Polala Amavasya 2026: ಮಹತ್ವದ ಶುಕ್ರವಾರ ಅಮಾವಾಸ್ಯೆ, ನಡುರಾತ್ರಿ ಈ ಕೆಲಸ ಮಾಡಿದರೆ ನೀವೇ ಕೋಟ್ಯಾಧಿಪತಿ!

Published : Sep 09, 2026, 11:13 AM IST
New Moon Day

ಸಾರಾಂಶ

ಶ್ರಾವಣ ಮಾಸದಲ್ಲಿ ಬರುವ ಪೋಲಾಲ ಅಮಾವಾಸ್ಯೆಯು ವಿಶೇಷ ಮಹತ್ವವನ್ನು ಹೊಂದಿದೆ. ಈ ಅಮಾವಾಸ್ಯೆಯ ನಡುರಾತ್ರಿ ಮನೆಯ ಮುಖ್ಯದ್ವಾರದ ಬಳಿ ಎಳ್ಳಿನ ದೀಪವನ್ನು ಹಚ್ಚುವುದು, ಲಕ್ಷ್ಮೀ ಸ್ತೋತ್ರ ಪಠಿಸುವುದು ಮತ್ತು ದಾನ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಶ್ರಾವಣ ಮಾಸ ಮುಗಿಯುತ್ತಾ ಬಂದಿದೆ. ಈ ಸಮಯದಲ್ಲಿ ಬರುವ ಅಮಾವಾಸ್ಯೆಯನ್ನು ಪೋಲಾಲ ಅಮಾವಾಸ್ಯೆ (ಕೃಷ್ಣ ಪಕ್ಷದ ಕೊನೆಯ ದಿನ) ಎಂದು ಕರೆಯುತ್ತಾರೆ. ಇದು ಬಹಳ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಅಮಾವಾಸ್ಯೆಯಾಗಿದೆ. ಆದರೆ ಈ ಅಮಾವ್ಯಾಸೆ ಶುಕ್ರವಾರ ಬಂದಿದ್ದು, ಈ ದಿನ ಕೆಲವು ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.

ಪೋಲಾಲ ಅಮಾವಾಸ್ಯೆ

ಸೆಪ್ಟೆಂಬರ್ 11ರಂದು ಪೋಲಾಲ ಅಮಾವಾಸ್ಯೆ. ಇದು ಅಮಾವಾಸ್ಯ ತಿಥಿ ಪ್ರಾರಂಭ, ಸೆಪ್ಟೆಂಬರ್ 10, 2026ರ ಗುರುವಾರ ಬೆಳಗ್ಗೆ 10:33ಕ್ಕೆ ಆರಂಭವಾಗಿ, ಸೆಪ್ಟೆಂಬರ್ 11, 2026 ಶುಕ್ರವಾರ ಬೆಳಗ್ಗೆ 8:56ಕ್ಕೆ ಅಂತ್ಯವಾಗಲಿದೆ. ಇದು ಬಹಳ ಶಕ್ತಿಯುವ ಅಮಾವ್ಯಾಸೆಯಾಗಿದೆ. ಆದರೆ ಈ ಅಮಾವಾಸ್ಯೆ ದಿನ ನಡುರಾತ್ರಿ ಕೆಲವು ಕೆಲಸ ಮಾಡಿದರೆ ನಿಮಗೆ ಲಕ್ಷ್ಮೀದೇವಿ ಅನುಗ್ರಹ ಆಗಿ, ಶ್ರೀಮಂತರಾಗುತ್ತೀರಿ ಎಂದು ಪಂಡಿತರು ಹೇಳುತ್ತಾರೆ. ಅವು ಏನು ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಅಮಾವಾಸ್ಯೆ ದಿನ ಲಕ್ಷ್ಮೀ ಪೂಜೆ, ಪಿತೃ ತರ್ಪಣೆಯಂತಹ ಕೆಲಸ ಮಾಡಿದರೆ ಶುಭವಾಗಲಿದೆ ಎಂದು ಪಂಡಿಗರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಇರುವ ಪ್ರತಿಕೂಲ ವಾತಾವರಣ ದೂರ ಆಗಲಿದೆ. ಮನೆಯ ಆರ್ಥಿಕ ಸಮಸ್ಯೆಗಳು ದೂರ ಆಗಲಿದೆ. ಅನಾರೋಗ್ಯ ಸಮಸ್ಯೆಗಳಿಂದ ದೂರ ಆಗಬಹುದು ಎಂದು ಪಂಡಿತರು ಹೇಳುತ್ತಾರೆ.

ಅದೃಷ್ಟ ಬದಲಿಸುವ ನಿಗೂಢ ರಾತ್ರಿ!

