ಎಷ್ಟೋ ದಿನಗಳ ನಿಮ್ಮ ಬಯಕೆಯೊಂದು ಇಂದು ಈಡೇರುವುದು ಖಚಿತ

Published : Jul 07, 2018, 07:10 AM IST
ಎಷ್ಟೋ ದಿನಗಳ ನಿಮ್ಮ ಬಯಕೆಯೊಂದು ಇಂದು ಈಡೇರುವುದು ಖಚಿತ

ಸಾರಾಂಶ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಮೇಷ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.    

ಮೇಷ ರಾಶಿ : ಎಷ್ಟೋ ದಿನಗಳಿಂದ ಅಂದುಕೊಂಡ ಕಾರ್ಯಕ್ಕೆ ಇಂದು ಚಾಲನೆ, ಓರ್ವ ಸ್ತ್ರೀ ನಿಮ್ಮಲ್ಲಿ ಹೊಸ ಪ್ರೇರಣೆ ನೀಡುತ್ತಾಳೆ. ನಿಮ್ಮ ಮನೆ ಪಕ್ಕದಲ್ಲಿರುವ ವ್ಯಕ್ತಿಗಳಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯಾಪಾರಿ ಭಾವ ಮೂಡಲಿದೆ. ನಿಮ್ಮ ಮಕ್ಕಳಿಗೆ ಸಹೋದರರಿಂದ ಸಹಾಯ. 

ದೋಷಪರಿಹಾರ : ಇಂದು ಅನ್ನಪೂರ್ಣೇಶ್ವರಿಗೆ ಎರಡು ತೆಂಗಿನಕಾಯಿ ಹಾಗೂ ಹೂವನ್ನು ಸಮರ್ಪಿಸಿ.

ವೃಷಭ : ಇಂದು ನಿಮ್ಮ ಮನಸ್ಸಿಗೆ ಸ್ವಲ್ಪ ಅಶಾಂತಿ. ಇನ್ನೊಬ್ಬರ ಮಾತು ಕೇಳಬೇಕಾದ ಸ್ಥಿತಿ ಎದುರಾಗಬಹುದು. ಇನ್ನೊಬ್ಬರು ಹೇಳುವ ಮುನ್ನ ನೀವೇ ಯೋಚಿಸಿ ಆ ಕಾರ್ಯವನ್ನು ಮಾಡಿ. ಇಂದು ಮಿಲಿಟರಿ, ಅಥವಾ ಪೊಲೀಸ್ ಅಧಿಕಾರದಲ್ಲಿರುವವರಿಗೆ ಉತ್ತಮ ದಿನವಾಗಿರಲಿದೆ. ಶನಿವಾರ ಏನು ಒಳ್ಳೇದು..? ಶನಿವಾರವಾದರೂ ನಿಮ್ಮ ಪಾಲಿಗೆ ಶುಭದಿನ.   

ದೋಷ ಪರಿಹಾರ : ಶನೈಶ್ಚರ ದರ್ಶನ ಮಾಡಿ

ಮಿಥುನ : ಇಂದು ದಾಂಪತಿಗಳಲ್ಲಿ ಒಂದು ವ್ಯಾಪಾರ ಭಾವನೆ ಮೂಡುವುದು. ಸುಖ ವೃದ್ಧಿಗಾಗಿ ಮೂರು ಬಗೆಯ ವ್ಯಾಪಾರ ಮಾಡುವ ಮನಸ್ಸಾಗಲಿದೆ. ಆದರೆ ನೀವು ಮಾಡಿದ ಯೋಜನೆಯಲ್ಲಿ ಸ್ವಲ್ಪ ತೊಡಕು ಕೂಡ ಇದೆ. ಯಾಕೆಂದರೆ ಸಪ್ತಮದ ಶನಿ. ಹಾಗಾಗಿ ಶಿವ ದೇವಸ್ಥಾನಕ್ಕೆ ಗೋಗಿ ಎಳ್ಳು ದಾನ ಮಾಡಿಬಂದಲ್ಲಿ ಕಾರ್ಯ ನಿರ್ವಿಘ್ನವಾಗಿ ಸಾಗುತ್ತದೆ. 

