Surya Ketu Yuti Effects: ಸೂರ್ಯ ಮತ್ತು ಕೇತುವಿನ ಸಂಯೋಗದಿಂದ ಗ್ರಹಣ ಯೋಗ ನಿರ್ಮಾಣವಾಗುತ್ತದೆ. ಈ ರೀತಿಯ ನಿರ್ಮಾಣವಾಗುವ ಗ್ರಹಣ ಯೋಗ ಕೆಲವು ರಾಶಿಗಳಿಗೆ ಶುಭವನ್ನುಂಟು ಮಾಡಿದ್ರೆ, ಒಂದಿಷ್ಟು ರಾಶಿಚಕ್ರಗಳಿಗೆ ಅಶುಭವನ್ನುಂಟು ಮಾಡುತ್ತದೆ.
ಗ್ರಹಗಳು ರಾಶಿಚಕ್ರಗಳನ್ನು ಬದಲಾಯಿಸೋದರಿಂದ ಸಂಯೋಗ ರಚನೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಸಂಯೋಗವನ್ನು ಯುತಿ ಅಂತಾನೂ ಕರೆಯಲಾಗುತ್ತದೆ. ಈ ಸಂಯೋಗ ಅಥವಾ ಸಂಯೋಜನೆಯಿಂದಾಗಿ ರಾಶಿಚಕ್ರಗಳ ಮೇಲೆ ಶುಭ ಮತ್ತು ಅಶುಭ ಫಲಗಳು ನಿರ್ಧಾರವಾಗುತ್ತವೆ. ಕೇತುವನ್ನು ಮೋಕ್ಷ ನಿವಾರಕ ಗ್ರಹ ಎಂದು ಕರೆಯಲಾಗುತ್ತದೆ. 18 ವರ್ಷಗಳ ಬಳಿಕ ಕನ್ಯಾ ರಾಶಿಯಲ್ಲಿ ಸೂರ್ಯ ಮತ್ತು ಕೇತು ಸಂಯೋಗವಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ, 16ನೇ ಸೆಪ್ಟೆಂಬರ್ ನಿಂದ 16ನೇ ಅಕ್ಟೋಬರ್‌ವರೆಗೆ ಸೂ ಸೂರ್ಯ ಮತ್ತು ಕೇತು ಕನ್ಯಾ ರಾಶಿಯಲ್ಲಿ ವಿರಾಜಮಾನವಾಗಿರಲಿದೆ. ಸೂರ್ಯ ಮತ್ತು ಕೇತುವಿನ ಸಂಯೋಗದಿಂದ ಗ್ರಹಣ ಯೋಗ ನಿರ್ಮಾಣವಾಗುತ್ತದೆ. ಈ ರೀತಿಯ ನಿರ್ಮಾಣವಾಗುವ ಗ್ರಹಣ ಯೋಗ ಕೆಲವು ರಾಶಿಗಳಿಗೆ ಶುಭವನ್ನುಂಟು ಮಾಡಿದ್ರೆ, ಒಂದಿಷ್ಟು ರಾಶಿಚಕ್ರಗಳಿಗೆ ಅಶುಭವನ್ನುಂಟು ಮಾಡುತ್ತದೆ.
ಸೂರ್ಯ-ಕೇತು ಸಂಯೋಗದಿಂದ ಕೆಲ ರಾಶಿ ಚಕ್ರಗಳ ಜನರ ಜೀವನದಲ್ಲಿ ವೃದ್ಧಿಯಾಗುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಮತ್ತು ಸಫಲತೆ ಹಾಗೂ ಧನ-ಸಂಪತ್ತು ಪ್ರಾಪ್ತಿ ಆಗುತ್ತದೆ. ಹಾಗಾದ್ರೆ ಯಾವ ರಾಶಿಚಕ್ರಗಳಿಗೆ ಸೂರ್ಯ ಮತ್ತು ಕೇತು ಸಂಯೋಗ ಲಾಭದಾಯಕ ಮತ್ತು ಒಳಿತು ತರಲಿದೆ ಎಂಬುದರ ಬಗ್ಗೆ ನೋಡೋಣ ಬನ್ನಿ.
undefined
1.ವೃಷಭ ರಾಶಿ
16ನೇ ಸೆಪ್ಟೆಂಬರ್-16ನೇ ಅಕ್ಟೋಬರ್ ಅವಧಿ ನಡುವೆ ಕನ್ಯಾ ರಾಶಿಯಲ್ಲಿ ಸೂರ್ಯ ಮತ್ತು ಕೇತು ವಿರಾಜಮಾನವಾಗಿರುವ ಕಾರಣ, ವೃಷಭ ರಾಶಿಯವರಿಗೆ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ವಿಶೇಷ ಲಾಭಗಳು ಸಿಗಲಿವೆ. ಸೂರ್ಯ-ಕೇತು ಸಂಯೋಗ ವೃಷಭ ರಾಶಿಯ ಐದನೇ ಮನೆಯಲ್ಲಿರುತ್ತದೆ. ಕುಂಡಲಿ ಪ್ರಕಾರ ಐದನೇ ಮನೆ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿರುತ್ತದೆ. ವೃಷಭ ರಾಶಿಯ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುವ ಕನಸು ನನಸಾಗುವ ಸಾಧ್ಯತಗಳಿರುತ್ತವೆ. ಇದೆಲ್ಲದರ ಜೊತೆ ಧರ್ಮದ ವಿಷಯಗಳಲ್ಲಿಯೂ ಆಸಕ್ತಿ ಹೆಚ್ಚಾಗುತ್ತದೆ.
