ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ : ಶುಭವು ಯಾರಿಗೆ ಒಲಿಯಲಿದೆ?

By Web Desk  |  First Published May 12, 2019, 7:20 AM IST

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ. 


ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ : ಶುಭವು ಯಾರಿಗೆ ಒಲಿಯಲಿದೆ?


ಮೇಷ
ಸದಭಿರುಚಿಗಳು ಮೂಡುವುದು ನಮ್ಮಲ್ಲಿನ
ಸದ್ವಿಚಾರಗಳ ಮೂಲಕ. ಆದಷ್ಟು ಒಳ್ಳೊಳ್ಳೆ
ವಿಷಯದ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ.
ಸಾಧ್ಯವಾದರೆ ಮಕ್ಕಳಿಗೂ ಆಸಕ್ತಿ ಮೂಡಿಸುವ ವಿಚಾರಗಳ
ಬಗ್ಗೆ ಚರ್ಚಿಸಿ. ಇದರಿಂದ ಹೊಸ ವಿಷಯಗಳಲ್ಲಿ ಆಸಕ್ತಿ
ಮತ್ತು ಯಾವಾಗಲೂ ಕ್ರಿಯಾಶೀಲರಾಗಿರಲು ಸಹಕಾರಿ.

Tap to resize

Latest Videos

undefined

ವೃಷಭ
ಪುಸ್ತಕ ಓದುವುದು ಇತರರಿಗೆ ಹುಚ್ಚು ಎನಿಸಿದ
ರೂ, ನಿಮಗೆ ಹವ್ಯಾಸ. ಆದರೆ ನಿಮ್ಮಷ್ಟು
ವಿಮರ್ಶಾತ್ಮಕ ಮಾತುಗಳನ್ನು ಅವರು ಆಡುವು
ದಿಲ್ಲ. ಪುಸ್ತಕ ಓದುವುದು ನಿಮ್ಮಲ್ಲಿ ಜ್ಞಾನ ಹೆಚ್ಚಿಸುತ್ತದೆಯೇ
ಹೊರತು ಇತರರಂತೆ ಹರಟೆ, ಬೇಡದ ವಿಚಾರಗಳ ಕಡೆ
ಎಳೆಯುವುದಿಲ್ಲ. ಹಾಗಾಗಿ ನಿಮ್ಮಿಷ್ಟದ ಕೆಲಸ ಮಾಡಿ.

ಮಿಥುನ
ಬೇರೆಯವರು ಏನೆನ್ನುತ್ತಾರೆ ಅನ್ನುವುದಕ್ಕಿಂತ
ನೀವೇನು ಮಾಡುತ್ತಿದ್ದೀರಿ ಎನ್ನುವುದರ ಬಗ್ಗೆ
ಬೇರೆಯವರಿಗೆ ಕುತೂಹಲ ಹೆಚ್ಚು. ಹಾಗಾಗಿ
ನಿಮ್ಮಿಂದಾಗುವ ಒಳ್ಳೆಯ ಕೆಲಸಗಳು ಅವರನ್ನೂ
ಪ್ರೇರೇಪಿಸಬಹುದು. ಈ ವಾರ ನೀವಂದುಕೊಂಡ
ಕೆಲಸಗಳು ಈಡೇರಲಿದೆ. ಸಂತೋಷ ನೆಲೆಸಲಿದೆ.

ಕಟಕ
ತಾಳ್ಮೆ ಇದ್ದಷ್ಟು ಕೆಲಸಗಳು ಸರಳವಾಗಿ, ಸುಸೂತ್ರ
ವಾಗಿ ನಡೆಯುತ್ತವೆ. ಯಾವುದೇ ಕೆಲಸ ಮಾಡು
ವಾಗ ಹತ್ತು ನಿಮಿಷ ಧ್ಯಾನ ಮಾಡಿ ಆರಂಭಿಸು
ವುದು ಒಳ್ಳೆಯದು. ನಿಮಗೆ ಬೇಡದ ವಿಚಾರಕ್ಕೆ ತಲೆಹಾಕು
ವುದು ಬೇಡ. ಅದರಿಂದ ದೂರ ಇದ್ದಷ್ಟು ನಿಮಗೇ ಒಳ್ಳೆ
ಯದು. ಮಕ್ಕಳ ಕಲಿಕೆಯಲ್ಲಿ ಚುರುಕು ಹೆಚ್ಚಲಿದೆ . 

ಸಿಂಹ
ಬೇಡ ಎಂದರೂ ಒಮ್ಮೊಮ್ಮೆ ಒತ್ತಡದ
ಕೆಲಸಗಳು ಬಂದೊದಗುತ್ತದೆ. ನಿಮ್ಮ
ಮೇಲಿರುವ ಜವಾಬ್ದಾರಿಯುತ ಕೆಲಸಗಳನ್ನು
ಸರಳವಾಗಿ ಮಾಡಿ ಮುಗಿಡುವ ಸಾಮರ್ಥ್ಯ ನಿಮ್ಮಲ್ಲಿದೆ.
ಜಾಸ್ತಿ ತಲೆ ಕೆಡಿಸಿಕೊಂಡು ಕೆಲಸ ಮಾಡದೆ ತಾಳ್ಮೆಯಿಂದಲೇ
ಮಾಡಿ ಮುಗಿಸಿ. ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ.

