ಒಂದು ರಾಶಿಗೆ ಲಾಭ - ಮತ್ತೊಂದು ರಾಶಿಗೆ ಪ್ರಗತಿ

Published : Dec 20, 2018, 06:55 AM IST
ಒಂದು ರಾಶಿಗೆ  ಲಾಭ - ಮತ್ತೊಂದು ರಾಶಿಗೆ ಪ್ರಗತಿ

ಸಾರಾಂಶ

ಒಂದು ರಾಶಿಗೆ  ಲಾಭ - ಮತ್ತೊಂದು ರಾಶಿಗೆ ಪ್ರಗತಿ

ಒಂದು ರಾಶಿಗೆ  ಲಾಭ - ಮತ್ತೊಂದು ರಾಶಿಗೆ ಪ್ರಗತಿ

ಮೇಷ ರಾಶಿ : ನಿಮ್ಮ ಮನಸ್ಸಿಗೆ ಇಂದು ಸ್ವಲ್ಪ ಘಾಸಿಯಾಗಲಿದೆ. ಬೆಂಕಿ ಅವಘಡ ಸಂಭವ, ನಿಮ್ಮ ಕೋಪ ನಿಮ್ಮ ಒಳ್ಳೆತನವನ್ನು ತಿಂದುಹಾಕುವ ಸಮಯ ಎದುರಾಗಲಿದೆ, ಜಾಗ್ರತೆ ಇರಲಿ, ಮಾತು ಮಿತವಾಗಿರಲಿ. 

ದೋಷಪರಿಹಾರ : ಗಣಪತಿಗೆ ಗರಿಕೆ ಸಮರ್ಪಿಸಿ

ವೃಷಭ : ಇಂದು ನಿಮ್ಮ ಮನಸ್ಸಿಗೆ ಅಸಮಾಧಾನದ ದಿನ, ರಾಜಕಾರಣಿಗಳಿಂದ ಅಥವಾ ಸರ್ಕಾರಿ ಕೆಲಸಗಳಲ್ಲಿ ಅಸಹಕಾರ, ಸುಖ ಹಾನಿಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಕಾಲಿಗೆ ಸ್ವಲ್ಪ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.   

ದೋಷ ಪರಿಹಾರ : ನವಗ್ರಹ ದರ್ಶನ ಮಾಡಿ

ಮಿಥುನ : ದಾಂಪತ್ಯದಲ್ಲಿ ವಿರಸ, ಹೊಂದಾಣಿಕೆ ಇರುವುದಿಲ್ಲ,  ಸ್ತ್ರೀಯರಿಂದ ಹಣ ನಷ್ಟ ನಷ್ಟವಾಗುವ ಸಂಭವ ಇದೆ. ಸಣ್ಣಪುಟ್ಟ ವಿಷಯಗಳಿಗೆ ಕೋಪ ಸಂಭವಿಸುತ್ತದೆ. ವ್ಯಾಪಾರದಲ್ಲಿ ಅಶಾಂತತೆ. 

ದೋಷ ಪರಿಹಾರ : ಶಿವೋಪಾಸನೆ ಮಾಡಿ

ಕಟಕ : ಇಂದು ಜಲ ವ್ಯಾಪಾರಿಗಳಿಗೆ ಲಾಭದ ದಿನ, ಅಷ್ಟೇ ಅಲ್ಲ ರಸ ವ್ಯಾಪಾರಿಗಳಿಗೆ ಲಾಭದ ದಿನ, ಸ್ವಲ್ಪ ಧನ ನಷ್ಟವೂ ಇದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ಸಾಮರಸ್ಯ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಜಗಳಕ್ಕೆ ಆಸ್ಪದ ಕೊಡಬೇಡಿ.
  
ದೋಷ ಪರಿಹಾರ :  ಗಣಪತಿ ಆರಾಧನೆ ಮಾಡಿ

ಸಿಂಹ : ನಿಮ್ಮ ರಾಶಿಯ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಲಿದೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಬುದ್ಧಿಯಲ್ಲಿ ಮಂಕು, ಆತ್ಮವಿಶ್ವಾಸ ಹಾಳಾಗಲಿದೆ, ಉತ್ತಮರ ಸಹವಾಸದಿಂದ ದೂರಾಗುತ್ತೀರಿ. 

