ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ

By Suvarna News  |  First Published Dec 8, 2019, 7:13 AM IST

ಈ ಸಂಪೂರ್ಣ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ ವಾರ ಭವಿಷ್ಯದ ಮೂಲಕ 



ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ 

ಮೇಷ
ಬ್ಯಾಂಕ್ ನೌಕರರಿಗೆ ಶುಭವಾರ್ತೆ. ಉದ್ಯೋಗ
ದಲ್ಲಿ ನಿರೀಕ್ಷಿತ ಪ್ರಗತಿ ಸಿಗಲಿದೆ. ಬಹುದಿನಗಳ
ಕನಸು ನನಸು. ಕಲಾ ಚಟುವಟಿಕೆಗಳಲ್ಲಿ ಸಕ್ರಿಯ
ವಾಗುವಿರಿ. ಹೆಣ್ಣು ಮಕ್ಕಳಿಗೆ ಮದುವೆಯ ಭಾಗ್ಯ ಕೂಡಿ
ಬರಲಿದೆ. ಸಂಬಂಧಗಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸಿ.
ರಾಜಕಾರಣಿಗಳ ಪಾಲಿಗೆ ದೊಡ್ಡ ತಿರುವು ಏರ್ಪಡಲಿದೆ.

Latest Videos

undefined

ವೃಷಭ
ಆತ್ಮೀಯರಿಂದ ಪಡೆದ ಸಲಹೆಗಳು ಮುಂದೆ
ಸಹಾಯಕ್ಕೆ ಬರಲಿವೆ. ಸಾಫ್ಟ್‌ವೇರ್ ಉದ್ಯೋಗಿ
ಗಳಿಗೆ ಅಲ್ಪ ಮುನ್ನಡೆ ಸಿಗಲಿದೆ.ಅಧಿಕಾರ ಸ್ಥಾನ
ದಲ್ಲಿರುವವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬೆಳಿಗ್ಗೆ
ವ್ಯಾಯಾಮ ಮಾಡುವುದು ಉತ್ತಮ. ಆರೋಗ್ಯದ ಕಡೆಗೆ
ಹೆಚ್ಚು ಗಮನ ನೀಡಿ. ಗೆಲುವು ನಿಮ್ಮದಾಗಲಿದೆ.

ಮಿಥುನ
ಅವಿವಾಹಿತ ಹುಡುಗಿಯರಿಗೆ ಶುಭ ವಾರ್ತೆ
ತಿಳಿಯಲಿದೆ. ಆಹಾರದಲ್ಲಿ ವ್ಯತ್ಯಯವಾಗದಿರಲಿ.
ಗೆಳೆಯರೊಂದಿಗೆ ಸೇರಿ ದೂರದ ಪ್ರಯಾಣ
ಕೈಗೊಳ್ಳುವಿರಿ. ತಂದೆ-ತಾಯಿಯೊಂದಿಗೆ ಆತ್ಮೀಯವಾಗಿ
ನಡೆದುಕೊಳ್ಳಿ. ಪುಸ್ತಕ ಓದುವ ಹವ್ಯಾಸ ಆರಂಭವಾಗಲಿದೆ.
ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ

ಕಟಕ
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು
ಬೇಡ. ಆದಾಯದಲ್ಲಿ ಏರಿಕೆ ಕಂಡುಬರಲಿದೆ.
ಸುಲಭವಾಗಿ ಯಾರನ್ನೂ ನಂಬಬೇಡಿ. ಹೊಸ ವಿಚಾರಗಳತ್ತ
ಮನಸ್ಸು ಹರಿಯಲಿದೆ. ಉದ್ಯೋಗದಲ್ಲಿ ಪ್ರಗತಿ. ಆರೋಗ್ಯ
ದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಲಿದೆ. ಶುಭಫಲ.

ಸಿಂಹ
ಯಾರ ಸಹಾಯವೂ ಇಲ್ಲದೇ ಅಂದುಕೊಂಡ
ದ್ದನ್ನು ಮಾಡಿ ಮುಗಿಸುವ ಅವಕಾಶಗಳಿವೆ.
ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಒಂದು
ವಿಚಾರದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದ ಹೊರತು
ಪ್ರತಿಕ್ರಿಯೆ ನೀಡಬೇಡಿ. ಹತ್ತಿರದ ಬಂಧುಗಳೊಂದಿಗೆ
ಆತ್ಮೀಯವಾಗಿ ವರ್ತಿಸಿ. ಕೋಪ ಕಡಿಮೆಯಾಗುತ್ತದೆ.

ಕನ್ಯಾ
ದೂರದ ಪ್ರಯಾಣದಿಂದ ಜೀವನಕ್ಕೆ ಹೊಸ
ಹುರುಪು ಬರಲಿದೆ. ನಿಮ್ಮ ಕಾರ್ಯವನ್ನು ಹೆಚ್ಚಿನ
ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ. ಉಳಿ
ತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ ನಿರ್ಧಾರ
ಗಳನ್ನು ತೆಗೆದುಕೊಳ್ಳಿ. ಅಧಿಕಾರದ ಸ್ಥಾನದಲ್ಲಿರುವವರು
ಸಮಾಜಮುಖಿ ಕಾರ್ಯಗಳನ್ನು ಮಾಡುವಿರಿ.

