ವಾರ ಭವಿಷ್ಯ: ಈ ರಾಶಿಯ ಯುವಕರಿಗೆ ಉದ್ಯೋಗ ದೊರೆಯಲಿದೆ

By Suvarna News  |  First Published Jan 27, 2020, 7:23 AM IST

ಈ ವಾರ ಯಾವ ರಾಶಿಗೆ ಯಾವ ಫಲವಿದೆ. ತಿಳಿಯಿರಿ ರಾಶಿ ಫಲದಲ್ಲಿ 


ಮೇಷ: ದೂರದಲ್ಲಿರುವ ಮಕ್ಕಳು ಮನೆಗೆ ಬರಲಿದ್ದಾರೆ. ಪುರೋಹಿತರ ಆದಾಯದಲ್ಲಿ ಇಳಿಕೆ. ರೈತರಿಗೆ ಉತ್ತಮ ಮಳೆಯಿಂದ ಅನುಕೂಲವಾಗಲಿದೆ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಹಿರಿಯರ ಮಾತಿಗೆ ಗೌರವ ನೀಡಿ.ಅದರ ಜೊತೆಗೆ ನಿಮ್ಮ ನಿರ್ಧಾರವನ್ನೂ ಗಟ್ಟಿ ಮಾಡಿಕೊಳ್ಳುವುದು ಸೂಕ್ತ. ಸ್ನೇಹಿತರ ವಲಯದಿಂದ ಪ್ರಶಂಸೆ ಸಿಗಲಿದೆ

ವೃಷಭ: ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರಗತಿ ದೊರೆಯಲಿದೆ. ಯುವಕರಿಗೆ ಉದ್ಯೋಗ ದೊರೆಯಲಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ತಂದೆ ತಾಯಿಯ ಸಲಹೆ ಪಡೆಯಿರಿ. ಈ ವಾರ ಸಕಾರಾತ್ಮಕವಾಗಿರುವಿರಿ. ಆಟೋಟಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮನೆಗೆ ಹೊಸ ಅತಿಥಿಗಳ ಆಗಮನ. ಸೂಕ್ತ ನಿರ್ಧಾರಗಳಿಂದ ಅಧಿಕ ಲಾಭ.

Tap to resize

Latest Videos

undefined

ಮಿಥುನ: ಶಿಕ್ಷಕರಿಗೆ ಶುಭ ಸುದ್ದಿ ತಿಳಿಯಲಿದೆ. ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿ ಮಾಡುವ ಅವಕಾಶ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣಿ. ಒಮ್ಮೆ ತೆಗೆದುಕೊಂಡ ನಿರ್ಧಾರದಿಂದ ಮತ್ತೆ ಹಿಂದೆ ಸರಿಯುವುದು ಬೇಡ. ಆಹಾರ ಸೇವನೆಯಲ್ಲಿ ಮಿತಿ ಇರಲಿ. ಹೆಚ್ಚಿನ ಕೆಲಸದ ಒತ್ತಡ. ಆರೋಗ್ಯದಲ್ಲಿ ಸ್ಥಿರತೆ ಏರ್ಪಡಲಿದೆ.

ಕಟಕ : ವೈದ್ಯರ ಸಲಹೆಯನ್ನು ಸರಿಯಾಗಿ ಪಾಲನೆ ಮಾಡಿ.ವ್ಯಾಪಾರಿಗಳಿಗೆ ಕೊಂಚ ನಷ್ಟ. ನಗರ ವಾಸಿಗಳಿಗೆ ಹೊಸ ಉದ್ಯೋಗಾವಕಾಶಗಳ ಬಾಗಿಲು ತೆರೆಯಲಿದೆ. ಆಷಾಢ ಮಾಸ ಮುಗಿದ ನಂತರ ಮದುವೆ ಯೋಗ, ಮೆಚ್ಚಿದ ಸಂಗಾತಿಯೊಂದಿಗೆ ಬಾಳುವೆ. ಕಣ್ಣಿನ ಆರೋಗ್ಯದಲ್ಲಿ ಕೊಂಚ ವ್ಯತ್ಯಯ ಉಂಟಾಗಲಿದೆ.

ಸಿಂಹ: ತಮ್ಮನೊಂದಿಗೆ ಹಣಕಾಸಿನ ವಿಚಾರದಲ್ಲಿ ಗೊಂದಲ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ದೂರದ ಬಂಧುಗಳು ಹತ್ತಿರವಾಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚಾಗಲಿವೆ. ಖರ್ಚಿನಲ್ಲಿ ಏರುಪೇರು. ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ಶೀಘ್ರ ಪ್ರಗತಿ.

