ನೆಮ್ಮದಿಯಾಗಿ ನಿದ್ರಿಸಲು ಹೀಗಿರಲಿ ವಾಸ್ತು

Published : Aug 17, 2018, 07:10 PM ISTUpdated : Dec 12, 2018, 01:22 PM IST
ನೆಮ್ಮದಿಯಾಗಿ ನಿದ್ರಿಸಲು ಹೀಗಿರಲಿ ವಾಸ್ತು

ಸಾರಾಂಶ

ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಜನರಿಗೆ ಬೆಂಬಿಡದೇ ನಿದ್ರಾ ಸಮಸ್ಯೆ ಕಾಡುತ್ತದೆ. ಅದೂ ಅಲ್ಲದೇ ಬೆಡ್ ರೂಂನ ಕೆಲವು ದೋಷಗಳಿಂದಲೂ ನಿದ್ದೆ ದೂರವಾಗಬಹುದು. ಇದಕ್ಕೆ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್....

ಕೆಲವರನ್ನು ಕಾಡುವ ನಿದ್ರಾ ಹೀನತೆಗೆ ಶಾರೀರಿಕ ಸಮಸ್ಯೆ ಇದ್ದರೆ, ವಾಸ್ತು ದೋಷವೂ ಕಾರಣವಾಗಬಹುದು. ಮನೆಯಲ್ಲಿ ನೈಋತ್ಯ ದಿಕ್ಕಿನಲ್ಲಿ ದೋಷ ಕಾಣಿಸಿಕೊಂಡರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುತ್ತದೆ. ಇದರ ಜೊತೆ ಬೆಡ್ ರೂಮಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳು ಅಗತ್ಯ. ಅದಕ್ಕಾಗಿ ಏನು ಮಾಡಬೇಕು?

- ವಾಸ್ತು ಶಾಸ್ತ್ರದ ಪ್ರಕಾರ ನೀರಿಗೆ ಚಿಟಕಿ ಉಪ್ಪು ಸೇರಿಸಿ ಕೈ, ಕಾಲು ತೊಳೆದು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. 
- ಮನೆಯ ನೈಋತ್ಯ ದಿಕ್ಕಿನಲ್ಲಿ ಪಿರಮಿಡ್ ಇಡಿ. 
- ನೈಋತ್ಯ ದಿಕ್ಕಿನಲ್ಲಿ ಕ್ರಿಸ್ಟಲ್ ಬಾಲ್ ಇಟ್ಟರೆ ಚೆನ್ನಾಗಿ ನಿದ್ರೆ ಬರುತ್ತದೆ. 
- ಬೆಡ್ ರೂಮಿನಲ್ಲಿ ಬೆಡ್ ಕೆಳಗೆ ಖಾಲಿ ಇರಲಿ. ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ. 
- ದಿಂಬಿನ ಕೆಳಗಡೆ ಅಶ್ವಥ ಮರದ ಬೇರನ್ನಿಟ್ಟುಕೊಂಡರೆ, ಸುಖ ನಿದ್ರೆ ನಿಮ್ಮದಾಗುತ್ತದೆ. 
- ಮಲಗುವ ಮುನ್ನ ಬೆಡ್ ರೂಮಿನಲ್ಲಿಎಳ್ಳೆಣ್ಣೆ ದೀಪ ಹಚ್ಚಿದರೆ ಒಳಿತು.
- ತಿಂದ ಪಾತ್ರೆಗಳನ್ನು ಬೆಡ್ ರೂಮಿನಲ್ಲಿ ಹಾಗೆ ಇಡಬೇಡಿ. 
- ಉಪಯೋಗಿಸುವ ಬೆಡ್ ಶೇಟ್ ಅಥವಾ ಬ್ಲಾಂಕೆಟ್ ಅನ್ನು ಆಗಾಗ ಬದಲಾಯಿಸಿ. 
- ಬೆಡ್ ರೂಮಿಗೆ ಗಾಳಿ, ಬೆಳಕು ಚೆನ್ನಾಗಿ ಬರುವಂತೆ ನೋಡಿಕೊಳ್ಳಿ. ಕಿಟಕಿ, ಬಾಗಿಲು ತೆರೆದಿಡಿ. 
- ತಾಮ್ರದ ಪಾತ್ರೆಯಲ್ಲಿ ನೀರಿಟ್ಟು ಬೆಡ್ ರೂಮಿನಲ್ಲಿಡಿ. ಆ ನೀರನ್ನು ಬಳಗ್ಗೆ ಗಿಡಕ್ಕೆ ಹಾಕಿ.

ವಾಸ್ತು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

PREV
click me!

Recommended Stories

ಯಾರೇ ಅಡ್ಡ ಬಂದ್ರೂ ಧೈರ್ಯದಿಂದ ಮುನ್ನುಗ್ಗುವಂತಹ ಶಕ್ತಿಯಿರುವ 5 ರಾಶಿಗಳಿವು
ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