ತುಲಾ
ಹಣಕಾಸಿನ ತೊಂದರೆಯಿಂದ ಕೊಂಚ ಹೊರಗೆ
ಬರುವಿರಿ. ಖರ್ಚಿನ ಮೇಲೆ ಸಾಧ್ಯವಾದಷ್ಟು
ಹಿಡಿತ ಸಾಧಿಸಿ. ಮಕ್ಕಳ ಆರೋಗ್ಯದಲ್ಲಿ
ಸುಧಾರಣೆ ಕಾಣಲಿದೆ. ದೂರದ ಬಂಧುಗಳಿಂದ ಶುಭ
ವಾರ್ತೆ ಕೇಳುವಿರಿ. ಖ್ಯಾತನಾಮರನ್ನು ಭೇಟಿ ಮಾಡುವ
ಅವಕಾಶ ಒದಗಿ ಬರಲಿದೆ. ಕೋಪ ಕಡಿಮೆ ಮಾಡಿಕೊಳ್ಳಿ

ವೃಶ್ಚಿಕ
ಹತ್ತಿರದ ವ್ಯಕ್ತಿಗಳ ಸಹಾಯದಿಂದ ಒಳ್ಳೆಯ
ಉದ್ಯೋಗ ದೊರೆಯಲಿದೆ. ಸಾಹಸ ಪ್ರಿಯರಿಗೆ
ಹೆಚ್ಚು ಅವಕಾಶಗಳಿವೆ. ರಾಜಕಾರಣಿಗಳಿಗೆ
ಮುನ್ನಡೆ ಸಿಗಲಿದೆ. ಅಸಹಾಯಕರಿಗೆ ಕೈಲಾದ ಸಹಾಯ
ಮಾಡಿ. ವಾದ-ವಿವಾದಗಳಿಂದ ದೂರ ಇರಿ. ನಿಮ್ಮ ವಿಶ್ವಾಸ
ನಿಮ್ಮನ್ನು ಗೆಲುವಿನ ಕಡೆಗೆ ಕರೆದೊಯ್ಯಲಿದೆ.

ಧನಸ್ಸು
ಸಣ್ಣ ಪುಟ್ಟ ಸಂಗತಿಗಳನ್ನು ಕಡೆಗಣಿಸಬೇಡಿ.
ನವೀನ ವಿಚಾರಗಳಿಂದ ಸಂತಸಗೊಳ್ಳುವಿರಿ.
ಹೊಸ ವಾಹನ ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಅನಿರೀಕ್ಷಿತ ಘಟನೆಗಳಿಂದ ಮಾನಸಿಕ ತಳಮಳ ಧೈರ್ಯ
ದಿಂದ ಎಲ್ಲವನ್ನೂ ಎದುರಿಸಿ. ನೆಮ್ಮದಿ ನೆಲೆಸಲಿದೆ.

ಮಕರ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ವಾಹನ
ಚಾಲನೆ ಮಾಡುವಾಗಿ ಜಾಗೃತೆ ಇರಲಿ. ಕಣ್ಣಿನ
ಸಮಸ್ಯೆ ಹೆಚ್ಚಾಗಲಿದೆ. ಸಾಂಸ್ಕೃತಿಕ ಕಾರ್ಯ
ಕ್ರಮಗಳಲ್ಲಿ ಸಕ್ರಿಯರಾಗುವಿರಿ. ಹೆಣ್ಣು ಮಕ್ಕಳಿಗೆ ಒಡವೆ
ಗಳನ್ನು ಕೊಳ್ಳುವ ಭಾಗ್ಯವಿದೆ. ಸಂತೋಷ ಹೆಚ್ಚಾಗಲಿದೆ.

ಕುಂಭ
ಅಧಿಕ ಧನಾಗಮನವಾಗಲಿದೆ. ತಂದೆಯಿಂದ
ಹೊಸ ಉದ್ಯಮ ಸ್ಥಾಪಿಸಲು ಸಹಕಾರ. ಆಹಾರ
ಸೇವನೆಯಲ್ಲಿ ಸಂಯಮ ಇರಲಿ. ಅತಿಯಾಗಿ
ಮಾತನಾಡುವ ಅಭ್ಯಾಸವಿರುವವರು ತುಸು ಎಚ್ಚರಿಕೆ
ಯಿಂದ ಇರಬೇಕಾಗುತ್ತದೆ. ಸ್ನೇಹಿತರಿಂದ ಶುಭ ಸುದ್ದಿ.
ತಂದೆ ತಾಯಿಗಳ ಮಾತನ್ನು ಅನುಸರಿಸಿ.

ಮೀನ
ಹೊಸ ವ್ಯಕ್ತಿಗಳ ಪರಿಚಯವಾಗಿಲಿದೆ. ಇವರೇ
ಮುಂದೆ ನಿಮಗೆ ಹೆಚ್ಚು ಬೇಕಾದ ವ್ಯಕ್ತಿಗಳಾಗ
ಬಹುದು. ಒಳ್ಳೆಯ ದಿನಗಳ ಪ್ರಾರಂಭ.
ಪ್ರೀತಿಯ ವಿಚಾರದಲ್ಲಿ ಒಳ್ಳೆಯದಾಗಲಿದೆ.
ಹಣಕಾಸಿನ ವ್ಯವಹಾರದಲ್ಲಿ ಗೊಂದಲಗಳಾಗುವ ಸಾಧ್ಯತೆ
ಇದೆ. ಯಾವುದಕ್ಕೂ ಅಂಜದೇ ಮುಂದೆ ಸಾಗಿರಿ.

click me!