ಕನ್ಯಾ: ಆರೋಗ್ಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಹಿರಿಯರ ಆಶೀರ್ವಾದದಿಂದ ಪ್ರಗತಿ. ಬಂಧು ಬಳಗವೆಲ್ಲಾ ಒಟ್ಟಿಗೆ ಸೇರುವುದು. ಸಂತಸಕ್ಕೆ ಸಾಕಷ್ಟು ಕಾರಣಗಳು ಸಿಕ್ಕಲಿವೆ. ಬದ್ಧತೆಯಿಂದ ಮಾಡುವ ಕೆಲಸದಿಂದ ಹೆಚ್ಚು ಪ್ರಸಿದ್ಧಿ ಹೊಂದು ವಿರಿ. ಮಾತಿನ ಮೇಲೆ ಹೆಚ್ಚು ಹಿಡಿತವಿರಲಿ. ನೆಮ್ಮದಿಯು ಹೆಚ್ಚಾಗಲಿದೆ.

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?

ತುಲಾ: ಜಾಣತನದಿಂದ ಹಿಡಿದ ಕೆಲಸದಲ್ಲಿ ಉನ್ನತಿ ಸಾಧಿಸುವಿರಿ. ಗೆಳೆಯರ ಸಹಾಯದಿಂದ ಹೊಸ ವಾಹನ ಕೊಳ್ಳುವಿರಿ. ಓದಿನಲ್ಲಿ ಪ್ರಗತಿ. ಮಾತಿನಲ್ಲಿ ಸಂಯಮವಿರಲಿ. ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆತ್ಮೀಯರ ಸಾಧನೆಯಿಂದ ಸಂತೋಷ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗಲಿದೆ. 

ವೃಶ್ಚಿಕ: ಬ್ಯಾಂಕ್ ಸಾಲ, ಇಎಂಐಗಳಿಂದ ಸಾಧ್ಯವಾದಷ್ಟು ದೂರ ಇರಲು ಪ್ರಯತ್ನಿಸಿ, ಸಣ್ಣ ಉದ್ದಿಮೆದಾರರಿಗೆ ಸಾಲದ ಹೊರೆ ಹೆಚ್ಚಾಗಲಿದೆ. ಮಾನಸಿಕ ಸ್ಥೈರ್ಯದಿಂದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಿರಿ. ತಂದೆಯ ಮಾರ್ಗದರ್ಶನದಲ್ಲಿ ನಡೆಯುವುದು ಸೂಕ್ತ. ನರಸಿಂಹನ ಪೂಜೆ ಮಾಡಿ.

ಧನಸ್ಸು: ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮುಂದೂಡುವುದು ಒಳಿತು. ದೈಹಿಕವಾಗಿ ಸದೃಢರಾಗುವಿರಿ. ಆರ್ಥಿಕ ಸಮಸ್ಯೆಗಳು ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಾ ಸಾಗಲಿವೆ. ಕೆಲಸದಲ್ಲಿ ಪ್ರಗತಿ. ಹೊಸ ವಸ್ತುಗಳನ್ನು ಕೊಳ್ಳುವ ಕನಸು ಈಡೇರಲಿದೆ. 

ಮಕರ:ಒಳ್ಳೆಯ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣುವುದು ಬೇಡ. ಸಾಧ್ಯವಾದಷ್ಟು ಮೌನವಾಗಿರುವುದು ಒಳಿತು. ಮಾಡುವ ಕೆಲಸದಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಹಿಂದಿನ ಉಳಿತಾಯಗಳಿಂದ ನೂತನ ಉದ್ಯಮ ಸ್ಥಾಪನೆ. 

ಕುಂಭ: ಸಹೋದ್ಯೋಗಿಗಳಿಂದ ಆಗುತ್ತಿದ್ದ ಅನಗತ್ಯ ಕಿರಿಕಿರಿಗೆ ಮುಕ್ತಿ ದೊರೆಯಲಿದೆ. ಸಾಫ್ಟ್‌ವೇರ್ ಉದ್ಯೋಗಿ ಗಳಿಗೆ ವೃತ್ತಿ ಬದಲಾವಣೆಯ ಅವಕಾಶ. ನೂತನ ದಂಪತಿಗಳಿಗೆ ಶುಭ ಸುದ್ದಿ ತಿಳಿಯಲಿದೆ. ಹೊಸ ಮನೆ ಕೊಳ್ಳುವ ಕನಸನ್ನು ಸದ್ಯಕ್ಕೆ ಕೈ ಬಿಡುವುದು ಉತ್ತಮ. ನೂತನ ದಂಪತಿಗಳ ಬಾಳಿನಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ. 

ಮೀನ: ಮನೆ ದೇವರಿಗೆ ಪೂಜೆ ಸಲ್ಲಿಸಿಬರುವುದು ಉತ್ತಮ. ಮನಸ್ಸಿನ ನೆಮ್ಮದಿಗೆ ಅಡೆತಡೆ ಉಂಟು ಮಾಡುವ ಸಾಕಷ್ಟು ವಿಚಾರಗಳು ಎದುರಾಗಲಿವೆ. ಸ್ವಲ್ಪ ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಮಕ್ಕಳ ತುಂಟಾಟದಿಂದ ಮನೆಯಲ್ಲಿ ಸಂತೋಷ. ಕೆಲಸದಲ್ಲಿ ಪ್ರಗತಿ.

click me!