ಮನೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದರೆ, ಮನಸ್ಸಿಗೂ ನೆಮ್ಮದಿ..

By Web DeskFirst Published Mar 17, 2019, 4:41 PM IST
Highlights

ಮನೆಯನ್ನು ನೀಟ್ ಆ್ಯಂಡ್ ಕ್ಲೀನಾಗಿ ಇಟ್ಟುಕೊಂಡರೆ ಸಾಕು, ಎಲ್ಲವೂ ವ್ಯವಸ್ಥಿತವಾಗಿರುತ್ತದೆ. ಆದರೆ, ಅವ್ಯವಸ್ಥೆ ಕಾಡಿದರೆ ಮನಸ್ಸಿನ ನೆಮ್ಮದಿಯೇ ಇಲ್ಲವಾಗುತ್ತದೆ. ಇದನ್ನೇ ವಾಸ್ತು ಶಾಸ್ತ್ರ ಎನ್ನುವುದು. ನೆಗಟಿವ್ ಎನರ್ಜಿ ಹೋಗಿಸಲು ಇಲ್ಲಿವೆ ವಾಸ್ತು ಟಿಪ್ಸ್...

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲ ವಸ್ತು, ಕೋಣೆಗಳಿಗೆ ವಾಸ್ತು ತುಂಬಾ ಮುಖ್ಯ. ಇಲ್ಲವಾದರೆ ಅದು ಮನೆಯ ಜನರು, ಮನಸ್ಸಿನ ಮೇಲೆ ಹಾಗೂ ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಾಗೆ ಆಗಬಾರದೆಂದಾದರೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. 

  • ಮನೆಯಲ್ಲಿ ಯಾವುದೇ ವಸ್ತುಗಳು ಅವ್ಯವಸ್ಥಿತವಾಗಿ ಇಡಬಾರದು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. 
  • ಹೆಚ್ಚಾಗಿ ಜನರು ಮನೆಯ ಸ್ಟೋರ್ ರೂಮಿನಲ್ಲಿ ಬೇಡವಾದ ವಸ್ತುಗಳನ್ನು ತುಂಬುತ್ತಾರೆ. ಹೀಗೆ ಮಾಡಬಾರದು. ಇದು ಮನೆಯ ಮಂದಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
  • ಮನೆಯ ಪೇಂಟಿಂಗ್ ಅಥವಾ ಪ್ಲಾಸ್ಟರ್ ಬೀಳುತ್ತಿದ್ದರೆ ಅದನ್ನು ತಕ್ಷಣವೇ ಸರಿಪಡಿಸಿ. 
  • ಆಗ್ನೇಯ ಕೊನೆಯಲ್ಲಿ ಅಡುಗೆ ಕೋಣೆ ಇರದಿದ್ದರೆ ಅಲ್ಲೊಂದು ಕೆಂಪು ಬಲ್ಬ್ ಹಾಕಿ. 
  • ಮನೆಯಲ್ಲಿ ದೇವರ ಕೋಣೆ ಈಶಾನ್ಯ ಭಾಗದಲ್ಲಿದ್ದರೆ ಒಳಿತು. 
  • ಬಾತ್‌ರೂಮಿನಲ್ಲಿ ಅಥವಾ ಟಾಯ್ಲೆಟ್ ಬಾಗಿಲಿನ ಎದುರು ಪರದೆ ಹಾಕಿ. 
  • ಅಪ್ಪಿ ತಪ್ಪಿಯೂ ಈಶಾನ್ಯ ದಿಕ್ಕಿನಲ್ಲಿ ಬಾತ್‌ರೂಮ್ ಅಥವಾ ಟಾಯ್ಲೆಟ್ ಮಾಡಬಾರದು. 
  • ಮನೆಗೆ ಯಾವಾಗಲೂ ತಿಳಿ ಬಣ್ಣವನ್ನು ಬಳಿಯಿರಿ. ಗಾಢವಾದ ಬಣ್ಣ ಬೇಡವೇ ಬೇಡ.
click me!