ಮುಖ್ಯಮಂತ್ರಿ ಇಳಿಯೋ ಮಾತು ನಿಜವಾಯ್ತು, ಇಬ್ಭಾಗವಾಗತ್ತಾ ಕಾಂಗ್ರೆಸ್​? ಡಿಕೆಶಿ 8 ವರ್ಷ ಸಿಎಂ?

Published : May 27, 2026, 03:47 PM IST
Karnataka Politics

ಸಾರಾಂಶ

ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿದ್ದರಾಮಯ್ಯನವರ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ರಾಜಕೀಯ ಪಲ್ಲಟವು ಈ ಹಿಂದೆ ಜ್ಯೋತಿಷಿಗಳಾದ ಪ್ರಶಾಂತ್ ಕಿಣಿ ಮತ್ತು ಬಿ.ಬಿ.ಆರಾಧ್ಯ ಅವರು ನುಡಿದಿದ್ದ ಭವಿಷ್ಯವಾಣಿಗಳೊಂದಿಗೆ ತಾಳೆಯಾಗುತ್ತಿದ್ದು, ಅವರ ಮಾತುಗಳು ಇದೀಗ ಮತ್ತೆ ಚರ್ಚೆಗೆ ಬಂದಿವೆ.

ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ರಾಜ್ಯದ ರಾಜಕೀಯದ ತೊಳಲಾಟಕ್ಕೆ ಸದ್ಯ ಬ್ರೇಕ್​ ಬಿದ್ದಿದೆ. ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಯಿಂದ ಕೆಳಕ್ಕೆ ಇಳಿಸುವಲ್ಲಿ ಹೈಕಮಾಂಡ್​ ಯಶಸ್ವಿಯಾಗಿದ್ದು, ಡಿ.ಕೆ.ಶಿವಕುಮಾರ್​ ಅವರನ್ನು ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮ್ಯನವರು ಕೆಳಕ್ಕೆ ಇಳಿದರೆ, ನಾನು ಮುಖ್ಯಮಂತ್ರಿಯಾಗುವೆ ಎಂದು ಸ್ಪರ್ಧೆಯಲ್ಲಿ ಜಾತಿ, ಧರ್ಮ ಎಂದೆಲ್ಲಾ ಹೇಳಿ ಕೆಲವರು ಪೈಪೋಟಿಗೆ ಇಳಿದಿದ್ದರು. ಅವರಲ್ಲಿ ಕೆಲವರು ಡಿಸಿಎಂ ಆಗುತ್ತಾರೆ ಎನ್ನಲಾಗಿದೆ. ಈ ಮೂಲಕ ರಾಜ್ಯದಲ್ಲಿ ನಾಲ್ವರು ಉಪ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಜ್ಯೋತಿಷಿಗಳ ಮಾತು

ಇವೆಲ್ಲವುಗಳ ನಡುವೆಯೇ, ಹಿಂದೆ ಜ್ಯೋತಿಷಿಗಳು ಹೇಳಿರುವ ಒಂದೊಂದೇ ಮಾತುಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಅದರಲ್ಲಿ ಮುಖ್ಯವಾಗಿ ಖ್ಯಾತ ಜ್ಯೋತಿಷಿ ಪ್ರಶಾಂತ್​ ಕಿಣಿ ಅವರು ನುಡಿದ ಭವಿಷ್ಯವೊಂದು ಮತ್ತೆ ವೈರಲ್​ ಆಗುತ್ತಿದೆ. ಅದನ್ನು ಖುದ್ದು ಪ್ರಶಾಂತ್​ ಕಿಣಿ ಅವರೇ ರೀ ಪೋಸ್ಟ್​ ಮಾಡಿದ್ದಾರೆ.

ಸಿದ್ದರಾಮಯ್ಯ ಅಧಿಕಾರ ಹೋಗತ್ತೆ

ಅದರಲ್ಲಿ ಅವರು ಹೇಳಿದ ಒಂದು ಭವಿಷ್ಯ ನಿಜವಾಗಿದೆ. Chief Minister Siddaramaiah will lose his post (ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ) ಎಂದಿದ್ದರು. ಅದೀಗ ನಿಜವಾಗಿದೆ. ಆದರೆ ಅದರಲ್ಲಿಯೇ ಅವರು ಇನ್ನೂ ಎರಡು ವಿಷಯ ಬರೆದಿದ್ದಾರೆ. ಅದೆಂದರೆ, ಕಾಂಗ್ರೆಸ್​ ಇಬ್ಭಾಗವಾಗತ್ತೆ. ಕರ್ನಾಟಕದ ಜನತೆ ಬೆಲೆ ತೆರುತ್ತಾರೆ, ಮೈಸೂರಿಗೆ ಬಹಳ ತೊಂದರೆ ಇದೆ ಎಂದು ಬರೆದಿದ್ದಾರೆ.

ಎಂಟು ವರ್ಷ ಸಿಎಂ

ಇದು ಒಂದೆಡೆಯಾದರೆ 2023ರಲ್ಲಿ ಇನ್ನೋರ್ವ ಜ್ಯೋತಿಷಿ ಬಿ.ಬಿ.ಆರಾಧ್ಯ ಅವರು ನುಡಿದ ಭವಿಷ್ಯವೂ ವೈರಲ್​ ಆಗುತ್ತಿದೆ. ಅದರಲ್ಲಿ ಅವರು, ಡಿಕೆ ಶಿವಕುಮಾರ್ ಜಾತಕದ ಪ್ರಕಾರ ಅವರ ರಾಜಕೀಯ ಭವಿಷ್ಯ ಚೆನ್ನಾಗಿದೆ. ಎರಡು ವರ್ಷಗಳ ಬಳಿಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಎಂಟು ವರ್ಷಗಳ ಕಾಲ ಆಡಳಿತ ನಡೆಸುತ್ತೀರಿ ಅಂತ ಡಿಕೆಶಿಗೆ ಆರಾಧ್ಯ ಹೇಳಿದ್ದರು. ಅವರ ಪ್ರಕಾರ 2025ರ ನಂತರ ಡಿಕೆಶಿ ಅಧಿಕಾರಕ್ಕೆ ಬರುತ್ತಾರೆ ಎಂಬುದಾಗಿತ್ತು.

 

 

PREV
Read more Articles on
click me!

Recommended Stories

ಜೂನ್ 5 ರಂದು ಪಂಚಂಕದೊಂದಿಗೆ ದ್ವಿದ್ವಾದಶ ಯೋಗ, ವೃಷಭ ರಾಶಿ ಸೇರಿದಂತೆ ಈ 5 ರಾಶಿಗೆ ಆದಾಯ ಮತ್ತು ಆರೋಗ್ಯ
ಮದುವೆಯ ನಂತರ ಈ ಸಂಖ್ಯೆಯನ್ನು ಹೊಂದಿರುವ ಜನರ ಅದೃಷ್ಟ ಇದ್ದಕ್ಕಿದ್ದಂತೆ ಬದಲಾಗುತ್ತದೆ