ದೋಷ ಪರಿಹಾರಕ್ಕೆ ವಾಸ್ತು ಟಿಪ್ಸ್....

Published : Jan 07, 2019, 04:41 PM IST
ದೋಷ ಪರಿಹಾರಕ್ಕೆ ವಾಸ್ತು ಟಿಪ್ಸ್....

ಸಾರಾಂಶ

ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು. ಅದಾಗದೇ ಹೋದರೆ ಕೆಲವು ವಸ್ತುಗಳನ್ನು ವಾಸ್ತು ಪ್ರಕಾರ ಇಟ್ಟುಕೊಂಡರೂ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಏನಿದು?

ಮನೆ ವಾಸ್ತು ಪ್ರಕಾರವಿರಬೇಕು. ಇಲ್ಲದಿದ್ದರೆ ಕೆಲವು ಸಣ್ಣ ಪುಟ್ಟ ಮಾರ್ಪಾಟುಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಮನೆ ನಿರ್ಮಾಣ ವಾಸ್ತು ಪ್ರಕಾರ ಇಲ್ಲದಿದ್ದರೂ ಪರ್ವಾಗಿಲ್ಲ, ಮನೆಯಲ್ಲಿ ಸಾಮಗ್ರಿಗಳು ಇಡುವ ಸ್ಥಳ ವಾಸ್ತು ಪ್ರಕಾರವಿದ್ದರೂ ಹಲವು ದೋಷಗಳನ್ನು ಪರಿಹರಿಸಿಕೊಳ್ಳಬಹುದು... ಇಂಥ ದೋಷ ಪರಿಹಾರಕ್ಕೆ ಇಲ್ಲಿವೆ ಸಿಂಪಲ್ ವಾಸ್ತು ಟಿಪ್ಸ್...

ನಿಲ್ಲದಿರಲಿ ಮನೆಯ ಗಡಿಯಾರ

- ತುಳಸಿಯಂತಹ ಆರೋಗ್ಯ ಮತ್ತು ಅಧಾತ್ಮ ಶಕ್ತಿ ಹೊಂದಿರುವ ಗಿಡಗಳನ್ನು ಬೆಳೆಸಿ. ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ಭಾಗದಲ್ಲಿರಲಿ.
- ಅಡುಗೆಮನೆ ಇಲ್ಲವೇ ಒಲೆ ಆಗ್ನೇಯ ಮೂಲೆಯಲ್ಲಿದ್ದರೆ ಒಳ್ಳೆಯದು.
- ಕಿಟಕಿ ಬಾಗಿಲು ಯಾವಾಗಲೂ ಹೊರ ಭಾಗಕ್ಕೆ ತೆರೆಯುವಂತಿರಲಿ. 
- ಪೊರಕೆಯಂಥ ಶುಚಿಗೊಳಿಸುವ ಸಾಧನಗಳನ್ನು ಅಡುಗೆಮನೆಯಲ್ಲಿಡಬಾರದು.
- ಕೊಠಡಿಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್‌ ಬಾಕ್ಸ್‌ ಇಡಬೇಕು. ಅಲ್ಮೇರಾ ಇದ್ದರೆ ಅದರ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು. 
- ಲಿವಿಂಗ್‌ ರೂಮ್‌ನಲ್ಲಿ ಚೌಕ ಅಥವಾ ಆಯತಾಕಾರದ ಪೀಠೋಪಕರಣ ಹಾಕಿದರೊಳಿತು. 
- ಲಿವಿಂಗ್‌ ರೂಮ್‌ಗೆ ನೀಲಿ, ಬಿಳಿ, ಹಳದಿ ಮತ್ತು ಹಸಿರು ಬಣ್ಣ ಅತ್ಯಂತ ಸೂಕ್ತ. ಕಪ್ಪು ಮತ್ತು ಕೆಂಪು ಬಣ್ಣ ಬೇಡ.
- ಮನೆಯೊಳಗೆ ಕ್ಯಾಕ್ಟಸ್‌ನಂಥ ಮುಳ್ಳು ಗಿಡಗಳನ್ನು ದೂರವಿಡಿ.

ಸುಖ ನಿದ್ರಿಗೆ ಇಲ್ಲಿವೆ ವಾಸ್ತು ಟಿಪ್ಸ್... 
 

PREV
click me!

Recommended Stories

ಯಾರೇ ಅಡ್ಡ ಬಂದ್ರೂ ಧೈರ್ಯದಿಂದ ಮುನ್ನುಗ್ಗುವಂತಹ ಶಕ್ತಿಯಿರುವ 5 ರಾಶಿಗಳಿವು
ಡೋರ್ ಮ್ಯಾಟ್ ಮೇಲಿರೋ Welcome ಬದಲಿಸ್ಬಹುದು ನಿಮ್ಮ ಭವಿಷ್ಯ