ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ

Published : Nov 21, 2018, 07:01 AM IST
ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ

ಸಾರಾಂಶ

ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ

21-11-18 - ಬುಧವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಶುಕ್ಲ ಪಕ್ಷ
ತ್ರಯೋದಶಿ
ಅಶ್ವಿನಿ

ರಾಹುಕಾಲ : 12.05 ರಿಂದ 01.31
ಯಮಗಂಡ ಕಾಲ : 07.48 ರಿಂದ 09.14
ಗುಳಿಕ ಕಾಲ : 10.40 ರಿಂದ 12.05


ಈ ರಾಶಿಗೆ ಧನಮೂಲ ಸಮೃದ್ಧಿಯಾಗಲಿದೆ: ಶುಭಕಾಲ


ಮೇಷ ರಾಶಿ : ಇಂದು ನಿಮ್ಮ ಸಹೋದರಿ ಅಥವಾ ಸಹೋದರಿ ಭಾವದವರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ದಿನದ ಮುಖ್ಯ ಕಾರ್ಯದಲ್ಲಿ ಅವರ ಸಹಕಾರ ಇರಲಿದೆ. ಕುಜನರು ನಿಮ್ಮ ಧನ ವ್ಯಯಕ್ಕೆ ಕಾರಣವಾಗಬಹುದು ಎಚ್ಚರವಾಗಿರಿ. 
  
ದೋಷಪರಿಹಾರ : ಕೆಂಪು ವಸ್ತ್ರ ದಾನ ಮಾಡಿ, ತೊಗರಿ ಬೇಳೆ ದಾನ ಮಾಡಿ

ವೃಷಭ : ಆತ್ಮೀಯರೇ  ಇಂದು ನಿಮ್ಮ ಧನಮೂಲ ಸಮೃದ್ಧಿಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುತ್ತದೆ, ನಿಮ್ಮ ಮಕ್ಕಳು ನಿಮ್ಮ ಮನಸ್ಸಿನ ಭಾವನೆಗಳನ್ನ ಹತಾಶೆ ಮಾಡುತ್ತಾರೆ. ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ ಇದೆ. ಶ್ರೀಸೂಕ್ತ ಪಾರಾಯಣ ಮಾಡಿಸಿ

ದೋಷ ಪರಿಹಾರ : ದುರ್ಗಾ ದೇವಸ್ಥಾನದಲ್ಲಿ ಕ್ಷೀರಾಭಿಷೇಕ ಮಾಡಿಸಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ಮನಸ್ಸು ಸ್ವಲ್ಪ ಚಂಚಲವಾಗಲಿದೆ. ನಿಮ್ಮ ಸಂಗಾತಿಯಲ್ಲಿ ಹೆಚ್ಚಿನ ಆಸಕ್ತಿ, ನಿಮ್ಮ ಕಾರ್ಯ ಸ್ಥಳದಲ್ಲಿ ಅಸಹಕಾರ ಹಾಗೂ ಅನಾನುಕೂಲ ಉಂಟಾಗಲಿದೆ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವೂ ಇದೆ. ನಿಮ್ಮ ಮಕ್ಕಳು ನಿಮಗೆ ಅನುಕೂಲವಾಗುತ್ತಾರೆ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ಇಂದು ನಿಮ್ಮ ದೇಹಾರೋಗ್ಯ ವ್ಯತ್ಯಯವಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ತಂದೆಯವರು ನಿಮ್ಮ ಆರೋಗ್ಯ ಕಾಳಜಿವಹಿಸಿ ಸಹಾಯ ಹಸ್ತ ಚಾಚುತ್ತಾರೆ. ನಿಮ್ಮ ಬಂಧುಗಳಲ್ಲಿ ಉತ್ತಮ ಬಾಂಧವ್ಯ ಮೂಡಿ ಸಹಾಯ ದೊರೆಯಲಿದೆ. ನಿಮ್ಮ ಸಹೋದರಿಯರು ಕಿರಿಕಿರಿಯನ್ನೂ ಮಾಡಲಿದ್ದಾರೆ. ಮಿಶ್ರಫಲ ಹೊಂದಲಿದ್ದೀರಿ.
  
ದೋಷ ಪರಿಹಾರ : ದುರ್ಗಾಸಪ್ತಶತಿ ಪಾರಾಯಣ ಮಾಡಿಸಿ

ಸಿಂಹ : ಇಂದು ನಿಮ್ಮ ಆತ್ಮಸ್ಥೈರ್ಯ ಕುಸಿಯಲಿದೆ. ನಿಮ್ಮ ಆತ್ಮೀಯ ಸ್ನೇಹಿತೆ ನಿಮ್ಮ ಧನವ್ಯಯಕ್ಕೆ ಕಾರಣರಾಗುತ್ತಾರೆ. ನಿಮ್ಮ ಸಹೋದರರು ನಿಮ್ಮ ಕಷ್ಟಕ್ಕೆ ನೆರವಾಗುತ್ತಾರೆ. ನಿಮ್ಮ ಆರೋಗ್ಯ ಕ್ಷೀಣವಾಗುವ ಮುನ್ನ ಭಾಸ್ಕರನ ಪ್ರಾರ್ಥನೆ ಮಾಡಿ.

