ಹೊಸ ಪೊರಕೆ ಖರೀದಿಸುವುದಾದರೆ ಯಾವ ದಿನ ಬೆಸ್ಟ್?

By Web DeskFirst Published 23, Aug 2018, 1:38 PM IST
Highlights

ಮನೆ ಕ್ಲೀನ್ ಇದ್ದರೆ ಮನಸ್ಸೂ ಶಾಂತವಾಗಿರುತ್ತದೆ. ಆದರೆ, ಮನೆಯನ್ನು ಸ್ವಚ್ಛಗೊಳಿಸುವ ಹಿಡಿ ಬಗ್ಗೆಯೂ ಹೆಚ್ಚಿನ ಗಮನ ನೀಡುವುದು ಮುಖ್ಯ. ಅರದ ತುಂಬಾ ಕಸ, ಕೂದಲು ಸಿಕ್ಕಿ ಹಾಕಿಕೊಂಡರೆ ಮನೆಯನ್ನು ಸ್ವಚ್ಛವಾಗಿ ಇಡೋದಾದ್ರೂ ಹೇಗೆ? ಇಲ್ಲಿವೆಗೆ ಹಿಡಿಗೆ ಕೆಲವು ವಾಸ್ತು ಟಿಪ್ಸ್...

ಧಾರ್ಮಿಕ ಗ್ರಂಥಗಳಲ್ಲಿ ಹಾಗು ಪುರಾಣಗಳಲ್ಲಿ ಪೊರಕೆಗೆ ಮಹತ್ವದ ಸ್ಥಾನವಿದೆ. ಪೊರಕೆಯನ್ನು ಲಕ್ಷ್ಮಿಯ ಪ್ರತೀಕ ಎಂದೇ ಪರಿಗಣಿಸಲಾಗುತ್ತದೆ. ಆದರೆ ಹಿಡಿ ಎಂದು ಅದನ್ನು ನಿರ್ಲಕ್ಷಿಸಿದರೆ ಸಮಸ್ಯೆ ನಮ್ಮನ್ನು ಕಾಡೋದು ಗ್ಯಾರಂಟಿ. ಇದನ್ನು ಹೇಗಾಯ್ತೋ ಹಾಗಿಟ್ಟರೆ, ದರಿದ್ರ ಕಾಡೋದು ಗ್ಯಾರಂಟಿ.

ಗುಡಿಸುವುದರಿಂದ ಹಿಡಿದು ಪೊರಕೆಯನ್ನು ಇಡುವ ಜಾಗದವರೆದೂ ಕೆಲವು ವಿಷಯಗಳನ್ನು ಗಮನಿಸುವುದು ಮುಖ್ಯ... 
- ಮನೆ ಅಥವಾ ಕಚೇರಿಯಲ್ಲಿ ಪೊರಕೆಯನ್ನು ಕಣ್ಣಿಗೆ ಕಾಣದ ಜಾಗದಲ್ಲಿ ಇಡಿ. 
- ಕೆಲವು ಜಾಗದಲ್ಲಿ ಪೊರಕೆ ಇಟ್ಟರೆ ಮನೆಯ ಸಕಾರಾತ್ಮಕ ಶಕ್ತಿ ಕುಂದುತ್ತದೆ.
- ತುಂಡಾದ ಪೊರಕೆ ಬಳಸಿದರೆ, ಮನೆಯಲ್ಲಿ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತವೆ. 
- ಪೊರಕೆಯನ್ನು ಯಾವತ್ತೂ ನೇರವಾಗಿ ನಿಲ್ಲಿಸಬೇಡಿ. ನೇರವಾಗಿಟ್ಟ ಪೊರಕೆ ಅಪಶಕುನಕ್ಕೆ ಕಾರಣವಾಗುತ್ತದೆ. 
- ಸಂಜೆ ಸಮಯದಲ್ಲಿ ಮನೆಯನ್ನು ಗುಡಿಸುವುದು ವಾಸ್ತು ಪ್ರಕಾರ ಉತ್ತಮವಲ್ಲ. ಇದರಿಂದ ಲಕ್ಷ್ಮಿ ಮನೆ ಬಿಟ್ಟು ಹೋಗಬಹುದು.
- ಸಾಧ್ಯವಾದರೆ ಪೊರಕೆಯನ್ನು ಪಶ್ಚಿಮ ದಿಕ್ಕಿನಲ್ಲಿರುವ ಮೂಲೆಯಲ್ಲಿಡಿ. ಪೊರಕೆಯಿಂದ ಸೃಷ್ಟಿಯಾಗೋ ನೆಗಟಿವ್ ಎನರ್ಜಿ ಹೆಚ್ಚೋಲ್ಲ. 
- ಹೊಸ ಪೊರಕೆ ಖರೀದಿಸುವುದಾದರೆ ಶನಿವಾರ ಖರೀದಿಸಿ. 
- ಪೊರಕೆಯನ್ನು ತೊಳೆಯುವುದಾದರೆ ಅದನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. 
- ಪೊರಕೆಯಲ್ಲಿ ಸಿಕ್ಕಿರುವ ಕೂದಲು, ಕಸವನ್ನು ತೆಗೆಯುತ್ತಿರಬೇಕು. ಪೊರಕೆಯೇ ಕೊಳೆಯಾದರೆ ಮನೆ ಕ್ಲೀನ್ ಆಗೋದಿಲ್ಲ.

ವಾಸ್ತು ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Last Updated 12, Dec 2018, 1:21 PM IST