Maha Shivarathri: ಶಿವರಾತ್ರಿ ವ್ರತದ ಆಚರಣೆ ಏಕೆ, ಹೇಗೆ?

By Kannadaprabha News  |  First Published Mar 1, 2022, 8:40 AM IST

ಕೊರೋನಾ ನಿರ್ಬಂಧಗಳಿಂದ ಶಿವದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಶಿವಲಿಂಗ ಪೂಜೆ ಮಾಡಬಹುದು. ಶಿವಲಿಂಗ ಇಲ್ಲದಿದ್ದರೆ ಶಿವನ ಚಿತ್ರದ ಪೂಜೆ ಮಾಡಬಹುದು. ಇದೂ ಲಭ್ಯವಿಲ್ಲದಿದ್ದರೆ ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆ ಮಾಡಬಹುದು.


ಮಹಾಶಿವರಾತ್ರಿ ದಿನ ಶಿವತತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಶಿವತತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆ ಮಾಡಬೇಕು. ಅದರೊಂದಿಗೆ ‘ಓಂ ನಮಃ ಶಿವಾಯ’ ನಾಮಜಪ ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ’ ನಾಮಜಪ ಮಾಡುವ ಜೀವಕ್ಕೆ ಶಿವನ ಸೂಕ್ಷ್ಮಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.

ವ್ರತ ಏಕೆ ಮಾಡಬೇಕು?

Tap to resize

Latest Videos

undefined

ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ವದ ಕಾರ್ಯ ನಿಂತುಹೋಗುತ್ತದೆ; ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ವವನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ವಿಶ್ವದಲ್ಲಿ ತಮೋಗುಣ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತ ಕೈಗೊಂಡು ಶಿವತತ್ವವನ್ನು ಆಕರ್ಷಿಸಬೇಕು.

ಶಿವರಾತ್ರಿ ವಿಶೇಷತೆ ಏನು? ಪುರಾಣದ ಕತೆ!

ವ್ರತದ ವಿಧಿವಿಧಾನ

ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪ ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸೊತ್ರೕಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನ ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆ ಮಾಡಿ ಭವಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ 108 ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅಘ್ರ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

ಯಾಮಪೂಜೆ ಎಂದರೇನು?

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗ ಸ್ನಾನ ಮಾಡಿಸಬೇಕು. ಅನುಲೇಪನ ಮಾಡಿ ಧೋತರ, ಮಾವು ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ 26 ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ 108 ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅಘ್ರ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆ ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣ ಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು. 12, 14 ಅಥವಾ 24 ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ)ಯನ್ನು ಮಾಡಬೇಕು.

ಆಪತ್ಕಾಲದಲ್ಲಿ ಆಚರಣೆ ಹೇಗೆ?

ಮಹಾಶಿವರಾತ್ರಿಯನ್ನು ಎಲ್ಲೆಡೆ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾಘ ಕೃಷ್ಣ ಪಕ್ಷ ಚತುರ್ದಶಿ ತಿಥಿಗೆ ಬರುವ ಮಹಾಶಿವರಾತ್ರಿಯಂದು ಶಿವನ ವ್ರತವನ್ನು ಮಾಡುತ್ತಾರೆ. ಉಪವಾಸ, ಪೂಜೆ ಮತ್ತು ಜಾಗರಣೆ ಇವು ಮಹಾಶಿವರಾತ್ರಿ ವ್ರತದ ಮೂರು ಅಂಗಗಳಾಗಿವೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಈ ವ್ರತವನ್ನು ಎಂದಿನಂತೆ ಆಚರಿಸಲು ಕೆಲವೊಂದು ನಿರ್ಬಂಧಗಳಿರಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು, ಮಹಾಶಿವರಾತ್ರಿಯಂದು ಶಿವತತ್ವದ ಲಾಭವನ್ನು ಪಡೆದುಕೊಳ್ಳಲು ಯಾವ ಕೃತಿಯನ್ನು ಮಾಡಬೇಕು, ಈ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

Mahashivaratri 2022: ಶಿವ ಪೂಜೆಯ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕಾದ 18 ನಿಯಮಗಳಿವು

ಶಿವಪೂಜೆಯ ಪರ್ಯಾಯ

ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳಿಂದ ಯಾರಿಗೆ ಮಹಾಶಿವರಾತ್ರಿಯಂದು ಶಿವದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಅವರು ತಮ್ಮ ಮನೆಯಲ್ಲಿಯೇ ಶಿವಲಿಂಗದ ಪೂಜೆಯನ್ನು ಮಾಡಬೇಕು. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದಲ್ಲಿ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು. ಶಿವನ ಚಿತ್ರ ಕೂಡ ಲಭ್ಯವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು. ಇದರಲ್ಲಿ ಯಾವುದೂ ಸಾಧ್ಯವಿಲ್ಲದಿದ್ದರೆ ಶಿವನ ‘ಓಂ ನಮಃ ಶಿವಾಯ’ ಎಂಬ ನಾಮಮಂತ್ರವನ್ನು ಬರೆದು ಅದನ್ನು ಪೂಜಿಸಬಹುದು. ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜೆ ಮಾಡಲು ಇಚ್ಛಿಸುವವರೂ ಈ ರೀತಿ ಮಾಡಬಹುದು.

