
ರಾಶಿಗೆ ಸಿಗಲಿದೆ ಒಂದು ಶುಭ ಸಮಾಚಾರ
ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಕನ್ಯಾರಾಶಿಯಲ್ಲಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.
ಮೇಷ ರಾಶಿ : ಇಂದು ಸುಖ ಭೋಜನ, ದಾಂಪತ್ಯದಲ್ಲಿ ಹೊಂದಾಣಿಕೆ, ಸಾಮರಸ್ಯ, ರಾಜಕಾರಣಿಗಳಿಂದ ಕ್ಷೇತ್ರ ಸಂಬಂಧಿ ಕೆಲಸಗಳ ಅನುಕೂಲ, ಶುಭ ದಿನವಾಗಿರಲಿದೆ. ಮನಸ್ಸಿನಲ್ಲಿ ಉಲ್ಲಾಸ ಸಂಗಾತಿಯಿಂದ ಸಂತಸದ ಮಾತುಗಳು. ದಶಮ ಅಂಗಾರಕ ದಿಕಗ್ಬಲದಿಂದ ಹೆಚ್ಚು ಅನುಕೂಲ ಮಾಡಲಿದ್ದಾನೆ. ಉತ್ತಮದಿನವಾಗಿದೆ.
ದೋಷಪರಿಹಾರ : ಅರ್ಧ ಕೆಜಿ ತೊಗರಿ ಬೇಳೆಯನ್ನು ದಾನ ಮಾಡಿ.
ವೃಷಭ : ಆತ್ಮೀಯರೇ ಇಂದು ನಿಮ್ಮ ಸಹೋದರಿ ನಿಮ್ಮ ಹಣ ವ್ಯಯಕ್ಕೆ ಕಾರಣವಾಗಬಹುದು, ನಿಮ್ಮ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯೂ ಆಗಬಹುದು. ಮಂಡಿ ಹಾಗು ತೊಡೆ ಭಾಗದಲ್ಲಿ ನೋವಾಗುವ ಸಾಧ್ಯತೆ ಇರುತ್ತದೆ. ವೈದ್ಯರನ್ನು ಭೇಟಿ ಮಾಡಿ.
ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ನಿಮ್ಮ ಆರೋಗ್ಯ ಸುಧಾರಣೆ ಮಾಡುತ್ತದೆ.
ಮಿಥುನ : ಆತ್ಮೀಯರೇ ಇಂದು ನಿಮ್ಮ ಹಣ ದ್ವಿಗುಣವಾಗಿ ಬರಲಿದೆ. ನೀರಿನ ವ್ಯಾಪಾರಿಗಳಿಗೆ ವಿಶೇಷ ಲಾಭ, ನಿಮ್ಮ ಮಕ್ಕಳು ನಿಮಗೆ ಸಹಾಯಕವಾಗುತ್ತಾರೆ. ಮುಖದಲ್ಲಿ ಮಚ್ಚೆ ಅಥವಾ ಗಾಯ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಸ್ವಲ್ಪ ಮಾತಿನ ಘರ್ಷಣೆಯೂ ಆಗಬಹುದು ಎಚ್ಚರವಾಗಿರಿ.
ದೋಷ ಪರಿಹಾರ : ಮಹಾನಾರಾಯಣೋಪನಿಷತ್ ಮಂತ್ರವನ್ನು ಪಾರಾಯಣ ಮಾಡಿಸಿ.
ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಸ್ತ್ರೀಯರ ಸಹಕಾರ, ಪ್ರಶಂಸೆ ಹಾಗೂ ಗೌರವ ಲಭ್ಯವಾಗಲಿದೆ. ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ವಿರಸ ಭಿನ್ನಾಭಿಪ್ರಾಯಗಳು ಮೂಡಬಹುದು. ಮಾನಸಿಕವಾಗಿ ನೀವು ಎದೆಗುಂದುವ ಸಾಧ್ಯತೆಯೂ ಇದೆ. ದುರ್ಗಾ ದೇವಿ ದರ್ಶನ ಮಾಡಿ
ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ ಹಾಲನ್ನು ಸಮರ್ಪಣೆ ಮಾಡಿ ಅಥವ ಬಿಳಿ ವಸ್ತ್ರ ದಾನ ಮಾಡಿ
ಸಿಂಹ : ಆತ್ಮೀಯರೇ, ವ್ಯಯಾಧಿಪತಿಯಾದ ಚಂದ್ರನಿಂದ ನಿಮ್ಮ ಭಾಗ್ಯ ನಷ್ಟವಾಗುವ ದಿನ, ಆದರೆ ಚಂದ್ರನಿಗೆ ಗುರು ದೃಷ್ಟಿಯೂ ಇದೆ. ಅದೇ ಚಂದ್ರನಿಗೆ ಕುಜ ದೃಷ್ಟಿಯೂ ಇದೆ. ಹೋದ ಫಲ ಹಾಗೆಯೇ ಮರಳಿ ಬರುತ್ತದೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಶುಭದಿನವಾಗಿರಲಿದೆ.
ದೋಷ ಪರಿಹಾರ : ಶಿವ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನಾಗಮನ, ನಿಮ್ಮ ಬಂಧುಗಳ ಆಗಮನವೂ ಇದೆ, ಪ್ರಯಾಣದಲ್ಲಿ ಓರ್ವ ವೃದ್ಧರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಸಂಭವಿಸುತ್ತದೆ. ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ.