ದೋಷ ಪರಿಹಾರ : ಶಿವ ಅಥವಾ ಶನೈಶ್ಚರ ಆರಾಧನೆ ಮಾಡಿ

ಕಟಕ : ಇಂದು ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಹೊರೆ ಉದ್ಯೋಗದಲ್ಲಿ ಖಂಡಿತವಾಗಿ ಸ್ತ್ರೀಯರು ಸಹಾಯ ಮಾಡುತ್ತಾರೆ. ಅಥವಾ ಅವರ ಮಾರ್ಗದರ್ಶನದಲ್ಲಿ ನಿಮ್ಮ ಕೆಲಸ ನೆರವೇರುತ್ತದೆ. ಮನೆಯಲ್ಲಿರುವ ಸ್ತ್ರೀಯರಿಗೆ ಹೆಚ್ಚಿನ ಕೆಲಸ. ಕೆಲವರಿಗೆ ದೇವಸ್ಥಾನಗಳ ಭೇಟಿ. ದೇವ ಕಾರ್ಯ.
  
ದೋಷ ಪರಿಹಾರ : 21 ಬಾರಿ ಗಾಯತ್ರೀ ಮಂತ್ರವನ್ನು ಪಠಿಸಿ ಅಂದರೆ ಸವಿತೃ ಮಂತ್ರ ಪಠಿಸಿ.   

ಸಿಂಹ : ಇಂದು ನಿಮ್ಮ ರಾಶಿಯವರಿಗೆ ಸ್ವಲ್ಪ ಕಾರ್ಯ ಹೆಚ್ಚಳ, ಮನಸ್ಸು ಸ್ವಲ್ಪ ಚಂಚಲವಾಗಿರುತ್ತದೆ. ನೀವಂದುಕೊಂಡದ್ದು ನೆರವೇರುವುದು ಸ್ವಲ್ಪ ಕಷ್ಟ. ಆರೋಗ್ಯದಿಂದಾಗಿ ಮನೆ ಬದಲಾವಣೆ ಮಾಡಬೇಕಾದ ಅನಿವಾರ್ಯ ಎದುರಿಸಬೇಕಾಗುತ್ತದೆ. 

ದೋಷ ಪರಿಹಾರ : ಸುಬ್ರಹ್ಮಣ್ಯ ಹಾಗೂ ಶನೈಶ್ಚರ ಪ್ರಾರ್ಥನೆ ಮಾಡಿ

ಕನ್ಯಾ : ರಾಶಿಯ ಬಂಧುಗಳೇ ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ ಸಿಗುತ್ತದೆ. ಆದರೆ ಸ್ವಲ್ಪ ಕುಟುಂಬದೊಳಗೆ ವೈಮಸ್ಸೂ ಇದೆ. ಓರ್ವ ಗುರು ಸಮಾನರು ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಕೆಲ ಮನಸ್ಸುಗಳು ರಾಡಿಯಾಗೇ ಉಳಿಯಲಿವೆ. 
  
ದೋಷ ಪರಿಹಾರ : ಶ್ರೀಧರ ಸ್ವಾಮಿಗಳ ದರ್ಶನ ಮಾಡಿ 

ತುಲಾ :  ಆತ್ಮೀಯ ಬಂಧುಗಳೇ , ನಿಮ್ಮ ರಾಶಿಯ ಹಲವರಿಗೆ ಆರೋಗ್ಯ ಬಾಧೆ ಕಾಡಲಿದೆ. ನರ ದೌರ್ಬಲ್ಯ, ಸೊಂಟ ಸಮಸ್ಯೆ ಯಂಥ ನೋವು ಪ್ರಬಲವಾಗಿ ಕಾಡಲಿದೆ. ನಿಮ್ಮ ದೈನಂದಿನ ಕಾರ್ಯದಲ್ಲಿ ತುಂಬ ಏರುಪೇರಾಗುತ್ತದೆ. ಚಿಂತೆ ಮಾಡಿ ನಿಮ್ಮ ಮನಸ್ಸನ್ನು ನೀವೇ ಹಾಳುಗೆಡವಬೇಡಿ. ಗುರು ನಿಮ್ಮ ಜೊತೆಗಿದ್ದಾನೆ. ಸಮಾಧಾನವಿರಲಿ

ದೋಷ ಪರಿಹಾರ : ಕೈಲಾದಷ್ಟು ಅವರೆ ಕಾಳು ಹಾಗೂ ಕಡಲೆ ಬೇಳೆ ದಾನ ಮಾಡಿ. 