ದೋಷ ಪರಿಹಾರ : ಶಿವನಿಗೆ ಗೋಧಿ ದಾನ ಮಾಡಿ

ಕನ್ಯಾ : ನಿಮ್ಮ ಸರ್ವ ಕಾರ್ಯಗಳೂ ಈಡೇರಿಲಿವೆ, ಯಾವುದಕ್ಕೂ ಹೆಚ್ಚು ಚಿಂತಿಸುವ ಪ್ರಮೇಯವಿಲ್ಲ. ನಿಮಗೆ ಬರಬೇಕಿದ್ದ ಹಣ ಮರಳಿ ಬರಲಿದೆ. ನಿಮ್ಮ ಮಕ್ಕಳಿಂದ  ಸಿಹಿ ಸುದ್ದಿ ಬರಲಿದೆ. ಸಮಾಧಾನದ ದಿನ.
  
ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿ ಮಾಲೆ ಸಮರ್ಪಣೆ ಮಾಡಿ

ತುಲಾ :  ನಿಮ್ಮ ದೇಹಾರೋಗ್ಯ ವೃದ್ಧಿಯಾಗಲಿದೆ, ಸದ್ಗುರುಗಳ ದರ್ಶನವಾಗಲಿದೆ, ಆದರೆ ನೀವು ಸಂಚಾರ ಮಾಡುವಾಗ ಮಾತ್ರ ಎಚ್ಚರದಿಂದ ಇರಬೇಕಾಗುತ್ತದೆ. ವಾಹನ ಅಥವಾ ನಿಮ್ಮ ನಡಿಗೆಯಿಂದ ಎಡವಿ ಬೀಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.

ದೋಷ ಪರಿಹಾರ : ಸುಮಂಗಲಿಯರಿಗೆ ವಸ್ತ್ರ ದಾನ ಮಾಡಿ

ವೃಶ್ಚಿಕ : ಇಂದು ನಿಮ್ಮ ಮಾತಿನಿಂದ ಕಾರ್ಯದಲ್ಲಿ, ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಆದಷ್ಟು ಕಡಿಮೆ ಮಾತಾಡಿದರೆ ಒಳಿತು. ನಿಮ್ಮ ಮನೆಯಲ್ಲಿ ಕಳ್ಳಕಾಕರ ಭಯ ಕಾಣಬಹುದು, ಮನೆ ಬೀಗ ಹಾಕುವಾಗ ಜಾಗ್ರತೆ ವಹಿಸಿ. 

ದೋಷ ಪರಿಹಾರ : ನಾಗ ದೇವರ ಪ್ರಾರ್ಥನೆ ಮಾಡಿ

ಧನಸ್ಸು : ಇಂದು ನಿಮ್ಮ ಶರೀರದಲ್ಲಿ ಒಂದುವಿಧವಾದ ಪ್ರಯಾಸ, ಅಶಾಂತಿ ಕುಟುಂಬದಲ್ಲಿ ಅಸಹಕಾರ, ನೆಮ್ಮದಿ ಭಂಗ ಇತ್ಯಾದ ಬೇಸರ ಸಂಗತಿಗಳೇ ಇವೆ. ಆದರೆ ಜೊತೆಗೆ ಧನ ಲಾಭವೂ ಇದೆ. ಮಿಶ್ರಫಲ

ದೋಷ ಪರಿಹಾರ : ಗಾಣಗಾಪುರ ದತ್ತನ ದರ್ಶನ ಮಾಡಿ

ಮಕರ :  ಇಂದು ನಿಮ್ಮ ಮನೆಯಲ್ಲಿ ಸಣ್ಣಮಟ್ಟದ ಕಲಹ ಸಂಭವಿಸಬಹುದು, ನಿಮ್ಮ ಆಲೋಚನೆಗಳಿಗೆ ವಿರುದ್ಧ ಅಭಿಪ್ರಾಯಬರಬಹುದು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಆಗಿ ಶೀತಬಾಧೆ ಕಾಡಲಿದೆ. ಆದಷ್ಟು ಆಹಾರದಲ್ಲಿ ಜಾಗ್ರತೆ ಇರಲಿ.
  
ದೋಷ ಪರಿಹಾರ : ನಿಮ್ಮ ಕುಲದೇವತಾ ಆರಾಧನೆ ಮಾಡಿ

ಕುಂಭ : ಇಂದು ನಿಮ್ಮ ಮನಸ್ಸಿಗೆ ಉಲ್ಲಾಸದ ದಿನ, ನಿಮ್ಮ ಬಂಧುಗಳು ಹಾಗೂ ನಿಮ್ಮ ಮಕ್ಕಳು ನಿಮ್ಮ ಸಂತಸವನ್ನು ಇಮ್ಮಡಿಮಾಡಲಿದ್ದಾರೆ. ಆದರೆ ನೀವು ತೆಗೆದುಕೊಂಡ ನಿರ್ಧಾರಗಳು ಬದಲಾಗಲಿವೆ. ಅನುಕೂಲವೂ ಇದೆ.

ದೋಷ ಪರಿಹಾರ :  ಶಿವನಿಗೆ ಭಸ್ಮಾಭಿಷೇಕ ಮಾಡಿಸಿ
  
ಮೀನ : ಇಂದು ನಿಮ್ಮ ಸುಖ ಇಮ್ಮಡಿಯಾಗಲಿದೆ. ತಾಯಿಯ ಸಹಕಾರ ಹೆಚ್ಚಾಗಿ ಲಭ್ಯವಾಗಲಿದೆ. ಬಂಧುಗಳ ಸಹಾಯದಿಂದ ನಿಮ್ಮ ಕಾರ್ಯ ಸುಲಭವಾಗಲಿದೆ. ಉತ್ತಮ ದಿನ. ಆದರೆ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವೂ ಇದೆ ಎಚ್ಚರವಾಗಿರಿ.
  
ದೋಷ ಪರಿಹಾರ : ದತ್ತಾತ್ರೇಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.


ವಾಞ್ಮಯೀ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