ಕನ್ಯಾ
ಮನಸ್ಸಿನಲ್ಲಿನ ಗೊಂದಲಗಳನ್ನು ನಿಮ್ಮೊಳಗೇ
ಇಟ್ಟುಕೊಂಡು ಕೊರಗುವುದಕ್ಕಿಂತ ನಿಮ್ಮ
ಹತ್ತಿರದ ಸ್ನೇಹಿತರು ಇಲ್ಲವೇ ಪ್ರೀತಿ
ಪಾತ್ರರೊಡನೆ ಹೇಳಿಕೊಳ್ಳಿ. ಅದರಿಂದ ಹೊರಬರಲು
ಪ್ರಯತ್ನಿಸಿ. ನೀವು ಹೇಗೆ ಇರುತ್ತೀರೋ ಹಾಗೆ ನಿಮ್ಮ
ಸುತ್ತಲಿನವರ ಮೇಲೂ ಪ್ರಭಾವ ಬೀರುತ್ತದೆ.

ತುಲಾ
ಯಾವುದೇ ವಿಚಾರದಲ್ಲಿ ಇನ್ನೊಬ್ಬರನ್ನು ತುಲನೆ
ಮಾಡಬೇಡಿ. ಹಾಗೆ ಮಾಡುವಾಗ ನಮ್ಮನ್ನು
ಇನ್ನೊಬ್ಬರು ಹಾಗೇ ಮಾಡುತ್ತಿರುತ್ತಾರೆ ಎನ್ನುವ
ಅರಿವಿರಬೇಕು. ಈ ವಾರ ಮನಸ್ಸಿಗೆ ನೋವಾಗುವ
ಘಟನೆಗಳು ನಡೆಯಬಹುದು. ನಿಮ್ಮಿಂದಾದ ತಪ್ಪುಗಳನ್ನು
ನೀವೇ ಸರಿದೂಗಿಸಿಕೊಂಡು ನಡೆದರೆ ಉತ್ತಮ. 

ವೃಶ್ಚಿಕ
ಇಷ್ಟು ದಿನ ಕಷ್ಟಕ್ಕೆಂದು ಕೂಡಿಟ್ಟ ಹಣ ಈಗ
ಉಪಯೋಗಕ್ಕೆ ಬರಲಿದೆ. ಆರ್ಥಿಕವಾಗಿ
ಇನ್ನಷ್ಟು ಸಬಲರಾಗುವಿರಿ. ಇತರೆ
ಚಟುವಟಿಕೆಗಳಂತೆ ಓದು ಸಹ ಜೀವನದ ಪ್ರಮುಖ
ಘಟ್ಟ. ಸ್ವಲ್ಪ ಅತ್ತ ಗಮನಹರಿಸಿ. ಮಹಿಳೆಯರಿಗೆ
ಗೊಂದಲದ ವಾತಾವರಣ ಮೂಡಲಿದೆ.

ಧನಸ್ಸು
ಕುಟುಂಬದಲ್ಲಿದ್ದ ಮನಸ್ತಾಪಗಳು ದೂರಾಗಿ
ವೈವಾಹಿಕ ಜೀವನ ಸುಂದರವಾಗಿ ಸಾಗಲಿದೆ.
ಉದ್ಯೋಗ ಅರಸುತ್ತಿರುವವರಿಗೆ ಸದಾವಕಾಶ.
ಹೀಗೆ ಇರಬೇಕು ಹಾಗೇ ಇರಬೇಕು ಎನ್ನುವುದನ್ನು ಬಿಟ್ಟು
ಸಿಕ್ಕ ಅವಕಾಶವನ್ನು ಕೈಗೆತ್ತುಕೊಳ್ಳುವುದು ಒಳಿತು.

ಮಕರ
ಮನಸ್ಸಿನ ತಳಮಳಕ್ಕೆ ಬ್ರೇಕ್ ಹಾಕಿ ಒಂದಿಷ್ಟು
ಸಮಯ ಪ್ರವಾಸಕ್ಕೆ ಹೋಗಿ. ಒಬ್ಬರೆ, ಇಲ್ಲವೇ
ಸ್ನೇಹಿತರ ಜೊತೆ ಹೋಗದರೆ ಒಳಿತು. ನಿಮ್ಮ
ಸಮಯ ನಿಮಗಾಗಿ ಕಳೆಯಲು ಪ್ರಯತ್ನಿಸಿ. ಹಣಕಾಸಿನ
ವ್ಯವಹಾರ ಸದ್ಯ ಮುಂದೂಡುವುದು ಒಳ್ಳೆಯದು. 

ಕುಂಭ
ದೊಡ್ಡವರಿಂದ ಅಲ್ಲದಿದ್ದರೂ ಹಲವು ಬಾರಿ
ಮಕ್ಕಳಿಂದ ಕೆಲ ಸಂಗತಿಗಳನ್ನು ಕಲಿತು ನಮ್ಮ
ಜೀವನದಲ್ಲಿ ಮಾರ್ಪಾಡು ಮಾಡಿಕೊಳ್ಳಬಹು
ದು. ಇದು ನಿಮ್ಮ ಜೀವನದಲ್ಲಿ ಈ ವಾರ ನಡೆಯಲಿದೆ.
ಒಳ್ಳೆಯ ವಿಷಯ, ವಿಚಾರಗಳಿಗೆ ಎಂದಿಗೂ ಕಾಯದೆ
ಮುನ್ನಡೆಯಿರಿ. ಮುಂದಿನ ಹಾದಿ ಸುಗಮವಾಗಲಿದೆ

ಮೀನ
ಸೇವಾ ವಿಚಾರದಲ್ಲಿ ನಿಮ್ಮದು ಎತ್ತಿದ ಕೈ.
ಹಿರಿಯರು, ವೃದ್ಧರ ಮೇಲಿನ ಅತಿಯಾದ
ಪ್ರೀತಿ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯ
ಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ತಲೆಹಾಕದೆ
ಅವರ ಇಷ್ಟಕ್ಕೆ ಬಿಡುವುದು ಒಳ್ಳೆಯದು.

click me!