ಶಿವನ ಮಾನಸ ಪೂಜೆ

ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ. ಇದು ಅಧ್ಯಾತ್ಮದ ಒಂದು ಮಹತ್ವದ ಸಿದ್ಧಾಂತವಾಗಿದೆ. ಅದರಂತೆ ಸ್ಥೂಲವಿಷಯಗಳಿಗಿಂತ ಸೂಕ್ಷ್ಮ ವಿಷಯದಲ್ಲಿ ಅಧಿಕ ಸಾಮರ್ಥ್ಯವಿರುತ್ತದೆ. ಜೊತೆಗೆ ಸಾಧ್ಯವಿದ್ದಷ್ಟುಓಂ ನಮಃ ಶಿವಾಯ ಈ ನಾಮವನ್ನು ಜಪಿಸಿ. ಕಲಿಯುಗದಲ್ಲಿ ನಾಮಸ್ಮರಣೆಯೇ ಶ್ರೇಷ್ಠ ಸಾಧನೆಯೆಂದು ಹೇಳಲಾಗಿದೆ. ಮಹಾಶಿವರಾತ್ರಿಯಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗುವ ಶಿವತತ್ವದಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆದುಕೊಳ್ಳಲು ‘ಓಂ ನಮಃ ಶಿವಾಯ’ ಈ ನಾಮಜಪವನ್ನು ಎಷ್ಟುಸಾಧ್ಯವಿದೆಯೋ ಅಷ್ಟುಅಧಿಕ ಮಾಡಬೇಕು. ಆ ಸಮಯದಲ್ಲಿ ನಾವು ಶಿವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಿದ್ದೇವೆ ಎಂದು ಭಾವವನ್ನು ಇಟ್ಟುಕೊಳ್ಳಬೇಕು. ಶಿವತತ್ವ ಗ್ರಹಣವಾಗಲು ನಾವು ಆ ದಿನದಂದು ಮನೆಯ ಬಾಗಿಲಿನ ಎದುರಿಗೆ ಶಿವತತ್ವವನ್ನು ಆಕರ್ಷಿಸುವ ರಂಗೋಲಿ ಬಿಡಿಸಬೇಕು.

Mahashivaratri 2022: ಈ ದಿನ ನಡೆಯಲಿದೆ ಪವಾಡ, ಪಂಚಗ್ರಾಹಿ ಯೋಗದಿಂದ ಬದಲಾಗಲಿದೆ ಕೆಲ ರಾಶಿಯವರ ಅದೃಷ್ಟ

ಶಿವನನ್ನು ಪ್ರಾರ್ಥಿಸೋಣ

ಪ್ರಸ್ತುತ ಎಲ್ಲೆಡೆ ಕೊರೋನಾ ಭಯ ಆವರಿಸಿದೆ. ಜಗತ್ತಿನಾದ್ಯಂತ ಅನೇಕ ಕಡೆ ನೈಸರ್ಗಿಕ ವಿಕೋಪಗಳಾಗುತ್ತಿವೆ. ಗಡಿ ಪ್ರದೇಶಗಳಲ್ಲಿ ಸ್ಥಿತಿ ಉದ್ವಿಗ್ನವಾಗಿದೆ. ಈ ಘಟನೆಗಳು ಆಪತ್ಕಾಲದ ಸಂಕೇತಗಳಾಗಿವೆ. ಅನೇಕ ಸಂತರು ಮತ್ತು ಭವಿಷ್ಯಕಾರರು ಹೇಳಿದಂತೆ ಆಪತ್ಕಾಲ ಆರಂಭವಾಗಿದೆ. ಆಪತ್ಕಾಲದಿಂದ ಪಾರಾಗಲು ಸಾಧನೆಯ ಬಲ ಅವಶ್ಯಕವಾಗಿದೆ. ಅದಕ್ಕಾಗಿ ಎಂದಿನಂತೆ ವ್ರತ ಮಾಡಲು ಮಿತಿ ಇದ್ದರೆ, ಅದರಿಂದ ಬೇಸರ ಪಡದೆ ಹೆಚ್ಚೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸಿ. ಶಿವರಾತ್ರಿ ನಿಮಿತ್ತ ಭಗವಾನ್‌ ಶಿವನಲ್ಲಿ ಶರಣಾಗಿ ಪ್ರಾರ್ಥಿಸೊಣ. ‘ಹೇ ಶಿವಶಂಕರಾ, ಸಾಧನೆ ಮಾಡಲು ನಮಗೆ ಶಕ್ತಿ, ಬುದ್ಧಿ ಹಾಗೂ ಪ್ರೇರಣೆ ನೀಡು. ನಮ್ಮ ಸಾಧನೆಯಲ್ಲಿ ಬರುವ ಅಡಚಣೆಗಳನ್ನು ಲಯವಾಗಿಸು’ ಎಂದು ಶರಣಾಗತ ಭಾವದಿಂದ ಪ್ರಾರ್ಥನೆ ಮಾಡೋಣ.

- ವಿನೋದ್‌ ಕಾಮತ್‌ , ಸನಾತನ ಸಂಸ್ಥೆ

click me!