ದೋಷ ಪರಿಹಾರ : 3 ಬಾರಿ ವಿಷ್ಣು ಸಹಸ್ರನಾಮ ಪಠಿಸಿ
ತುಲಾ : ಆತ್ಮೀಯರೇ ನಿಮ್ಮ ದೇಹದಲ್ಲಿ ಚೇತರಿಕೆ, ಆರೋಗ್ಯ ವೃದ್ಧಿ ಕೂಡ ಇದೆ. ಆದರೆ ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಜೊತೆಗೆ ನಿಮ್ಮ ಮನೆ ಜಾಗದಲ್ಲಿ ಅಥವಾ ನಿಮ್ಮ ವಾಹನದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಗಣಪತಿ ದರ್ಶನ ಮಾಡಿ
ದೋಷ ಪರಿಹಾರ : ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ
ವೃಶ್ಚಿಕ : ಆತ್ಮೀಯರೇ, ನಿಮ್ಮ ದಿನ ಆನಂದವಾಗಿರುತ್ತದೆ. ಮನೆ ಕೆಲಸಗಳಲ್ಲಿ ನಿರಾಸಕ್ತಿ ಇದ್ದು ನಿಮ್ಮ ಸುಖ ಸಂತೋಷಕ್ಕೆ ಹೆಚ್ಚು ಗಮನ ಕೊಟ್ಟು ವಿಹಾರ ಹಾಗೂ ಮನೋರಂಜನೆಗಳಲ್ಲಿ ಭಾಗಿಯಾಗುತ್ತೀರಿ.
ದೋಷ ಪರಿಹಾರ : ಸುಬ್ರಹ್ಮಣ್ಯನಿಗೆ ಜೇನು ಸಮರ್ಪಣೆ ಮಾಡಿ.
ಧನಸ್ಸು : ಆತ್ಮೀಯರೇ ನಿಮ್ಮ ಮಗಳು ನಿಮ್ಮ ಸಹಕಾರಕ್ಕೆ ಬರುತ್ತಾಳೆ, ನಿಮ್ಮ ಆದಾಯ ವೃದ್ಧಿಸುತ್ತದೆ, ನಿಮ್ಮ ಅಕ್ಕಪಕ್ಕದವರು ನಿಮ್ಮ ಅನುಕೂಲಕ್ಕೆ ಬರುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡುವ ಸಮಯ ಒದಗಲಿದೆ.
ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ ಸಾಧ್ಯವಾಗದೇ ಇದ್ದರೆ ಸಾಯಿಬಾಬಾ ದರ್ಶನ ಮಾಡಿ.
ಮಕರ : ಆತ್ಮೀಯರೇ ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ, ನಿಮ್ಮ ಮನೆ ಜಾಗದಲ್ಲಿ ನೀರು ಲಭ್ಯವಾಗುತ್ತದೆ, ಜೊತೆಗೆ ಉದ್ಯೋಗದಲ್ಲಿ ಅಭಿವೃದ್ಧಿ ಲಾಭವೂ ಇರಲಿದೆ. ಉತ್ತಮದಿನವಾಗಿರಲಿದೆ.
ದೋಷ ಪರಿಹಾರ : ಶನಿ ದೇವರಿಗೆ ಎಳ್ಳು ದಾನ ಮಾಡಿ
ಕುಂಭ : ಆತ್ಮೀಯರೇ ನಿಮ್ಮ ಆದಾಯ ವೃದ್ಧಿಯಾಗಲಿದೆ. ನಿಮ್ಮ ಸಹೋದರಿ ಸಮಾನರು ನಿಮಗೆ ಅನುಕೂಲ ಮಾಡುವುದಕ್ಕಿಂತ ಕಿರಿಕಿರಿ ಮಾಡುತ್ತಾರೆ. ಮನೆಯಲ್ಲಿ ಉತ್ತಮ ಸಹಕಾರ, ಉದ್ಯೋಗದಲ್ಲೂ ಭರವಸೆ ಮೂಡುವ ದಿನಗಳು. ಗೆಳೆಯರಿಂದ ಸಹಕಾರ ದೊರೆಯುವ ದಿನ.
ದೋಷ ಪರಿಹಾರ : ಶಿವನಿಗೆ ಜಲಾಭಿಷೇಕ ಮಾಡಿಸಿ.
ಮೀನ : ಮಿತ್ರರೇ ಇಂದು ನಿಮ್ಮ ಪಾಲಿದೆ ಧನಾಗಮನ, ಕುಟುಂಬ ಸೌಖ್ಯ, ತಾಯಿ ಕಡೆಯಿಂದ ಅನುಕೂಲ, ಮಕ್ಕಳಿಂದಲೂ ಧನ ಲಾಭ, ಉತ್ತಮ ದಿನವಾಗಿರಲಿದೆ. ನಿಮ್ಮ ವ್ಯಾಪಾರದಲ್ಲಿ ಮಾತ್ರ ಸ್ತ್ರೀಯರಿಂದ ತೊಂದರೆ ಹಾಗೂ ನಷ್ಟ ಸಂಭವ. ಎಚ್ಚರವಾಗಿರಬೇಕು.
ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿಸಿ
ಗೀತಾಸುತ.