಈಗ ಫಲಕೊಡಲಿದೆ.
ಮುಂದಾಲೋಚನೆಯಿಂದ ಎಲ್ಲರ ಮನಗೆಲ್ಲು
ವಿರಿ. ಸಂಬಂಧಗಳು ಗಟ್ಟಿಯಾಗಬೇಕೆಂದರೆ ಅವುಗಳೊಂ
ದಿಗೆ ನಿಕಟ ಸಂಪರ್ಕ ಇದ್ದಲ್ಲಿ ಮಾತ್ರ. ಈ ಕುರಿತು ಹೆಚ್ಚಿನ
ಚಿಂತನೆ ಅಗತ್ಯ. ದೂರದೂರಿನ ಪ್ರಯಾಣ ಸಾಧ್ಯತೆ.

ಕಟಕ
ಅನಿರೀಕ್ಷಿತ ಘಟನೆಗಳು ದೀರ್ಘ ಕಾಲ
ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
ಹೊಸ ವ್ಯಕ್ತಿಗಳ ಪರಿಚಯದಿಂದ
ಸಂದತಗೊಳ್ಳುವಿರಿ. ಹಳೇ ಸಾಲಗಳಿಂದ ಮುಕ್ತಿ.
ಉದ್ಯೋಗಿಗಳಿಗೆ ಕೆಲಸದಲ್ಲಿ ಏಳಿಗೆ ಕಾಣಲಿದ್ದೀರಿ.
ಮಹಿಳೆಯರ ಆರೋಗ್ಯ ಈ ವಾರ ಸುಧಾರಿಸಲಿದೆ.

ಸಿಂಹ
ನಿಮ್ಮಲ್ಲಿನ ಆಸಕ್ತಿದಾಯಕ ಕೆಲಸಗಳತ್ತ ಗಮನ
ಹರಿಸಿ. ಒಳ್ಳೆಯ ಕೆಲಸಗಳಿಗೆ ನೀವೇ
ಮುನ್ನಡೆಯಿರಿ. ಅದಕ್ಕೆ ಯಾವ ದೊಣ್ಣೆ
ನಾಯಕನ ಅಪ್ಪಣೆಗೆ ಕಾಯಬೇಡಿ. ಒಬ್ಬರಿಗೆ
ಒಳ್ಳೆಯದನ್ನು ಮಾಡುವುದರಿಂದ ಮನಸ್ಸಿಗೆ ಸಂತೋಷ
ಸಿಗುವುದಾದರೆ ಅಂತಹ ಕೆಸಗಳನ್ನು ಹೆಚ್ಚೆಚ್ಚು ಮಾಡಿ.

ಕನ್ಯಾ
ನೊಂದ ಜೀವಗಳಿಗೆ ಮಿಡಿಯುವ ಹೃದಯ
ನಿಮ್ಮದು. ನಿಮ್ಮ ಈ ಹೃದಯ ಶ್ರೀಮಂತಿಕೆಯೆ
ಮುಂದೆ ಮುಳ್ಳಾಗದಿರಲಿ. ಯಾವುದೇ ಕೆಲಸ
ಮಾಡುವಾಗ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.
ದೀರ್ಘಾವಧಿ ಯೋಜನೆಗಳಿಗೆ ವೇದಿಕೆ ಸಿದ್ಧವಾಗಲಿದೆ.
ಸೋಮಾರಿತನದಿಂದ ಹೊರಬರಲಿದ್ದೀರಿ.

ತುಲಾ
ಸ್ನೇಹಿತರೊಂದಿಗೆ ಮೃದುವಾಗಿ ವರ್ತಿಸಿ.
ಕೂಲಿಕಾರ್ಮಿಕರ ಆದಾಯ ಹೆಚ್ಚಾಗಲಿದೆ.
ಕೆಲಸದಲ್ಲಿ ಬದಲಾವಣೆ ಸಾಧ್ಯತೆ. ವಿದೇಶದಿಂದ
ಬಂಧುಗಳ ಆಗಮನ. ಒತ್ತಡವನ್ನು ಯಶಸ್ವಿಯಾಗಿ
ಪೂರೈಸುವಿರಿ. ಸೂಕ್ತ ಮುಂಜಾಗೃತೆಯಿಂದ ದೊಡ್ಡ
ಕೆಲಸಗಳಿಗೆ ಕೈ ಹಾಕಿ. ದೂರ ಪ್ರಯಾಣ ಸಾಧ್ಯ

