
ಗತಿಸಿಹೋದ ನಿಮ್ಮ ಅಜ್ಜನೋ, ತಂದೆಯೋ, ತಾಯಿಯೋ, ಅವರಿಗಿಂತಲೂ ಹಿಂದಿನವರೋ ನಿಮ್ಮ ಕನಸಿನಲ್ಲಿ ಬಂದು ಜೋರಾಗಿ ರೋದಿಸಿದರೆ, ಅತ್ತರೆ ಅದರ ಅರ್ಥವೇನು ಗೊತ್ತೆ? ಗರುಡ ಪುರಾಣದಲ್ಲಿ ಇದರ ಅರ್ಥವನ್ನು ಹೇಳಿದೆ. ಸಾವಿಗೂ ಮುನ್ನ ಯಮರಾಜ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತಾನಂತೆ. ಈ ಸೂಚನೆಗಳು ಕಾಣಿಸಿಕೊಂಡರೆ ಆ ವ್ಯಕ್ತಿ ಸದ್ಯದಲ್ಲೇ ಸಾಯುತ್ತಾನೆ ಎಂದು ಗರುಡ ಪುರಾಣ ಹೇಳುತ್ತದೆ. ಯಮರಾಜನು ನೀಡುವ ಮರಣದ ಸೂಚನೆಗಳಲ್ಲಿ ಇದೂ ಒಂದಂತೆ. ಹಾಗಾದರೆ ಇತರ ಇಂಥ ಸೂಚನೆಗಳು ಯಾವುವು?
ಗರುಡ ಪುರಾಣದ ಪ್ರಕಾರ, ಸಾವಿನ ಮೊದಲು, ಸಾವಿನ ದೇವರು ವ್ಯಕ್ತಿಗೆ ಅನೇಕ ಚಿಹ್ನೆಗಳನ್ನು ನೀಡುತ್ತಾನೆ. ಗರುಡ ಪುರಾಣದ ಪ್ರಕಾರ, ಮರಣದ ಸ್ವಲ್ಪ ಮೊದಲು ಇದನ್ನು ಅರಿತುಕೊಳ್ಳುತ್ತಾರೆ ಮತ್ತು ಕೆಲವು ಮರಣದ ಸೂಚನೆಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ. ನಂಬಿಕೆಗಳ ಪ್ರಕಾರ, ವಿಷ್ಣುವು ಸ್ವತಃ ಗರುಡ ಪುರಾಣದಲ್ಲಿ ಈ ಚಿಹ್ನೆಗಳ ಬಗ್ಗೆ ಹೇಳುತ್ತಾನೆ. ಕೆಲವರು ಕನಸಿನಲ್ಲಿ ಯಮರಾಜನ ಈ ಚಿಹ್ನೆಗಳನ್ನು ಅನುಭವಿಸುತ್ತಾರೆ. ಕನಸುಗಳು ಮತ್ತು ಆಧ್ಯಾತ್ಮಿಕ ಅನುಭವವು ಮುಂಬರುವ ಘಟನೆಗಳನ್ನು ಊಹಿಸುವ ಒಂದು ಮಾರ್ಗವಾಗಿರಬಹುದು. ಹಾಗಾದರೆ ಯಮರಾಜನು ಸಾವಿಗೂ ಮುನ್ನ ಯಾವೆಲ್ಲಾ ಸೂಚನೆಗಳನ್ನು ನೀಡುತ್ತಾನೆ?
ಪಿತೃಗಳು ಅಳುವುದು
ದೇಹವನ್ನು ಬಿಡುವ ಕೊನೆಯ ಸಮಯದಲ್ಲಿ, ವ್ಯಕ್ತಿಯ ಧ್ವನಿಯೂ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಮತ್ತು ಅವನು ಮಾತನಾಡಲು ಪ್ರಯತ್ನಿಸುತ್ತಾನೆ ಆದರೆ ಮಾತನಾಡಲು ಸಾಧ್ಯವಾಗುವುದಿಲ್ಲ. ಯಾರೋ ಉಸಿರುಗಟ್ಟಿಸಿದಂತೆ ಧ್ವನಿ ಕರ್ಕಶವಾಗುತ್ತದೆ. ಗರುಡ ಪುರಾಣದ ಪ್ರಕಾರ, ಪೂರ್ವಜರು ಸಾವಿನ ಕೆಲವು ದಿನಗಳ ಮೊದಲು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಪೂರ್ವಜರು ಕನಸಿನಲ್ಲಿ ಅಳುವುದು ಅಥವಾ ದುಃಖಿತನಾಗಿದ್ದರೆ, ನಿಮ್ಮ ಸಾವು ಹತ್ತಿರದಲ್ಲಿದೆ ಎಂದು ಅರ್ಥಮಾಡಿಕೊಳ್ಳಿ.
ಎಲ್ಲ ನೆನಪಾಗುವುದು
ಯಾವುದೇ ಒಬ್ಬ ವ್ಯಕ್ತಿಯು ತನ್ನ ಸಾವಿಗೂ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನಂತೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆಂದು ಹೇಳಲಾಗಿದೆ. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ ಅರಿವಾಗುತ್ತದಂತೆ. ಆತ ಇದೇ ವಿಚಾರವಾಗಿ ತನ್ನ ಪಾಪ-ಪುಣ್ಯ ಕಾರ್ಯಗಳ ಬಗ್ಗೆ ನೆನಪಿಸಿಕೊಳ್ಳುತ್ತಾನಂತೆ.
