ನಿಂತುಹೋಗಿದ್ದ ಕೆಲಸಗಳಿಗೆ ಸಿಗಲಿದೆ ವೇಗ, ಕೈಸೇರಲಿದೆ ಹೊಸ ಆದಾಯ: ಸೂರ್ಯ ನಕ್ಷತ್ರ ಸಂಚಾರದ ಲಾಭ ಪಡೆಯುವ 4 ರಾಶಿ

Published : Nov 20, 2026, 04:39 PM IST
Surya Nakshatra Transit 2026

ಸಾರಾಂಶ

Surya Nakshatra Transit 2026: ಇಂದು ಸೂರ್ಯನು ಅನುರಾಧ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಡಿಸೆಂಬರ್ 3ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದ ಈ ಕೆಳಕಂಡ ರಾಶಿಯವರಿಗೆ ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ವಿಚಾರಗಳಲ್ಲಿ ಹೊಸ ಅವಕಾಶಗಳು ಸಿಗುವ ಸೂಚನೆಗಳಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮತ್ಯಾಕೆ ತಡ, ಆ ಅದೃಷ್ಟವಂತ ರಾಶಿಗಳ ವಿವರ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷ ಮಹತ್ವವಿದೆ. ಸೂರ್ಯನನ್ನು ಆತ್ಮವಿಶ್ವಾಸ, ಆತ್ಮಗೌರವ, ನಾಯಕತ್ವದ ಗುಣಗಳು, ತಂದೆ, ಸರ್ಕಾರಿ ವಲಯ, ಹುದ್ದೆ ಮತ್ತು ಪ್ರತಿಷ್ಠೆಗೆ ಕಾರಕನೆಂದು ಪರಿಗಣಿಸಲಾಗುತ್ತದೆ. ಸೂರ್ಯನ ರಾಶಿ ಬದಲಾವಣೆಯ ಜೊತೆಗೆ ನಕ್ಷತ್ರ ಬದಲಾವಣೆಯನ್ನೂ ಜ್ಯೋತಿಷ್ಯ ದೃಷ್ಟಿಯಿಂದ ಪ್ರಮುಖವೆಂದು ಭಾವಿಸಲಾಗುತ್ತದೆ. ಸೂರ್ಯನ ಸ್ಥಾನ ಬದಲಾದಾಗ ಅದರ ಪ್ರಭಾವವು ವ್ಯಕ್ತಿಗಳ ವೃತ್ತಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಗೌರವದ ಮೇಲೆ ಇರುತ್ತದೆ ಎಂಬುದು ಜ್ಯೋತಿಷ್ಯ ನಂಬಿಕೆ.