ವೃಶ್ಚಿಕ
ಹೊಸ ವಸ್ತುವನ್ನು ಕೊಳ್ಳುವಾಗ ಸೂಕ್ತ
ರೀತಿಯಲ್ಲಿ ಪರೀಕ್ಷಿಸಿ ಕೊಂಡುಕೊಳ್ಳಿ. ಸಿಕ್ಕಿದ್ದನ್ನು
ತಿನ್ನಬೇಡಿ. ಆದಾಯದ ಒಂದು ಭಾಗ
ವೆಚ್ಚವಾಗಲಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ಇರಲಿ.
ಮೂರನೆಯವರ ಕಾರಣಕ್ಕೆ ಸಾಲ ಮಾಡಿ ಕೈ
ಸುಟ್ಟುಕೊಳ್ಳಬೇಡಿ. ಹಲವು ಪಾಠಗಳನ್ನು ಕಲಿಯಲಿದ್ದೀರಿ.

ಧನಸ್ಸು
ಶುಭ ಕಾರ್ಯಕ್ಕೆ ಕಾಯುವುದು ಬೇಡ.
ಅನಗತ್ಯ ವಿಚಾರಗಳಿಗೆ ತಲೆಕೆಡೆಸಿಕೊಳ್ಳುವ
ಬದಲು, ನಿಮ್ಮ ಪಾಲಿಗೆ ಬಂದ ಕೆಲಸವನ್ನು
ಶ್ರಮ ವಹಿಸಿ ಮಾಡಿ. ಇದರಿಂದ ಏಳಿಗೆಗೆ ಜೊತೆಗೆ ನಿಮ್ಮ
ಕೆಲಸದ ಬಗ್ಗೆ ತೃಪ್ತಿ ಭಾವನೆ ಮೂಡಲಿದೆ.

ಮಕರ
ಯಾರೇನೇ ಹೇಳಿದರೂ ನಿಮಗೆ ನೇರವಾಗಿ
ಬಂದು ಹೇಳಿದರೆ ಮಾತ್ರ ನಂಬಿ.
ಊಹಾಪೋಹಕ್ಕೆ ತಲೆಕೆಡಿಸಿಕೊಂಡು ಕೆಸರನ್ನು
ಮೈಮೇಲೆ ಎರಚಿಕೊಳ್ಳಬೇಡಿ. ನಂಬಿಕೆ, ವಿಶ್ವಾಸ,
ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಶದಿಂದಲ್ಲ

ಕುಂಭ
ಬಂಧುಗಳ ಸಹಕಾರದಿಂದ ನೂತನ ವ್ಯವಹಾರ
ಶುರು ಮಾಡಲಿದ್ದೀರಿ. ಆಡಳಿತಾತ್ಮಕ
ವಿಚಾರಗಳಲ್ಲಿ ಮೇಲುಗೈ ಸಾಧಿಸಲಿದ್ದೀರಿ.
ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ವಾಹನ
ಚಾಲನೆಯಲ್ಲಿ ಎಚ್ಚರ ಇರಲಿ. ಸಣ್ಣ ಸಣ್ಣ ವಿಚಾರಗಳಿಗೆ
ಹೆಚ್ಚು ಕೋಪ ಮಾಡಿಕೊಳ್ಳುವುದು ಬೇಡ.

ಮೀನ
ಶುಭ ಸಮಾರಂಭಕ್ಕೆ ದೂರದೂರಿಗೆ ಪ್ರಯಾಣ.
ವಾತಾವರಣ ಹದಗೆಟ್ಟಿರುವುದರಿಂದ ನಿಮ್ಮನ್ನೂ
ಒಳಗೊಂಡಂತೆ ಮಕ್ಕಳ ಆರೋಗ್ಯದ ಕಡೆಗೂ
ಗಮನಕೊಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಯಾರ
ಬಳಿಯಾದರೂ ಮಾತನಾಡುವಾಗ ಎಚ್ಚರ ಇರಲಿ.

click me!