ನೆರಳು ಗೋಚರಿಸದಿರುವುದು
ಯಾವುದೇ ಓರ್ವ ವ್ಯಕ್ತಿಯ ನೆರಳು ನೀರಿನಲ್ಲಿ, ಎಣ್ಣೆಯಲ್ಲಿ, ಕನ್ನಡಿಯಲ್ಲಿ ಕಾಣಿಸಿಕೊಳ್ಳದಿದ್ದರೆ ಅಥವಾ ಅವರ ನೆರಳು ವಿರೂಪಗೊಂಡಂತೆ ಕಂಡುಬಂದರೆ, ಒಬ್ಬರು ದೇಹವನ್ನು ತೊರೆಯುವ ಸಮಯ ಹತ್ತಿರದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಮರಣ ಹೊಂದಲು ಸ್ವಲ್ಪ ಸಮಯದ ಮುನ್ನ ಈ ಎಲ್ಲಾ ಸೂಚನೆಗಳನ್ನು ಯಮರಾಜನಿಂದ ಪಡೆದುಕೊಳ್ಳುತ್ತಾರೆ.
ಅದ್ಭುತ ಬೆಳಕು ಕಾಣುವುದು
ಓರ್ವ ವ್ಯಕ್ತಿಗೆ ಮರಣ ದಿನಗಳು ಹತ್ತಿರವಾಗುತ್ತಿದ್ದಂತೆ ಅವನ ದೃಷ್ಟಿ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಅವನಿಗೆ ತನ್ನ ಸುತ್ತಮುತ್ತ ಕುಳಿತಿರುವ ಜನರನ್ನು ನೋಡಲು ಕೂಡ ಸಾಧ್ಯವಾಗುವುದಿಲ್ಲ. ಆದರೆ, ಯಾವ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಅಥವಾ ಸಕರ್ಮಗಳನ್ನು ಮಾಡಿರುತ್ತಾನೆಯೋ ಆ ವ್ಯಕ್ತಿ ತನ್ನ ಮರಣದ ಸಮಯದಲ್ಲಿ ಅದ್ಭುತ ಬೆಳಕನ್ನು ನೋಡುತ್ತಾನೆ. ಅಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮರಣ ಬಂದಾಗ ಹಿಂದೇಟು ಹಾಕುವುದಿಲ್ಲ.
ಯಮದೂತರು ಕಾಣುವುದು
ಮರಣದ ಸಮಯ ಸಮೀಪಿಸಿದಾಗ, ಇಬ್ಬರು ಯಮ ದೂತರು ಸಾಯುತ್ತಿರುವ ವ್ಯಕ್ತಿಯ ಮುಂದೆ ಬಂದು ನಿಲ್ಲುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಯಾವ ವ್ಯಕ್ತಿ ತನ್ನ ಜೀವಿತಾವಧಿಯ ಉದ್ದಕ್ಕೂ ಕೆಟ್ಟ ಕಾರ್ಯಗಳನ್ನು ಮಾಡಿರುತ್ತಾನೆಯೋ ಅವನು ಈ ಯಮದೂತರನ್ನು ನೋಡಿ ಭಯಪಡುತ್ತಾನೆ.
ಚಾಣಕ್ಯ ನೀತಿ: ಈ 4 ಹೆಂಗಸ್ರಿಂದ ದೂರ ಇರಿ
ಇವು ಕಾಣಿಸಬಹುದು
ಕೂದಲು ಬೆಳ್ಳಗಾಗುವುದು, ಹಲ್ಲು ಮುರಿಯುವುದು, ದೃಷ್ಟಿ ಕುಂದುವುದು ಮತ್ತು ದೇಹದ ಅಂಗಾಂಗಗಳು ಕಾರ್ಯನಿರ್ವಹಿಸದೇ ಇರುವುದು ಸಹ ಸಾವಿನ ಮುನ್ನದ ಚಿಹ್ನೆಗಳಾಗಿರಬಹುದು.
ಕೈಯ ರೇಖೆಗಳು ಮಾಯ
ಸಾವಿಗೂ ಮೊದಲು ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ವ್ಯಕ್ತಿಯು ಸಾವಿನ ಸಮೀಪದಲ್ಲಿರುವಾಗ ಚಿತ್ರ-ವಿಚಿತ್ರವಾಗಿ ಮಾತನಾಡುತ್ತಾನಂತೆ. ಗರುಡ ಪುರಾಣದಲ್ಲಿ ಹೇಳಿದಂತೆ ಯಾವುದೇ ಒಬ್ಬ ವ್ಯಕ್ತಿಯು ಸತ್ತಾಗ ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನಂತೆ. ಕೆಲವರು ಜ್ವಾಲೆಗಳನ್ನು ನೋಡುತ್ತಾರಂತೆ.
ಗರುಡ ಪುರಾಣ ತುಂಬಾ ಹಿಂದೆ ಬರೆಯಲಾದ ಪುರಾಣ. ಅದರಲ್ಲಿ ಈ ಲಕ್ಷಣಗಳು ಹೇಳಲ್ಪಟ್ಟಿವೆ. ಇದರ ಸತ್ಯಾಸತ್ಯತೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಇದನ್ನು ಸಮರ್ಥಿಸುವುದಿಲ್ಲ.
ಮನೆಯಲ್ಲಿ ಹೀಗೆಲ್ಲಾ ಆಗ್ತಿದ್ರೆ ನಿಮ್ಮ ಸುತ್ತಮುತ್ತವೇ ದೆವ್ವ ಇರೋದು ಫಿಕ್ಸ್!