ವೃಶ್ಚಿಕ : ಆತ್ಮೀಯರೇ ಇಂದು ಬೆಲ್ಲದನ್ನವನ್ನು ಮಾಡಿ ಸುಬ್ರಹ್ಮಣ್ಯ ಸ್ವಾಮಿಗೆ ನೈವೇದ್ಯ ಮಾಡಿ ನೀವು ಸ್ವೀಕರಿಸುವುದರಿಂದ ಇಂದು ನಿಮ್ಮ ದಿನ ಅದ್ಭುತವಾಗಿರುತ್ತದೆ. ಸ್ವಲ್ಪ ಹಣವನ್ನು ಕಳೆದುಕೊಳ್ಳುವುದಲ್ಲದೆ ಮನೆಯವರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಮೇಲೆ ಹೇಳಿದ ಪರಿಹಾರ ಮಾಡಿ ಅದು ನಿಮಗೆ ಸಮಾಧಾನ ತರುತ್ತದೆ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ  

ಧನಸ್ಸು : ಇಂದು ನಿಮ್ಮ ಮನೆಗೆ ನಿಮ್ಮ ಭ್ರಾತೃ ವರ್ಗದವರು ಬರುತ್ತಾರೆ. ಕುಟುಂಬದವರೊಂದಿಗೆ ವಿಹಾರಕ್ಕೆ ಹೋಗುವ ಸಾಧ್ಯತೆ. ಮಾನಸಿಕ ನೆಮ್ಮದಿ ಹಾಗೂ ಮಿತ್ರರ ಭೇಟಿ ಸಾಧ್ಯತೆ. 

ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ 5 ನಮಸ್ಕಾರ ಮಾಡಿ

ಮಕರ :  ಪ್ರಿಯರೇ, ನಿಮ್ಮ  ಮನೋಬಲವು ನಿಮ್ಮನ್ನು ಹೊಸ ಕಾರ್ಯಕ್ಕೆ ಕೈ ಹಾಕುವಂತೆ ಮಾಡುತ್ತದೆ. ತೊಂದರೆ ಇಲ್ಲ ನಿಮ್ಮ ಸಹೋದರರ ಸಹಾಯ ದೊರೆಯಲಿದೆ. ಆದರೆ ನಿಮ್ಮ ಜಾತಕದಲ್ಲಿ ಯಾವ ದಶೆ ಭುಕ್ತಿ ನಡೆಯುತ್ತಿದೆ ನೋಡಿಕೊಂಡು ಅಥವಾ ತಿಳಿದ ಹತ್ತಿರದ  ವಿದ್ವಾಂರಿಗೆ ತೋರಿಸಿ ಹೊಸ ಕಾರ್ಯಕ್ಕೆ ಕೈ ಹಾಕಿ.
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ 

ಕುಂಭ :   ಹಲವು ದಿನಗಳಿಂದ ನಿಮ್ಮಲ್ಲಿ ಉದ್ಯೋಗ ಬದಲಾವಣೆಯ ಕುರಿತಾಗಿ ಯೋಚನೆ ಬಂದಿದೆ. ಆದರೆ ಇದು ಸೂಕ್ತ ಕಾಲವಲ್ಲ. ಸ್ವಲ್ಪ ಸಮಾಧಾನವಿರಲಿ. ಸ್ವಲ್ಪ ದಿನದಲ್ಲೇ   ಅನುಕೂಲವಾಗಲಿದೆ. ಸ್ವಲ್ಪ ತಾಳ್ಮೆ ಇರಲಿ. ಉಳಿದಂತೆ ಎಲ್ಲವೂ ಸಹಜ ಸ್ಥಿತಿಯಲ್ಲಿ ನಡೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯದ ಯೋಜನೆ ಮಾಡುವ ಸಾಧ್ಯತೆ ಇದೆ.  

ದೋಷ ಪರಿಹಾರ : ನಿಮ್ಮ ತಾಯಿಗೆ ನಮಸ್ಕಾರ ಮಾಡುವುದರಿಂದ ಅನುಕೂಲವಾಗಲಿದೆ. 
  
ಮೀನ : ನಿಮ್ಮ ರಾಶಿಯ ಕೆಲ ಸ್ತ್ರೀಯರಿಗೆ ಇಂದು ಧನ ಲಾಭ, ಸ್ತ್ರೀಯರಿಂದಲೂ ಧನ ಲಾಭ, ತಾಯಿಯಿಂದ ಸಹಾಯವಾಗಲಿದೆ. ನೀವು ಮಾಡಬೇಕಾದ ಮುಖ್ಯ ಕಾರ್ಯವೆಂದರೆ 5 ಹಳದಿ ಹೂವನ್ನು ದತ್ತಾತ್ರೇಯ ದೇವಸ್ಥಾನಕ್ಕೆ ಅರ್ಪಿಸಿ. 
  
ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಂತ್ರ ಪಠಣ ಮಾಡಿ

ಗೀತಾಸುತ.

PREV
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction: 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!