2.ಸಿಂಹ ರಾಶಿ
ಸೂರ್ಯ ಮತ್ತು ಕೇತು ಸಂಯೋಗ ಸಿಂಹ ರಾಶಿಯ ಎರಡನೇ ಮನೆಯಲ್ಲಿರುತ್ತದೆ. ಈ ಸಂಯೋಗದ ಅವಧಿಯಲ್ಲಿ ಈ ರಾಶಿಯವರು ತಮ್ಮ ಬುದ್ಧಿವಂತಿಕೆ ಹಾಗೂ ವಾಕ್ ಚಾತುರ್ಯದಿಂದ ಹಲವರಿಂದ ಪ್ರಶಂಸೆಗೆ ಒಳಗಾಗುತ್ತೀರಿ. ಕಳೆದ ಹಲವು ದಿನಗಳಿಂದ ವ್ಯಾಪಾರದಲ್ಲಿ ಉಂಟಾಗಿರುವ ಸಮಸ್ಯೆಗಳು ಸೂರ್ಯ-ಕೇತು ಸಂಯೋಗದ ಪರಿಣಾಮದಿಂದ ನಿವಾರಣೆಯಾಗಲಿವೆ. ಪಿತ್ರಾರ್ಜಿತ ಆಸ್ತಿ ವಿವಾದಗಳು ಇತ್ಯರ್ಥವಾಗಲಿದ್ದು, ಹೆಚ್ಚು ಲಾಭ ನಿಮ್ಮದಾಗಲಿದೆ. ಹಣದ ಜೊತೆಗೆ ಸುಖಕರ ಹಾಗೂ ಐಷಾರಾಮಿ ಸೌಲಭ್ಯಗಳು ಸಿಗುತ್ತವೆ.
3.ವೃಶ್ಚಿಕ ರಾಶಿ
ಸೂರ್ಯ-ಕೇತು ಯುತಿ ವೃಶ್ಚಿಕ ರಾಶಿ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ಸಂಯೋಗ ವೃಶ್ಚಿಕ ರಾಶಿಗೆ ಮಂಗಳಕರವಾಗಿರಲಿದೆ. ಸೂರ್ಯ-ಕೇತು ಯುತಿ ವೃಶ್ಚಿಕ ರಾಶಿಯ 11ನೇ ಮನೆಯಲ್ಲಿರಲಿದ್ದು, ಇದನ್ನು ಲಾಭದ ಮನೆ ಎಂದು ಕರೆಯಲಾಗುತ್ತದೆ. ವೃಶ್ಚಿಕ ರಾಶಿಯ ವ್ಯಾಪಾರಿಗಳ ಲಾಭದ ಪ್ರಮಾಣ ಏರಿಕೆಯಾಗಲಿದೆ. ಹೊಸ ವ್ಯಾಪಾರ ಆರಂಭಕ್ಕೆ ಇದು ಸಕಾಲವಾಗಿರುತ್ತದೆ. ಅರ್ಧಕ್ಕೆ ನಿಂ ಕೆಲಸಗಳು ಸಹ ಪೂರ್ಣವಾಗುತ್ತವೆ.
4.ಧನು ರಾಶಿ
ಧನು ರಾಶಿಯ 10ನೇ ಮನೆಯಲ್ಲಿ ಸೂರ್ಯ-ಕೇತು ಸಂಯೋಗ ಉಂಟಾಗುತ್ತದೆ. ಪಂಚಾಗದ ಪ್ರಕಾರ 10ನೇ ಮನೆ ಅಂದ್ರೆ ಅಭಿವೃದ್ಧಿ ಎಂದರ್ಥ. ಈ ಸಮಯದಲ್ಲಿ ಧನು ರಾಶಿಯ ಜನರ ವೃತ್ತಿ ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಹಲವು ದಿನಗಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ದಿನಗಳು ಬರಲಿವೆ. ವೃತ್ತಿ ಜೀವನದ ಜೊತೆಯಲ್ಲಿ ಸಮಾಜದಲ್ಲಿಯೂ ಗೌರವಕ್ಕೆ ಪ್ರಾಪ್ತರಾಗುತ್ತಾರೆ. ರಾಜಕೀಯದಲ್ಲಿರುವ ನಾಯಕರಿಗೂ ಒಳ್ಳೆಯ ದಿನಗಳು ಬರಲಿವೆ.
5.ಮಕರ ರಾಶಿ
ಸೂರ್ಯ ಮತ್ತು ಕೇತು ಸಂಯೋಜನೆಯಿಂದಾಗಿ ಮಕರ ರಾಶಿಯವರ ಜೀವನದಲ್ಲಿ ಶುಭ ಘಟನೆಗಳು ನಡೆಯುತ್ತವೆ. ಮಕರ ರಾಶಿಯ 9ನೇ ಮನೆಯಲ್ಲಿ ಸೂರ್ಯ ಮತ್ತು ಕೇತು ಸಂಯೋಜನೆಯಾಗುತ್ತದೆ. 9ನೇ ಮನೆಯನ್ನು ಭಾಗ್ಯ ಎಂದು ಪರಿಗಣಿಸಲಾಗುತ್ತದೆ. ವೃತ್ತಿ ಜೀವನದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ತಂದೆ ಹಾಗೂ ಕುಟುಂಬಸ್ಥರ ಜೊತೆಗಿನ ಸಂಬಂಧಗಳ್ಲಿ ಸುಧಾರಣೆ ಕಂಡು ಬರುತ್ತದೆ. ಈಗಾಗಲೇ ಒಳ್ಳೆಯ ಹುದ್ದೆಯಲ್ಲಿದ್ದರೂ ಹೊಸ ಉದ್ಯೋಗವಕಾಶಗಳು ನಿಮ್ಮನ್ನು ಹುಡುಕಿ ಬರುವ ಸಾಧ್ಯತೆಗಳಿರುತ್ತವೆ.
Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.