ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಶುಭ?

First Published Jun 22, 2018, 7:11 PM IST
Highlights

ಅಕ್ವೇರಿಯಂನಲ್ಲಿ ಮೀನುಗಳು ಆಚೆಯಿಂದ ಈಚೆ, ಈಚೆಯಿಂದ ಆಚೆ ಓಡಾಡುತ್ತಿದ್ದರೆ. ಮನಸ್ಸಿಗೇನೋ ನೆಮ್ಮದಿ. ಪುಟ ಪುಟನೇ ಓಡಾಡೋ ಮೀನುಗಳು ಬಿಪಿಯನ್ನು ನಿಯಂತ್ರಿಸಿ, ಮಾನಸಿಕ ನೆಮ್ಮದಿಗೂ ಕಾರಣವಾಗಲಿದೆ. ಆದರೆ, ಇದನ್ನು ಇಡಲು ಕೆಲವು ವಾಸ್ತು ನಿಯಮಗಳಿವೆ . ಏನವು?

ಮನೆಯಲ್ಲಿ ಏನಾದರೂ ದೋಷಗಳು ತಾಗಿದರೆ ಅಕ್ವೇರಿಯಂನ ಮೀನುಗಳಿಗೆ ತಾಗುತ್ತವೆ. ಆ ದೋಷಗಳನ್ನು ಮೀನುಗಳು ಸ್ವೀಕರಿಸಿ ಅವು ಸಾಯುತ್ತವೆ. ಆದ್ದರಿಂದ
ಮನೆಯಲ್ಲಿ ಅಕ್ವೇರಿಯಂ ಇದ್ದರೆ ನೆಮ್ಮದಿ ನೆಲೆಸುತ್ತದೆ.

- ಅಕ್ವೇರಿಯಂನಲ್ಲಿ 1-3-5-7-9 ಸಂಖ್ಯೆಯಲ್ಲಿ ಮೀನುಗಳನ್ನಿಡಬೇಕು. 
- ಬಿಪಿಯನ್ನು ಕಡಿಮೆ ಮಾಡಿ, ಮನಸ್ಸನ್ನು ಪ್ರಶಾಂತಗೊಳಿಸುವ ಅಕ್ವೇರಿಯಂ ಮನೆಯಲ್ಲಿರಬೇಕು. 
-ಈ ಅಕ್ವೇರಿಯಂ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಆಗಾಗ ತೊಳೆದು, ಶುದ್ಧ ನೀರಿರುವಂತೆ ನೋಡಿಕೊಳ್ಳಬೇಕು. ನೀರು ಕೊಳಕಾದರೆ ನೆಗಟಿವ್ ಎನರ್ಜಿ ಹೆಚ್ಚುತ್ತದೆ.
-ರೂಂನಲ್ಲಿ ಅಕ್ವೇರಿಯಂ ಇಟ್ಟರೆ, ಆರೋಗ್ಯ ಸಮಸ್ಯೆ ಕಾಡುತ್ತದೆ. 
- ಅಡುಗೆ ಮನೆಯಲ್ಲಿಯೂ ಅಕ್ವೇರಿಯಂ ಇಡಬಾರದು. ಆಹಾರದಿಂದ ಆರೋಗ್ಯಕ್ಕೆ ತೊಂದರೆ. 
- ಮನೆಯ ಉತ್ತರ ಅಥವಾ ಪೂರ್ವಾಭಿಮುಖವಾಗಿ ಅಕ್ವೇರಿಯಂ ಇಡಬೇಕು.
-ಆರೋಗ್ಯಯುತ ಮೀನು ಅಕ್ವೇರಿಯಂನಲ್ಲಿರಲಿ.
- ಗೋಲ್ಡನ್ ಹಾಗೂ ಡ್ರ್ಯಾಗನ್ ಮೀನು ಅಕ್ವೇರಿಯಂನಲ್ಲಿದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ.
- ಅಕ್ವೇರಿಯಂನಲ್ಲಿ ಒಂಬತ್ತು ಮೀನುಗಳಿದ್ದು, ಅವುಗಳಲ್ಲಿ ಎಂಟು ಒಂದೇ ತಳಿಗೆ ಸೇರಿದ್ದಾದರೆ ಶುಭ.
- ದಿನಾ ಒಬ್ಬರೇ ಮೀನಿಗೆ ಆಹಾರ ನೀಡಬೇಕು.
- ಲಿವಿಂಗ್ ರೂಂನಲ್ಲಿಯೇ ಅಕ್ವೇರಿಯಂ ಇಟ್ಟರೆ ಒಳ್ಳೆಯದು. ಬೇರೆಡೆ ಇಡಬಾರದು.

ಬೆಡ್‌ರೂಂಗೆ ವಾಸ್ತು

 

click me!