ಈ ಪೋಲಾಲ ಅಮಾವಾಸ್ಯೆ ಆರ್ಥರಾತ್ರಿ ಸಮಯದಲ್ಲಿ 12 ಗಂಟೆಯಿಂದ ಮನೆಯ ಮುಖ್ಯದ್ವಾರದ ಎದುರು ಎಳ್ಳಿನ ದೀಪ ಹಚ್ಚುವುದರಿಂದ ಲಕ್ಷ್ಮಿದೇವಿ ಕೃಪೆ ಸಿಗಲಿದೆ. ಯಾರಿಗಾದರೂ ನರದೃಷ್ಟಿ ಆಗಿದ್ದರೆ, ಯಾರಿಗೆ ಆರ್ಥಿಕ ಸಮಸ್ಯೆಗಳು ಇದೆಯೋ, ಇವುಗಳಿಂದ ದೂರ ಆಗಲು. ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ದೀಪ ಹಚ್ಚುವುದು ಬಹಳ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ನಿಮಗೆ ರಾತ್ರಿ ವೇಳೆ ಪೂಜೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಬೆಳಗ್ಗೆ ಎದ್ದು ಸ್ನಾನ ಮಾಡಿ ಭಕ್ತಿಯಿಂದ ಮನೆಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿ. ಕಪ್ಪು ಎಳ್ಳು, ಅನ್ನ, ಬ ಟ್ಟೆ, ಹಾಲು, ಮೊಸರು ಬಡವರಿಗೆ ದಾನ ಮಾಡಿ. ಗೋವು, ಕಾಗೆ, ನಾಯಿಗೆ ಆಹಾರ ನೀಡಿ. ಅರಳಿ ಮರಕ್ಕೆ ನೀರು ಹಾಕಿ ಪ್ರದಕ್ಷಿಣೆ ಮಾಡಿ. ಈ ದಿನ ಹೊಸ ಶುಭ ಕಾರ್ಯಗಳನ್ನು ಪ್ರಾರಂಭಿಸಬೇಡಿ. ಮಾಂಸಾಹಾರ ಸೇವನೆ ತಪ್ಪಿಸಿ, ಪಂಚಾಂಗ ನೋಡಿ ಶುಭ ಮುಹೂರ್ತ ತಿಳಿದುಕೊಳ್ಳಿ. ಭಕ್ತಿಯಿಂದ ಮಾಡಿದರೆ ಪಿತೃಗಳ ಆಶೀರ್ವಾದದಿಂದ ಕುಟುಂಬದಲ್ಲಿ ಶಾಂತಿ ದೊರೆಯುತ್ತದೆ ಎಂದು ಪಂಡಿತರು ಸಲಹೆ ನೀಡಿದ್ದಾರೆ.

ಇದೇ ರೀತಿ ಅಮಾವಾಸ್ಯೆ ನಡುರಾತ್ರಿ ಸಮಯದಲ್ಲಿ ಲಕ್ಷ್ಮೀದೇವಿ ಅಷ್ಟೋತ್ತರ, ಕನಕಧಾರಾ ಸ್ತೋತ್ರ ಓದುವುದು, ಬಡವರಿಗೆ ಅನ್ನದಾನ ಮಾಡುವುದು. ಕಪ್ಪು ಎಳ್ಳು ದಾನ ಮಾಡುವುದು. ಕಪ್ಪು ಬಟ್ಟೆ ದಾನ ಮಾಡುವುದರಿಂದ ಅದ್ಭುತ ಫಲಿತಾಂಶ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಪಂಡಿತರು ಹೇಳುತ್ತಾರೆ. ಆದರೆ ಈ ದಿನ ಯಾವುದೇ ಕಾರಣಕ್ಕೂ ನಡುರಾತ್ರಿ ಹೊರಕ್ಕೆ ಹೋಗಬಾರದು. ಏಕೆಂದರೆ ಈ ಸಮಯದಲ್ಲಿ ಪ್ರತಿಕೂಲ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ, ಆದ್ದರಿಂದ ಹಲವು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Disclaimer: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಓದುಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವಿವಿಧ ವಿದ್ವಾಂಸರ ಸಲಹೆಗಳು ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಮಾತ್ರ ಇದನ್ನು ಒದಗಿಸಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಮಾಹಿತಿಯನ್ನು ದೃಢಿಕರಿಸುವುದಿಲ್ಲ.

PREV
Read more Articles on
click me!

Recommended Stories

Guru Peyarchi 2026: ಗುರು ಸಂಚಾರದಿಂದ 4 ರಾಶಿಗಳಿಗೆ ರಾಜಯೋಗ! ಅದೃಷ್ಟ+ಹಣದ ಮಳೆ ಸುರಿಯಲಿದೆ!
ಚಂದ್ರ ಮತ್ತು ಬುಧನಿಂದ ದ್ವಿಗ್ರಹ ಯೋಗ, ಈ ರಾಶಿಗೆ ಕೈತುಂಬಾ ಹಣ, ಐಷಾರಾಮಿ ಜೀವನ..!