ದೋಷ ಪರಿಹಾರ : ಶಿವನಿಗೆ ಅರ್ಚನೆ ಮಾಡಿಸಿ

ಕನ್ಯಾ :  ಸ್ತ್ರೀಯರಿಗೆ ಇಂದು ಉತ್ತಮ ದಿನ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿದೆ. ಸ್ವಲ್ಪ ಹಣ ನಷ್ಟವಾಗಲಿದೆ.ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಉಲ್ಬಣವಾಗಲಿದೆ. ಗಂಧರ್ವರ ಆರಾಧನೆಯಿಂದ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. 
  
ದೋಷ ಪರಿಹಾರ : ಗಂಧರ್ವ ಯಂತ್ರ ಮಾಡಿಸಿಕೊಳ್ಳಿ. 

ತುಲಾ :  ಇಂದು ಶತ್ರುಗಳಿಂದ ಲಾಭವಾಗುವ ಸಾಧ್ಯತೆ ಇದೆ. ಅಂದ್ರೆ ಅವರು ನಿಮ್ಮ ಮೇಲೆ ಮಾಡುವ ಯಾವುದೇ ದುಷ್ಟ ಯೋಜನೆ ನಿಮ್ಮ ಪಾಲಿಗೆ ವರವಾಗಲಿದೆ. ನಿಮ್ಮ ಅಭಿಪ್ರಾಯಗಳಿಗೆ ಮಾನ್ಯತೆ ದೊರೆಯಲಿದೆ.

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಸಾಹಸಕಾರ್ಯಗಳಲ್ಲಿ ವಿಘ್ನ, ಬಾಯಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುತ್ತದೆ. ಹುಣ್ಣು ಈ ರೀತಿಯ ಸಮಸ್ಯೆಗಳು ಬಾಧಿಸಬಹುದು. ಸ್ತ್ರೀಯರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಾಧ್ಯತೆಯೂ ಇದೆ.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಇಂದು ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ. ಅದಕ್ಕೆ ಆಸ್ಪದ ಕೊಡಬಾರದು ಎಂದರೆ ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ. ಮನೆಯಲ್ಲೂ ಬಾಧೆ. 

ದೋಷ ಪರಿಹಾರ : ದತ್ತಾತ್ರೇಯ ಉಪಾಸನೆ ಮಾಡಿ.

ಮಕರ :  ಸುಖ ಅಭಿವೃದ್ಧಿ, ವ್ಯಾಪಾರಿಗಳಿಗೆ ಉತ್ತಮ ದಿನ, ಗುರು ನಿಮಗೆ ಅನುಕೂಲಕರವಾಗಿರುವುದರಿಂದ ಉದ್ಯೋಗದಲ್ಲಿ ಶೇಯಸ್ಸು ಬಡ್ತಿ ಹೊಂದುವ ಸಾಧ್ಯತೆ ಇದೆ. ಸ್ವಲ್ಪ ಧನ ನಷ್ಟ ಸಂಭವ.
  
ದೋಷ ಪರಿಹಾರ : ತಿಲ ದಾನ ಮಾಡಿ

ಕುಂಭ : ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ಆದರೆ ಆತಂಕವೇನೂ ಇಲ್ಲ. ಹಿರಿಯರಿಂದ ಸಹಕಾರ, ಮಾತಿನಿಂದ ತೊಡಕು, ವಿದ್ಯೆಯಲ್ಲಿ ಭಂಗ, ನಿಮ್ಮ ಪ್ರರ್ಥನೆ ಸಾಕಾರವಾಗುವುದು ಕಷ್ಟ.   

ದೋಷ ಪರಿಹಾರ : ಅಂಬಾ ಭವಾನಿ ದರ್ಶನ ಮಾಡಿ.
  
ಮೀನ : ಉದ್ಯೋಗದಲ್ಲಿ ಉತ್ತಮ ಪ್ರಗತಿ, ಸಹೋದರಿಯರ ಸಹಕಾರ, ಸ್ತ್ರೀಯರಿಗೆ ಬೇಸರದ ದಿನ, ದೇವಸ್ಥಾನ ದರ್ಶನ, ಸಂಗಾತಿಯೊಂದಿಗೆ ಆಪ್ತ ಸಮಾಲೋಚನೆ, ಸಮಾಧಾನದ ದಿನ.
  
ದೋಷ ಪರಿಹಾರ : ದೇವಸ್ಥಾನದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳಿ

ವಾಞ್ಮಯೀ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