ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ.?

By Web Desk  |  First Published Mar 10, 2019, 7:21 AM IST

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ. ಯಾರಿಗೆ ಶುಭ ಫಲ, ಯಾವ ರಾಶಿಗೆ ಯಾವ ಫಲ ತಿಳಿಯಿರಿ


ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ.?

ಮೇಷ : ಹೊಸ ಕೆಲಸದಲ್ಲಿ ಉತ್ಸಾಹ ಹೆಚ್ಚು. ನೀವಂದುಕೊಂಡ ಕೆಲಸ ನಿರರ್ಗಳವಾಗಿ ಸಾಗಲಿದೆ. ಪ್ರಶಂಸೆಗೆ ಪಾತ್ರವಾಗಲಿದ್ದೀರಿ

Tap to resize

Latest Videos

undefined

ವೃಷಭ : ಸೇವೆಯಲ್ಲಿ ಫಲಾಪೇಕ್ಷೆ ಬೇಡ. ಕೈಲಾದ ಸಹಾಯ ಮಾಡಿ. ನಿಮ್ಮಲ್ಲಿನ ಒಳ್ಳೆಯತನಕ್ಕೆ ಅಪಾರ ಜನಮೆಚ್ಚುಗೆ. ಮಹಿಳೆಯರು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ

ಮಿಥುನ : ಮಕ್ಕಳ ವಿಚಾರದಲ್ಲಿ ತೀರಾ ಕಾಳಜಿವಹಿಸುವ ನೀವು ನಿಮ್ಮ ಆರೋಗ್ಯದ ಮೇಲೂ ಸ್ವಲ್ಪ ಗಮನ ಹರಿಸಿ. ಆರೋಗ್ಯ ಇಲ್ಲದಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯ. ಶುಭ ಫಲ

ಕಟಕ : ನೀವು ತಪ್ಪು ಮಾಡಿದರೂ ಸರಿ ಎಂದು ಅಟ್ಟಕ್ಕೆ ಏರಿಸುವವರ ಸಹವಾಸದಿಂದ ದೂರ ಇರುವುದು ಒಳಿತು.  ನೇರ ನುಡಿಗಳ ಸ್ನೇಹ ಜೀವನದಲ್ಲಿ ಹಲವು ಏಳು ಬೀಳುಗಳನ್ನು ತಪ್ಪಿಸಲು  ಸಹಕಾರಿ. ಮಹಿಳೆಯರಿಗೆ ಶುಭ ವಾರ

ಸಿಂಹ : ಹಲವು ದಿನಗಳ ಒತ್ತಡದಿಂದ ನಸ್ಸಿನಲ್ಲಿರುವ ನರಳಾಟದಿಂದ ವಾರಾಂತ್ಯದಲ್ಲಿ ಬಿಡುವು. ಸಂಗಾತಿಯೊಂದಿಗಿನ ಕಿತ್ತಾಟದಿಂದ ಕಿರಿಕಿರಿ ವಾರಂತ್ಯಕ್ಕೆ ಮುಕ್ತಿ

ಕನ್ಯಾ : ಮನಸ್ಸೋ ಇಚ್ಛೆ ಖರ್ಚು ಮಾಡುವುದರಿಂದ ಮುಂದೊಂದು ದಿನ ಕಂಟಕ ಎದುರಾಗುವ ಸಾಧ್ಯತೆ. ಮನೆಯವರ ಮಾತು ಅಭಿಪ್ರಾಯಗಳು ಈ ವಾರ ಕೆಲ ನಿರ್ಧಾರ ಕೈಗೊಳ್ಳಲು ಸಹಕಾರಿ. ಇಷ್ಟು ದಿನ ಮರೆಯಾಗಿದ್ದ ಸಂಭ್ರಮ ಮನೆಯಲ್ಲಿ ಕಾಣಿಸಲಿದೆ. ಶುಭ ಫಲ

ತುಲಾ : ಇಷ್ಟು ದಿನ ಎದುರಾದ ಕಷ್ಟಗಳು ಮರೆಯಾಗಿ ಈ ವಾರ ಮನೆಯಲ್ಲಿ ನೆಮ್ಮದಿ ಸಂತೋಷ ನೆಲೆಸಲಿದೆ. ನಿಮ್ಮ ಸುತ್ತಲಿರುವವರಿಂದ ನಿಮ್ಮ ಕೆಲಸ ಕಾರ್ಯಕ್ಕೆ ಪ್ರಶಂಸೆ. 

ವೃಶ್ಚಿಕ : ಮಾಡುವ ಎಲ್ಲಾ ಕೆಲಸಗಳಿಂದ ಲಾಭ ಅಪೇಕ್ಷೆ ಬೇಡ. ಮಕ್ಕಳಲ್ಲಿ ಈ ವಾರ ಕಿರಿಕಿರಿ, ಭಯ ಕಾಣಿಸಿಕೊಳ್ಳಲಿದೆ. 

ಧನಸ್ಸು : ನಿಮ್ಮ ಆರೋಗ್ಯದ ರಿಸಲ್ಟ್ ನಿಮ್ಮ ಕೈಯಲ್ಲಿ. ದೂರದೂರಿನಿಂದ ಬಂದುಗಳ ಆಗಮನ, ಮನೆಯಲ್ಲಿ ಸಂತೋಷ ನೆಲೆಸಲಿದೆ. 

ಮಕರ : ಕಾರ್ಮಿಕ ವರ್ಗಕ್ಕೆ ಈ ವಾರ ಲಾಭ, ಕೆಲವರಿಗೆ ಬಂದದ್ದು ಹಾಗೆ ಖರ್ಚಾಗುವ ಸಾಧ್ಯತೆ. ಮನಸ್ಸಿನ ನೆಮ್ಮಿದಗೆ ಧ್ಯಾನ ಮಾಡಿ. ದೂರದೂರಿಗೆ ಪ್ರಯಾಣಿಸುವ ಸಾಧ್ಯತೆ

ಕುಂಭ : ಮೂರನೆಯವರ ಮಾತು ಕೇಳಿ ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳಲದೆ ನಿಮಗನಿಸಿದ ಹಾಗೆ ಮಾಡಿ. ಸಕಾರಾತ್ಮಕವಾಗಿರಿ

ಮೀನ : ಆರೋಗ್ಯ ಸಮಸ್ಯೆ, ಒಳ್ಳೆ ಆಹಾರ ಸೇವಿಸಿ. ಮನೆ ನಿರ್ವಹಣೆ ಉತ್ತಮ 

click me!