ಈ ಕ್ರಮದಲ್ಲಿ ನವೆಂಬರ್ 20, 2026ರಂದು ಮುಂಜಾನೆ 3:09 ಗಂಟೆಗೆ ಸೂರ್ಯನು ವಿಶಾಖ ನಕ್ಷತ್ರವನ್ನು ತೊರೆದು ಅನುರಾಧ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ನಕ್ಷತ್ರಕ್ಕೆ ಶನಿ ದೇವರು ಅಧಿಪತಿಯಾಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶನಿ ತಂದೆ-ಮಕ್ಕಳಾದರೂ, ಅವರಿಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತದೆ. ಹೀಗಾಗಿ ಶನಿ ಅಧಿಪತಿಯಾಗಿರುವ ಅನುರಾಧ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ವಿಶೇಷ ಪ್ರಾಮುಖ್ಯತೆ ಪಡೆದುಕೊಂಡಿದೆ. ಸೂರ್ಯನು ಡಿಸೆಂಬರ್ 3, 2026ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ನಾಲ್ಕು ರಾಶಿಯವರಿಗೆ ವೃತ್ತಿ, ಉದ್ಯೋಗ, ವ್ಯಾಪಾರ ಹಾಗೂ ಆರ್ಥಿಕ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ವಿಶೇಷವಾಗಿ ಹೊಸ ಅವಕಾಶಗಳನ್ನು ಬಾಚಿಕೊಳ್ಳುವುದರ ಜೊತೆಗೆ ಆದಾಯವನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಹಾಕಬಹುದು. ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂಬುದನ್ನು ನೋಡೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಸೂರ್ಯನ ಅನುರಾಧ ನಕ್ಷತ್ರ ಸಂಚಾರವು ವೃತ್ತಿಪರವಾಗಿ ಅನುಕೂಲಕರವಾಗಿರಬಹುದು. ಉದ್ಯೋಗಿಗಳಿಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಉತ್ತಮ ಅವಕಾಶಗಳು ಸಿಗಬಹುದು. ದೀರ್ಘಕಾಲದಿಂದ ಬಾಕಿ ಉಳಿದಿದ್ದ (ಪೆಂಡಿಂಗ್) ಕೆಲಸಗಳು ವೇಗ ಪಡೆದುಕೊಳ್ಳುವ ಸೂಚನೆಗಳಿವೆ. ವ್ಯಾಪಾರಿಗಳಿಗೆ ಹೊಸ ವ್ಯಕ್ತಿಗಳ ಪರಿಚಯವಾಗಿ, ಆ ಮೂಲಕ ಲಾಭವಾಗಬಹುದು. ಆದರೆ, ಆರ್ಥಿಕ ವ್ಯವಹಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಎಚ್ಚರಿಕೆಯಿಂದ ವ್ಯವಹರಿಸಬೇಕು.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ನಕ್ಷತ್ರ ಬದಲಾವಣೆಯು ಆರ್ಥಿಕವಾಗಿ ಲಾಭದಾಯಕವಾಗಿರಬಹುದು. ಹೊಸ ಆದಾಯ ಮೂಲಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಎದುರಾಗಬಹುದು. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹಾಗೂ ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರ ವಿಸ್ತರಣೆಗೆ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಮಾತುಗಾರಿಕೆ ಮತ್ತು ಪರಿಚಯಗಳು ಪ್ರಗತಿಗೆ ನೆರವಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಸೂರ್ಯನ ನಕ್ಷತ್ರ ಸಂಚಾರವು ಉದ್ಯೋಗ ಮತ್ತು ಆರ್ಥಿಕ ವಿಚಾರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆಗಾಗಿ ಕಾಯುತ್ತಿರುವವರಿಗೆ ಉತ್ತಮ ಅವಕಾಶಗಳು ಬರಬಹುದು. ವ್ಯಾಪಾರದಲ್ಲೂ ಕ್ರಮೇಣ ಪ್ರಗತಿ ಕಂಡುಬರಬಹುದು. ಹಿಂದೆ ಮಾಡಿದ ಹೂಡಿಕೆಗಳು ಮತ್ತು ಆರ್ಥಿಕ ಯೋಜನೆಗಳನ್ನು ಪರಿಶೀಲಿಸಲು ಇದು ಅನುಕೂಲಕರ ಸಮಯ. ಆದರೆ ಹೂಡಿಕೆಗಳ ವಿಷಯದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಧನು ರಾಶಿ

ಧನು ರಾಶಿಯವರಿಗೆ ಈ ಸೂರ್ಯ ಸಂಚಾರವು ಹೊಸ ಅವಕಾಶಗಳಿಗೆ ದಾರಿ ತೋರಬಹುದು. ವೃತ್ತಿಜೀವನದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ನಿವಾರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಸಹಕಾರ ಮತ್ತು ಪ್ರೋತ್ಸಾಹ ದೊರೆಯಬಹುದು. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಹಾಗೂ ವ್ಯಾಪಾರ ಪ್ರಸ್ತಾವನೆಗಳು ಬರುವ ಸೂಚನೆಗಳಿವೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಹಿಂದೆ ರೂಪಿಸಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಉತ್ತಮ ಸಮಯವಾಗಬಹುದು.

(Disclaimer: ಇಲ್ಲಿ ನೀಡಲಾದ ಫಲಿತಾಂಶಗಳು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಹಾಗೂ ಸಂಪ್ರದಾಯಗಳನ್ನು ಆಧರಿಸಿವೆ. ಇವುಗಳಿಗೆ ವೈಜ್ಞಾನಿಕ ಆಧಾರಗಳಿಲ್ಲ. ವೈಯಕ್ತಿಕ ಜಾತಕವನ್ನು ಅವಲಂಬಿಸಿ ಫಲಿತಾಂಶಗಳಲ್ಲಿ ಬದಲಾವಣೆಗಳಿರಬಹುದು.)

PREV
Read more Articles on
click me!

Recommended Stories

20 ನವೆಂಬರ್ 2026 ಜಾತಕ: ವಜ್ರ ಯೋಗವು ತುಲಾ ರಾಶಿಗೆ ಬಡ್ತಿಯನ್ನು ಮತ್ತು ಮಕರ ರಾಶಿಗೆ ಆಸ್ತಿ ಸಂತೋಷವನ್ನು ನೀಡುತ್ತದೆ
Chanakya Niti: ಚಾಣಕ್ಯರ ಪ್ರಕಾರ ಈ 5 ಜನರಿಗೆ ಸಹಾಯ ಮಾಡಿದರೆ ನಿಮಗೇ ನಷ್ಟ! ಯಾರು ಆ ವ್ಯಕ್ತಿಗಳು?